ಖ್ಯಾತ ಗಾಯಕ ಸೋನು ನಿಗಮ್ ಅವರ ಆರೋಗ್ಯದಲ್ಲಿ ಏರುಪೇರು ಉಂಟಾಗಿದ್ದು, ತೀವ್ರ ಬೆನ್ನುನೋವಿನಿಂದ ಬಳಲಿದ ಕಾರಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಭಾನುವಾರ ನಡೆದ ಲೈವ್ ಸಂಗೀತ ಕಾರ್ಯಕ್ರಮದ ವೇಳೆ, ತೀವ್ರ ಬೆನ್ನುನೋವಿನ ಹೊರತಾಗಿಯೂ ಅವರು ತಮ್ಮ ಪ್ರದರ್ಶನವನ್ನು ಮುಂದುವರಿಸಿದರು. ಆದರೆ ನೋವು ಉಲ್ಬಣಿಯಾದ ನಂತರ ಅವರನ್ನು ತುರ್ತು ಚಿಕಿತ್ಸೆಗೆ ಕರೆದೊಯ್ಯಲಾಯಿತು.
ಈ ಸಂದರ್ಭದಲ್ಲಿ, ಸೋನು ನಿಗಮ್ ತಮ್ಮ ಆರೋಗ್ಯ ಸ್ಥಿತಿಯ ಬಗ್ಗೆ ಅಭಿಮಾನಿಗಳಿಗೆ ಮಾಹಿತಿ ನೀಡುವ ವೀಡಿಯೊವನ್ನು ಹಂಚಿಕೊಂಡಿದ್ದಾರೆ.
ಅವರು ತಮ್ಮ ವೀಡಿಯೋ ಸಂದೇಶದಲ್ಲಿ, “ಇದು ನನ್ನ ಜೀವನದ ಒಂದು ಕಠಿಣ ದಿನ. ನಾನು ಹಾಡುಗಳನ್ನು ಹಾಡುತ್ತಾ ವೇದಿಕೆಯ ಸುತ್ತಲೂ ತಿರುಗಾಡುತ್ತಿದ್ದೆ. ನಂತರ ತೀವ್ರ ನೋವು ಶುರುವಾಗಿತು. ಆದರೆ ಹೇಗೋ ಅದನ್ನು ನಿರ್ವಹಿಸಲು ಪ್ರಯತ್ನಿಸಿದೆ. ನನಗೆ ಯಾರೋ ಬೆನ್ನಿಗೆ ಚುಚ್ಚುಮದ್ದಿನ ಸೂಜಿಯನ್ನು ಇರಿಸಿದಂತೆ ಭಾಸವಾಯಿತು” ಎಂದು ತಿಳಿಸಿದ್ದಾರೆ.ಇದನ್ನು ಓದಿ –ನ್ಯಾಕ್ ಗ್ರೇಡ್ ಲಂಚ ಪ್ರಕರಣ: ವಿವಿ ಪ್ರಾಧ್ಯಾಪಕಿ ಸೇರಿದಂತೆ 10 ಮಂದಿ CBI ವಶಕ್ಕೆ
ಸೋನು ನಿಗಮ್ ಅನೇಕ ಸೂಪರ್ ಹಿಟ್ ಹಾಡುಗಳನ್ನು ನೀಡಿದ ಪ್ರಸಿದ್ಧ ಗಾಯಕನಾಗಿದ್ದು, ತಮ್ಮದೇ ಆದ ಬ್ಯಾಂಡ್ ಕೂಡಾ ಹೊಂದಿದ್ದಾರೆ.


More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು