November 15, 2024

Newsnap Kannada

The World at your finger tips!

94ea2e23 047c 451d a706 3442ede58461

ಸಾಮಾಜಿಕ ಜಾಲತಾಣಕ್ಕೆ ದಾಸ್ಯದಿಂದ ದೂರ ಇರಿ- ಮೊಬೈಲ್ ಬಳಕೆ ಬಗ್ಗೆ ಎಚ್ಚರಿಕೆ- ಕೆ. ಸಿ. ಚನ್ನಕೃಷ್ಣಯ್ಯ

Spread the love

ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣಗಳ ದಾಸ್ಯಕ್ಕೆ ಒಳಗಾಗದೇ, ಅವುಗಳಿಂದ ದೂರ ಇರಬೇಕು. ಮೊಬೈಲ್ ಬಳಕೆಯ ಬಗ್ಗೆಯೂ ಎಚ್ಚರಿಕೆಯಿಂದ ಇರುವಂತೆ ಶಂಕರಗೌಡ ಶಿಕ್ಷಣ ಮಹಾವಿದ್ಯಾಲಯದ ನಿಕಟಪೂರ್ವ ಪ್ರಾಂಶುಪಾಲ ಹಾಗೂ ಹಿರಿಯ ಪ್ರಾಧ್ಯಾಪಕರಾದ ಡಾ. ಕೆ.ಸಿ.ಚನ್ನಕೃಷ್ಣಯ್ಯರವರು ಕರೆ ನೀಡಿದರು.

ಮಂಡ್ಯ ನಗರದ ಪಿಇಎಸ್ ಪ್ರೌಢಶಾಲೆಯಲ್ಲಿ ಎಸ್ಎಸ್ಎಲ್ ಸಿ ಫಲಿತಾಂಶವನ್ನು ಉತ್ತಮ ಪಡಿಸುವ ಸಲುವಾಗಿ ಇಂದು ನಡೆದ ಶಿಕ್ಷಕರ ಶಾಲಾ ವಾಸ್ತವ್ಯ ವಿನೂತನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಏಕೆ ಓದಬೇಕು ಮತ್ತು ಹೇಗೆ ಓದಬೇಕು ಎಂಬುದರ ಬಗ್ಗೆ ಮಕ್ಕಳಿಗೆ ಉದಾಹರಣೆಯ ಮೂಲಕ ಮನವರಿಕೆ ಮಾಡಿಕೊಟ್ಟರು‌.

ಪರೀಕ್ಷೆಗೆ ಇನ್ನೂ 90 ದಿನಗಳು ಉಳಿದಿದ್ದು, ಇಂದಿನಿಂದಲೇ ಶ್ರಮವಹಿಸಿ ಪ್ರತಿದಿನ ಕನಿಷ್ಟ 6 ಗಂಟೆಗಳ ಕಾಲ ಅಭ್ಯಾಸ ಮಾಡಿದರೆ, ಹೆಚ್ಚು ಅಂಕ ಗಳಿಸಿ, ಉತ್ತೀರ್ಣರಾಗಬಹುದು ಎಂದು ಕಿವಿಮಾತು ಹೇಳಿದರು.

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಕರ್ನಾಟಕ ರಾಜ್ಯ ಅನುದಾನಿತ ಶಾಲಾ ಕಾಲೇಜುಗಳ ನೌಕರರ ಸಂಘದ ಮಂಡ್ಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾಗೂ ಶಿಕ್ಷಕ ಶಿವಣ್ಣಮಂಗಲ ಮಾತನಾಡಿ, ಶಾಲಾ ವಾಸ್ತವ್ಯ ಕಾರ್ಯಕ್ರಮವು ಶಿಕ್ಷಣ ಇಲಾಖೆಯ ವಿನೂತನ ಕಾರ್ಯಕ್ರಮವಾಗಿದ್ದು, ಇದು ಮಕ್ಕಳ ಕಲಿಕೆಗೆ ಪ್ರೇರಣಾತ್ಮಕವಾಗಿದ್ದು, ಶಿಕ್ಷಕರು, ಪೋಷಕರು, ಮಕ್ಕಳು ಮತ್ತು ಸಮುದಾಯದ ಒಟ್ಟು ಸಹಕಾರದಿಂದ ಉತ್ತಮ ಫಲಿತಾಂಶ ಪಡೆಯಬಹುದಾಗಿದೆ ಎಂದು ಸಲಹೆ ನೀಡಿದರು

ವಿದ್ಯಾರ್ಥಿಗಳು ಸಮಯದ ಸದುಪಯೋಗ ಮಾಡಿಕೊಂಡು ಏಕಾಗ್ರತೆಯಿಂದ ಕಲಿಕೆಯಲ್ಲಿ ತೊಡಗಿಸಿಕೊಂಡರೆ, ಯಶಸ್ಸು ಸಾಧ್ಯ ಎಂದು ಪ್ರೇರೇಪಣಾ ನುಡಿಗಳನ್ನಾಡಿದರು.

ಮುಖ್ಯಶಿಕ್ಷಕರಾದ ಶ್ರೀಮತಿ ಲತಾರವರು ಸ್ವಾಗತಿಸಿ, ಶಿಕ್ಷಕರಾದ ಟಿ.ಅಶೋಕ್ ರವರು ವಂದಿಸಿದರು. ವೇದಿಕೆಯಲ್ಲಿ ಶಿಕ್ಷಕರಾದ ಮಧುಸೂದನ್, ಮಹೇಶ್, ರವಿಚಂದ್ರ ಉಪಸ್ಥಿತರಿದ್ದರು.

Copyright © All rights reserved Newsnap | Newsever by AF themes.
error: Content is protected !!