ಕಳ್ಳತನ ಮಾಡಲು ಪಕ್ಕಾ ಪ್ಲಾನ್ ಮಾಡಿಕೊಂಡು ದೇಗುಲಕ್ಕೆ ಎಂಟ್ರಿ ಕೊಟ್ಟಿದ್ದ ಇಬ್ಬರು ಕಳ್ಳರು ಸಿಸಿಟಿವಿ ಧ್ವಂಸ ಮಾಡಿ, ಒಳ ನುಸುಳಿ ದೇವಸ್ಥಾನ ಲೂಟಿ ಮಾಡಲು ಮುಂದಾದವರಿಗೆ ಶಾಕ್ ಕಾದಿತ್ತು. ಅಲ್ಲೊಂದು ಪವಾಡ ನಡೆದು ಹೋಗಿತ್ತು.
ಇದು ಮಂಡ್ಯದ ನಾಗಮಂಗಲ ತಾಲ್ಲೂಕು ಹುಳ್ಳೇನಹಳ್ಳಿಯ ಮಾಯಮ್ಮ, ದೈತಮ್ಮ ದೇವಸ್ಥಾನದಲ್ಲಿ ಕಳ್ಳತನಕ್ಕೆ ಇಳಿದಿದ್ದರು.ಜಿಪಂ ತಾಪಂ ಚುನಾವಣೆ- ಸುಪ್ರೀಂನಲ್ಲಿ ಚುನಾವಣಾ ಆಯೋಗ ಅರ್ಜಿ ತಿರಸ್ಕಾರ-ಹೈಕೋರ್ಟ್ ತೀರ್ಮಾನವೇ ಅಂತಿಮ
ತಮ್ಮ ಈ ಕೆಲಸ ಯಾರಿಗೂ ತಿಳಿಯದಂತೆ ದಾರಿಯುದ್ದಕ್ಕೂ ಇದ್ದ ಸಿಸಿ ಟಿವಿ ಕ್ಯಾಮೆರಾಗಳನ್ನು ಧ್ವಂಸ ಮಾಡಿ ಮತ್ತೆ ಸಿಸಿಟಿವಿಗಳ ಕೇಬಲ್ ಕಟ್ ಮಾಡಿದ್ದಾರೆ. ಇನ್ನೇನು ಎಲ್ಲವೂ ಸಲೀಸು ಅನ್ಕೊಂಡ ಕಳ್ಳರು ದೇಗುಲದ ಗರ್ಭಗುಡಿಯತ್ತ ಹೆಜ್ಜೆ ಹಾಕಿದ್ದಾರೆ.
ಮಧ್ಯರಾತ್ರಿ ಸುಮಾರು 2 ಗಂಟೆ.ಕಗ್ಗತ್ತಲಲ್ಲಿ ಸದ್ದಿಲ್ಲದೆ ಅವರಿಬ್ಬರು ಎಂಟ್ರಿ ಕೊಟ್ಟಿದ್ದರು. ಯಾರೂ ಇಲ್ಲದ ಸಮಯದಲ್ಲಿ ದೇವಾಲಯ ಲೂಟಿ ಮಾಡಲು ಪ್ಲಾನ್ ಮಾಡಿದ್ದ ಖದೀಮರಿಬ್ಬರಿಗೆ ದೇವಸ್ಥಾನದ ಕಾವಲುಗಾರನಾದ ನಾಗರಾಜ ಶಾಕ್ ಕೊಟ್ಟಿದ್ದಾನೆ.
ದೇಗುಲದ ಗರ್ಭ ಗುಡಿ ಬಳಿಯಿದ್ದ ಮತ್ತೊಂದು ಸಿಸಿ ಟಿವಿಯ ಕೇಬಲ್ ಕಟ್ ಮಾಡಲು ಮುಂದಾಗಿದ್ದವರ ಎದುರು ಸರ್ಪ ಪ್ರತ್ಯಕ್ಷವಾಗಿತ್ತು.
