December 22, 2024

Newsnap Kannada

The World at your finger tips!

audi,siren,rules break

Ambulance Siren for Audi Car - Son-in-law of former MP Sivarame Gowda fined heavily ಆಡಿ ಕಾರಿಗೆ ಆಂಬ್ಯುಲೆನ್ಸ್​ ಸೈರೆನ್​ - ಮಾಜಿ ಸಂಸದ ಶಿವರಾಮೇಗೌಡ ಅಳಿಯನಿಗೆ ಭಾರಿ ದಂಡ

ಆಡಿ ಕಾರಿಗೆ ಆಂಬ್ಯುಲೆನ್ಸ್​ ಸೈರೆನ್​ – ಮಾಜಿ ಸಂಸದ ಶಿವರಾಮೇಗೌಡ ಅಳಿಯನಿಗೆ ಭಾರಿ ದಂಡ

Spread the love

ಮಾಜಿ ಸಂಸದ ಶಿವರಾಮೇಗೌಡನ ಅಳಿಯ, ನಟ ರಾಜೀವ್ ಜೀವ ಉಳಿಸಲು ಬಳಸುವ ಆಂಬ್ಯುಲೆನ್ಸ್​ ಸೈರೆನ್​ ಅನ್ನು ಆಡಿ ಕಾರಿಗೆ ಅಳವಡಿಸಿಕೊಂಡು ಬೆಂಗಳೂರಿನಲ್ಲಿ ಅಡ್ಡಾಡುವ ಮೂಲಕ ಆ ಅಳಿಯ ಹುಂಬತನ ಮೆರದಿದ್ದಾನೆ.

ಮಾಜಿ ಸಂಸದ ಎಲ್​.ಆರ್​. ಶಿವರಾಮೇಗೌಡ. ಅಳಿಯ ಕಂ ನಟ ರಾಜೀವ್​ ರಾಥೋಡ್​ ಎಂಬಾತ ಆಡಿ ಕಾರಿಗೆ ಸೈರೆನ್​ ಅಳವಡಿಸಿಕೊಂಡು ವಿಜಯನಗರದಲ್ಲಿ ನ್ಯೂಸೆನ್ಸ್​ ಸೃಷ್ಟಿಸಿದ್ದಾನೆ.ಇದನ್ನು ಓದಿ –ಬೆಂಗಳೂರಿನಲ್ಲಿ ರೌಡಿ ಶೀಟರ್ ನಿಂದ ಮಹಿಳಾ ಮುಖ್ಯಪೇದೆಗೆ ಡ್ರ್ಯಾಗರ್ ನಿಂದ ಇರಿತ

ಸ್ಯಾಂಡಲ್​ವುಡ್​ ನಟನೂ ಆಗಿರುವ ರಾಥೋಡ್​, ತನ್ನ KA51 MG 9299 ನಂಬರಿನ ಆಡಿ ಕ್ಯೂ 7 ಕಾರಿನಲ್ಲಿ ಆಯಂಬುಲೆನ್ಸ್ ಸೈರನ್ ಹಾಕಿಕೊಂಡು, ಇಷ್ಟಬಂದ ಹಾಗೇ ಓಡಾಡಿ, ಸಂಚಾರ ನಿಯಮವನ್ನು ಉಲ್ಲಂಘನೆ ಮಾಡಿದ್ದಲ್ಲದೆ, ಸಾರ್ವಜನಿಕರಿಗೆ ತೊಂದರೆ ನೀಡಿದ್ದಾರೆ.

ಸಂಚಾರ ನಿಯಮ ಉಲ್ಲಂಘನೆ ಹಿನ್ನೆಲೆಯಲ್ಲಿ ರಾಜೀವ್​ ರಾಥೋಡ್​ ಅವರಿಂದ ವಿಜಯನಗರ ಸಂಚಾರಿ ಪೊಲೀಸರು ಭಾರಿ ದಂಡ ಕಟ್ಟಿಸಿಕೊಂಡು, ಮತ್ತೆ ಈ ರೀತಿ ಮಾಡದಂತೆ ಎಚ್ಚರಿಕೆ ಕೊಟ್ಟು ಕಳುಹಿಸಿದ್ದಾರೆ ಎಂದು ತಿಳಿದುಬಂದಿದೆ.

Copyright © All rights reserved Newsnap | Newsever by AF themes.
error: Content is protected !!