January 2, 2025

Newsnap Kannada

The World at your finger tips!

astronomy

2025ರಲ್ಲಿ ಸಂಭವಿಸುವ ಸೂರ್ಯಗ್ರಹಣ ಮತ್ತು ಚಂದ್ರಗ್ರಹಣಗಳ ವಿವರ

Spread the love

2025ರಲ್ಲಿ ಎರಡು ಸೂರ್ಯಗ್ರಹಣಗಳು ಮತ್ತು ಎರಡು ಚಂದ್ರಗ್ರಹಣಗಳು ಸಂಭವಿಸಲಿವೆ. ಆದರೆ ಈ ನಾಲ್ಕು ಗ್ರಹಣಗಳಲ್ಲಿ ಒಂದೇ ಇತರ ಮೂರು ಗ್ರಹಣಗಳು ಭಾರತೀಯರಿಗೆ ಗೋಚರಿಸುವುದಿಲ್ಲ.

ಭಾರತೀಯ ಆಕಾಶವೀಕ್ಷಕರಿಗೆ ಆಧುನಿಕ ತಂತ್ರಜ್ಞಾನ ಮತ್ತು ದೂರದರ್ಶಕಗಳ ಮೂಲಕವೇ ಕೆಲವು ಗ್ರಹಣಗಳನ್ನು ವೀಕ್ಷಿಸುವ ಅವಕಾಶವಿದೆ.

ಗ್ರಹಣಗಳೆಂದರೆ ಏನು?

  • ಸೂರ್ಯಗ್ರಹಣ: ಚಂದ್ರನು ಭೂಮಿಯ ಮೇಲ್ಮೈಯಲ್ಲಿ ನೆರಳು ಬೀರುವುದು, ಸೂರ್ಯನ ಬೆಳಕನ್ನು ತಲುಪುವುದನ್ನು ತಡೆಯುವುದು. ಇದು ಸಾಮಾನ್ಯವಾಗಿ ಅಮವಾಸ್ಯೆಯ ದಿನದಂದು ಸಂಭವಿಸುತ್ತದೆ.
  • ಚಂದ್ರಗ್ರಹಣ: ಭೂಮಿಯು ಸೂರ್ಯ ಮತ್ತು ಚಂದ್ರನ ನಡುವೆ ಹಾದುಹೋಗುವ ಸಮಯದಲ್ಲಿ, ಚಂದ್ರನ ಮೇಲೆ ಭೂಮಿಯ ನೆರಳು ಬೀಳುವುದು. ಇದು ಹುಣ್ಣಿಮೆಯ ದಿನದಂದು ಸಂಭವಿಸುತ್ತದೆ.

2025ರಲ್ಲಿ ಸೂರ್ಯ ಮತ್ತು ಚಂದ್ರಗ್ರಹಣಗಳ ತಾರೀಖುಗಳು

ಇದನ್ನು ಓದಿ –ನೋಂದಾಯಿತ ಕಾರ್ಮಿಕರ ಕುಟುಂಬಗಳಿಗೆ: ‘ಕುಟುಂಬ ಪಿಂಚಣಿ’ಗಾಗಿ ಅರ್ಜಿ ಆಹ್ವಾನ

  1. ಸಂಪೂರ್ಣ ಚಂದ್ರಗ್ರಹಣ – ಮಾರ್ಚ್ 13-14, 2025
    2025ರ ಮೊದಲ ಗ್ರಹಣ ಸಂಪೂರ್ಣ ಚಂದ್ರಗ್ರಹಣವಾಗಿದ್ದು, ಚಂದ್ರನು ಭೂಮಿಯ ನೆರಳಿನಿಂದ ಸಂಪೂರ್ಣವಾಗಿ ಆವೃತವಾಗಿರುತ್ತಾನೆ. “ಬ್ಲಡ್ ಮೂನ್” ಎಂದು ಕರೆಯಲ್ಪಡುವ ಈ ದೃಷ್ಯವು ಯುರೋಪ್, ಏಷ್ಯಾ, ಆಸ್ಟ್ರೇಲಿಯಾ, ಆಫ್ರಿಕಾ ಮತ್ತು ಅಮೆರಿಕದ ಹಲವೆಡೆ ಗೋಚರಿಸುತ್ತದೆ. ಆದರೆ ಇದು ಭಾರತದಲ್ಲಿ ಗೋಚರಿಸುವುದಿಲ್ಲ.
  2. ಭಾಗಶಃ ಸೂರ್ಯಗ್ರಹಣ – ಮಾರ್ಚ್ 29, 2025
    2025ರ ಮೊದಲ ಭಾಗಶಃ ಸೂರ್ಯಗ್ರಹಣದಲ್ಲಿ, ಚಂದ್ರನು ಸೂರ್ಯನ ಒಂದು ಭಾಗವನ್ನು ಮಾತ್ರ ಮರೆಮಾಡುತ್ತಾನೆ. ಯುರೋಪ್, ಉತ್ತರ ಏಷ್ಯಾ, ಉತ್ತರ/ಪಶ್ಚಿಮ ಆಫ್ರಿಕಾ, ಉತ್ತರ ಮತ್ತು ದಕ್ಷಿಣ ಅಮೆರಿಕಾದ ಕೆಲವು ಭಾಗಗಳಲ್ಲಿ ಈ ಗ್ರಹಣವನ್ನು ವೀಕ್ಷಿಸಲು ಸಾಧ್ಯವಾಗುತ್ತದೆ. ಆದರೆ, ಭಾರತದಲ್ಲಿ ಇದು ಗೋಚರಿಸುವುದಿಲ್ಲ.
  3. ಸಂಪೂರ್ಣ ಚಂದ್ರಗ್ರಹಣ – ಸೆಪ್ಟೆಂಬರ್ 7-8, 2025
    2025ರ ಎರಡನೇ ಸಂಪೂರ್ಣ ಚಂದ್ರಗ್ರಹಣ ಭಾರತದಲ್ಲಿ ಗೋಚರಿಸುವ ಪ್ರಮುಖವಾದ ಗ್ರಹಣವಾಗಿದೆ. ಯುರೋಪ್, ಏಷ್ಯಾ, ಆಸ್ಟ್ರೇಲಿಯಾ, ಆಫ್ರಿಕಾ, ಅಮೆರಿಕ ಮತ್ತು ಹಿಂದೂ ಮಹಾಸಾಗರ ಪ್ರದೇಶಗಳಲ್ಲಿ ಈ ದೃಷ್ಯ ಗೋಚರಿಸಲಿದೆ. “ಬ್ಲಡ್ ಮೂನ್” ಆಗಿ ಕಾಣುವ ಚಂದ್ರನ ನೋಟವು ಭಾರತೀಯರಿಗೆ ವಿಶೇಷವಾದ ಅನುಭವ ನೀಡಲಿದೆ.
  4. ಭಾಗಶಃ ಸೂರ್ಯಗ್ರಹಣ – ಸೆಪ್ಟೆಂಬರ್ 21, 2025
    ಈ ಗ್ರಹಣವನ್ನು ಅಂಟಾರ್ಟಿಕಾ, ಪೆಸಿಫಿಕ್, ಅಟ್ಲಾಂಟಿಕ್ ಮತ್ತು ದಕ್ಷಿಣ ಆಸ್ಟ್ರೇಲಿಯಾದ ಜನರು ವೀಕ್ಷಿಸಬಹುದು. ಆದರೆ, ಭಾರತದ ವೀಕ್ಷಕರಿಗೆ ಈ ಗ್ರಹಣ ಗೋಚರಿಸುವುದಿಲ್ಲ.
Copyright © All rights reserved Newsnap | Newsever by AF themes.
error: Content is protected !!