January 29, 2026

Newsnap Kannada

The World at your finger tips!

dasara,mysore,heritage city

Dasara 2022- This time gold pass canceled: Minister Somashekhar ನಾಡಹಬ್ಬ ದಸರಾ - 2022 ಈ ಬಾರಿ ಗೋಲ್ಡ್‌ ಪಾಸ್‌ ರದ್ದು: ಸಚಿವ ಸೋಮಶೇಖರ್‌ ಸ್ಪಷ್ಟನೆ

ಬೊಮ್ಮಾಯಿ ಸರ್ಕಾರದಲ್ಲಿ ಜನರಿಗೆ ನೆಮ್ಮದಿ: ಸಚಿವ ಸೋಮಶೇಖರ್

Spread the love

ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಅಧಿಕಾರ ತೆಗೆದುಕೊಂಡ ನಂತರ ರಾಜ್ಯದ ಜನರಿಗೆ ಒಳ್ಳೆಯ ಸಂದೇಶ ಹೋಗಿದೆ. ಒಂದು ಮುಕ್ಕಾಲು ವರ್ಷ ರಾಜ್ಯದ ಜನರು ನೆಮ್ಮದಿಯಿಂದ ಇರಬಹುದು ಎಂದು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಇಂದು ಹೇಳಿದರು.


ಶಿರಸಿಯಲ್ಲಿ ಕೆಡಿಸಿಸಿ ಬ್ಯಾಂಕಿನ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಸಚಿವರು ಮಾತನಾಡಿದರು. ಬೊಮ್ಮಾಯಿಯವರು ತಾಳ್ಮೆಯಿಂದ ಒಳ್ಳೊಳ್ಳೆ ಕಾರ್ಯಕ್ರಮ ಕೊಡುತ್ತಾರೆ ಎಂಬ ಸಂದೇಶ ಜನತೆಗೆ ಹೋಗಿದೆ ಎಂದರು.


ಬೆಲೆ ಹೆಚ್ಚಳ ಸಂಬAಧ ಮುಖ್ಯಮಂತ್ರಿಗಳು 7 ರಂದು ದೆಹಲಿಗೆ ಹೋಗುತ್ತಾರೆ. ಪ್ರಧಾನಿ ಮೋದಿ ಮತ್ತು ಸಂಬಂಧಪಟ್ಟ ಸಚಿವರೊಂದಿಗೆ ಚರ್ಚಿಸುವರು ಎಂದು ಸಹಕಾರ ಸಚಿವರು ತಿಳಿಸಿದರು.


ಸಚಿವ ಸ್ಥಾನ ಸಿಗದಿದ್ದಕ್ಕೆ ಬೇಜಾರುಮಾಡಿಕೊಂಡಿದ್ದ ಶಿವರಾಂ ಹೆಬ್ಬಾರ್ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಉರುಳಿಸಲು ಸಹಕಾರ ಕೋರಿದ್ದರು. ತಾವು, ಭೈರತಿ ಬಸವರಾಜ್ ಸೇರಿ ಎಲ್ಲರೂ ಅವರೊಂದಿಗೆ ಕೈಜೋಡಿಸಿದೆವು ಎಂಬ ಹಳೆಯ ಘಟನೆಯನ್ನು ಸೋಮಶೇಖರ್ ನೆನಪಿಸಿಕೊಂಡರು. ನಾವೆಲ್ಲ ಬೇಡದ ಖಾತೆ ಪಡೆದು ಒಳ್ಳೆಯ ಕೆಲಸ ಮಾಡುತ್ತಿದ್ದೇವೆ ಎಂಬುದನ್ನು ಸಣ್ಣ ಅಪಸ್ವರದ ಧ್ವನಿಯಲ್ಲಿ ಹೊರಹಾಕಿದರು.

error: Content is protected !!