December 26, 2024

Newsnap Kannada

The World at your finger tips!

, suicide , mother , crime

ಮಂಡ್ಯ -‘ಆಸ್ತಿ ವಿಚಾರ’ವಾಗಿ ಮಗನಿಂದಲೇ ‘ತಂದೆ’ಯ ಹತ್ಯೆ

Spread the love

ಮಂಡ್ಯ: ಆಸ್ತಿ ವಿಚಾರವಾಗಿ ಉಂಟಾದಂತ ಜಗಳದಲ್ಲಿ ತಂದೆಯನ್ನೇ ಮಗ ಬರ್ಬರವಾಗಿ ಹತ್ಯೆಗೈದಿರುವ ಘಟನೆ ಜಿಲ್ಲೆಯ ಸುಂಡಳ್ಳಿ ಗ್ರಾಮದಲ್ಲಿ ನಡೆದಿದೆ.

ನಂಜಪ್ಪ(65) ಹಾಗೂ ಪುತ್ರ ಮಹದೇವ್ ನಡುವೆ ಆಸ್ತಿ ವಿಚಾರವಾಗಿ ಗಲಾಟೆ ನಡೆದಿದ್ದು , ತಂದೆಯನ್ನು ಭೀಕರವಾಗಿ ಹತ್ಯೆಗೈದಿರುವುದಾಗಿ ತಿಳಿದು ಬಂದಿದೆ.

ಇಂದು ಬೆಳಗ್ಗೆ ಆಸ್ತಿ ಕೊಡಲಿಲ್ಲವೆಂದು ಆಕ್ರೋಶಗೊಂಡಿದ್ದಂತ ಮಹದೇವಪ್ಪ ರಸ್ತೆಯಲ್ಲಿ ಒಡಾಡಿಸಿಕೊಂಡು ನಂಜಪ್ಪ ಅವರನ್ನು ಹಲ್ಲೆ ಮಾಡಿ , ಗಲಾಟೆಯ ವೇಳೆಯಲ್ಲಿ ಅಡ್ಡಬಂದ ತಾಯಿ ಮಹದೇವಮ್ಮಳಿಗೂ ಗಾಯವಾಗಿದೆ.ರಾಜ್ಯದಲ್ಲಿ ‘ಕನ್ನಡ ನಾಮಫಲಕ ‘ ಕಾನೂನು ರಾಜ್ಯಪಾಲರ ಒಪ್ಪಿಗೆಯೊಂದಿಗೆ ಜಾರಿ

ಮಗ ಮಹದೇವ ಹತ್ಯೆಯ ಬಳಿಕ ಪರಾರಿ ಆಗಿದ್ದು , ಮಂಡ್ಯ ಗ್ರಾಮಾಂತರ ಠಾಣೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!