ಎಸ್.ಎನ್ ಕುಮಾರ್ (39) ಮೃತ ನಿವೃತ್ತ ಯೋಧ. ತಂದೆ ಜೊತೆ ಬೈಕ್‍ನಲ್ಲಿ ತೆರಳುತ್ತಿದ್ದಾಗ ಸಾತನೂರಿನಿಂದ ಮಂಡ್ಯಕ್ಕೆ ಬರುತ್ತಿದ್ದ ವೇಳೆ ಕಾರೆಮನೆ ಗೇಟ್ ಬಳಿ ರಸ್ತೆ ಗುಂಡಿ ತಪ್ಪಿಸಲು ಹೋಗಿ ಅವಘಡ ಸಂಭವಿಸಿದೆ.ಒಕ್ಕಲಿಗರ ಮತಗಳು ಬಿಜೆಪಿಗೆ: ಆತಂಕ ಹೆಚ್ಚಿಸಿಕೊಂಡಿರುವ ಹೆಚ್ ಡಿ ಕೆ – ಸಿ.ಪಿ.ಯೋಗೇಶ್ವರ್
ಗುಂಡಿಯನ್ನು ತಪ್ಪಿಸಲು ಹೋಗಿ ಎದುರಿನಿಂದ ಬಂದ ಬೈಕ್‍ಗೆ ಡಿಕ್ಕಿ ಹೊಡೆದ ಕೆಳಗೆ ಬಿದ್ದ ಕುಮಾರ್ ಗೆ ಹಿಂದಿನಿಂದ ಬಂದ ಲಾರಿ ಕುಮರ್ ತಲೆ ಮೇಲೆ ಹರಿದ ಪರಿಣಾಮ ಸ್ಥಳದಲ್ಲೇ ಸಾವವನ್ನಪ್ಪಿದ್ದಾರೆ. ತಂದೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಸೇನೆಯಲ್ಲಿ ಸೇವೆ ಸಲ್ಲಿಸಿ ಇತ್ತೀಚೆಗೆ ನಿವೃತ್ತರಾಗಿದ್ದ ಕುಮಾರ್, ನಿವೃತ್ತಿ ಬಳಿಕ ಪೊಲೀಸ್ ಪೇದೆಯಾಗಿ ತರಬೇತಿಗೆ ಹೋಗುತ್ತಿದ್ದರು. ನಿನ್ನೆ ಸ್ವಗ್ರಾಮ ಸಾತನೂರು ಗ್ರಾಮಕ್ಕೆ ಕುಮಾರ್ ಬಂದಿದ್ದ ವೇಳೆ ಈ ಘಟನೆ ಜರುಗಿದ್ದು, ಮಂಡ್ಯ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು