November 16, 2024

Newsnap Kannada

The World at your finger tips!

bus elemenat

ಮಂತ್ರಾಲಯಕ್ಕೆ ತೆರಳುತ್ತಿದ್ದ ಬಸ್ಸಿನಲ್ಲಿ ಹೊಗೆ

Spread the love

ರಾಯಚೂರು : ಮಂತ್ರಾಲಯದಲ್ಲಿ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಉತ್ತರಾಧನೆಯ ಸಮಾರಂಭಕ್ಕೆ ತೆರಳುತ್ತಿದ್ದ ಪ್ರಯಾಣಿಕರ ಬಸ್ಸಿನಲ್ಲಿ ಇದ್ದಕ್ಕಿದ್ದಂತೆ ಹೊಗೆ ಕಾಣಿಸಿಕೊಂಡಿದ್ದು ಕೆಲಕಾಲ ಭಕ್ತರಲ್ಲಿ ಆತಂಕ ಸೃಷ್ಟಿ ಮಾಡಿತ್ತು.

ಘಟನೆಯು ಆಂಧ್ರಪ್ರದೇಶದ ಮಾಧಾವರಂ ಬಳಿ ನಡೆದಿದ್ದು, ಶ್ರೀ ಗುರು ರಾಘವೇಂದ್ರ ಆರಾಧನಾ ಮಹೋತ್ಸವಕ್ಕೆ ಪ್ರಯಾಣಿಕರು ಮಂತ್ರಾಲಯಕ್ಕೆ ತೆರಳುತ್ತಿದ್ದರು. ಈ ವೇಳೆ ಆಂಧ್ರಪ್ರದೇಶದ ಮಾಧವರಂ ಬಳಿ ಕಲ್ಯಾಣ ಕರ್ನಾಟಕ ಸಾರಿಗೆ ಬಸ್ ನಲ್ಲಿ ದಟ್ಟವಾದ ಹೊಗೆ ಕಾಣಿಸಿಕೊಂಡಿದೆ.

ಈ ಸಂದರ್ಭದಲ್ಲಿ ಪ್ರಯಾಣಿಕರು ಗಾಬರಿಗೆ ಒಳಗಾಗಿದ್ದರು. ತಕ್ಷಣ ಹತ್ತಿರದ ಮನೆಯಲ್ಲಿ ನೀರು ತಂದು ರೇಡಿಯೇಟರ್ ಮೇಲೆ ಸುರಿದಿದ್ದರಿಂದ ಹೊಗೆ ನಿಯಂತ್ರಣಕ್ಕೆ ಬಂದಿದೆ ಎಂದು ತಿಳಿದು ಬಂದಿದೆ. ಘಟನೆಯಿಂದ ಯಾರಿಗೂ ತೊಂದರೆ ಆಗಿಲ್ಲ ಚಾಲಕ ತಕ್ಷಣ ನೀರು ತಂದು ಹಾಕಿರುವುದರಿಂದ ಅನಾಹುತ ತಪ್ಪಿದೆ. ಚಾಲಕನ ಸಮಯ ಪ್ರಜ್ಞೆಗೆ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.ಅಂಗನವಾಡಿ ಸಹಾಯಕಿಯರ ಹುದ್ದೆಗೆ ಅರ್ಜಿ ಆಹ್ವಾನ | Anganwadi Helpers Recruitment-2023

ಘಟನೆಗೆ ಕಾರಣ ತಿಳಿದು ಬಂದಿಲ್ಲ. ಆದರೆ ಪ್ರಯಾಣಿಕರು, ಹಳೆಯದಾದ ಬಸ್‍ಗಳ ಅಸಮರ್ಪಕ ನಿರ್ವಹಣೆಯಿಂದ ಘಟನೆ ನಡೆದಿದೆ. ಕೂಡಲೇ ಹಳೆ ಬಸ್‍ಗಳನ್ನ ಬದಲಿಸಬೇಕು. ಬಸ್‍ಗಳ ನಿರ್ವಹಣೆ ಸರಿಯಾಗಿ ಮಾಡಬೇಕು ಎಂದು ದೂರಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!