ಹಾವು ನೋಡ್ತಿದ್ದಂತೆ ಕಾಲ್ಕಿತ್ತ ಕಳ್ಳರು ದೇಗುಲ ಲೂಟಿ ಮಾಡಲು ಬಂದವರ ವಿರುದ್ಧ ಸರ್ಪ ಸಮರ ಸಾರಿತ್ತು. ಗರ್ಭ ಗುಡಿ ಬಳಿ ಇದ್ದ ಸಿಸಿ ಕ್ಯಾಮೆರಾದ ಮೇಲೆ ಹಾವು ಪ್ರತ್ಯಕ್ಷವಾಗಿತ್ತು. ಇದನ್ನು ನೋಡಿದ್ದೇ ತಡ ಕಳ್ಳರು ಸ್ಥಳದಿಂದ ಪರಾರಿಯಾಗಿದ್ದಾರೆ ಇನ್ನು ಅಚ್ಚರಿ ಎಂಬಂತೆ ಕಳ್ಳರು ಸ್ಥಳದಿಂದ ಕಾಲ್ಕಿತ್ತಿದ್ದಂತೆ ಹಾವು ಕೂಡ ಮಾಯವಾಗಿದೆ.
ಇನ್ನು ಈ ಮಾಯಮ್ಮ, ಶ್ರೀ ದೈತಮ್ಮನ ಪವಾಡದ ಬಗ್ಗೆ ಭಕ್ತರು ಹಾಗೂ ಅರ್ಚಕರು ಹೇಳುವಂತೆ ತಾವೊಂದು ಬಯಸಿದ್ರೆ ದೈವವೊಂದು ಬಯಸಿತು ಅನ್ನುವಂಗೆ ಕಳ್ಳರು ತಾವೇನೋ ಪ್ಲಾನ್ ಮಾಡಿ ದೇವಸ್ಥಾನಕ್ಕೆ ಕಳ್ಳತನಕ್ಕೆ ಬಂದಿದ್ದವರಿಗೆ ಆ ನಾಗರಾಜ ಶಾಕ್ ಕೊಟ್ಟಿದ್ದಾನೆ ಎಂದು.
- ರಾಜ್ಯದಲ್ಲಿ ಮುಂದಿನ 5 ದಿನ ಮಳೆಯ ಮುನ್ಸೂಚನೆ
- 10 ಸಾವಿರ ಕೋಟಿ ಕೈಗಾರಿಕೆ ಸ್ಥಾಪನೆ: ಪ್ರಸ್ತಾವನೆಗೆ ಉನ್ನತ ಮಟ್ಟದ ಸಮಿತಿ ಒಪ್ಪಿಗೆ
- ನಾನೊಬ್ಬ ರೈತ (ರೈತ ದಿನಾಚರಣೆಯ ಪ್ರಯುಕ್ತ )
- ಹೊರರಾಜ್ಯದ ಯುವತಿಯರನ್ನ ಕರೆಸಿ ಹೈಟೆಕ್ ವೇಶ್ಯಾವಾಟಿಕೆ ದಂಧೆ: ಆರೋಪಿ ಬಂಧನ
- ಬೆಂಗಳೂರಿನಲ್ಲಿ ಮಹಿಳೆಗೆ 30 ಲಕ್ಷ ರೂ. ವಂಚನೆ!
- ಎಪಿಗಾಮಿಯಾ ಸಹ-ಸಂಸ್ಥಾಪಕ ರೋಹನ್ ಮಿರ್ಚಂದಾನಿ ನಿಧನ
More Stories
ರಾಜ್ಯದಲ್ಲಿ ಮುಂದಿನ 5 ದಿನ ಮಳೆಯ ಮುನ್ಸೂಚನೆ
10 ಸಾವಿರ ಕೋಟಿ ಕೈಗಾರಿಕೆ ಸ್ಥಾಪನೆ: ಪ್ರಸ್ತಾವನೆಗೆ ಉನ್ನತ ಮಟ್ಟದ ಸಮಿತಿ ಒಪ್ಪಿಗೆ
ಹೊರರಾಜ್ಯದ ಯುವತಿಯರನ್ನ ಕರೆಸಿ ಹೈಟೆಕ್ ವೇಶ್ಯಾವಾಟಿಕೆ ದಂಧೆ: ಆರೋಪಿ ಬಂಧನ