January 8, 2025

Newsnap Kannada

The World at your finger tips!

f34ee39b 5f45 4430 91d1 9265f378c328

ಗಾಯಕ , ಪೇದೆ ಸುಬ್ರಮಣಿ ಪತ್ನಿ ಆತ್ಮಹತ್ಯೆ ? ಪ್ರಕರಣಕ್ಕೆ ಟ್ವಿಸ್ಟ್

Spread the love

ಖಾಸಗಿ ವಾಹಿನಿಯ ಸರಿಗಮಪ ರಿಯಾಲಿಟಿ ಶೋ ಗಾಯಕ, ಪೊಲೀಸ್ ಸುಬ್ರಮಣಿ ಪತ್ನಿ ಸಾವಿಗೆ ಬಿಗ್ ಟ್ವಿಸ್ಟ್ ಸಿಕ್ಕಿದೆ.‌

ಸುಬ್ರಮಣಿ ಪತ್ನಿ ಜ್ಯೋತಿ ಕೋವಿಡ್ ನಿಂದ ಮೃತಪಟ್ಟಿಲ್ಲ. ಬದಲಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಸುದ್ದಿಯನ್ನು ಅರಿತ ಪೋಲಿಸರು ಯುಡಿಆರ್ ಕೇಸ್ ದಾಖಲು ಮಾಡಿದ್ದಾರೆ.

ಇತ್ತೀಚೆಗೆ ಪೇದೆ ಸುಬ್ರಮಣಿ ಪತ್ನಿ ಕೋಲಾರಕ್ಕೆ ಹೋಗಿದ್ದರು. ಅಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಕೂಡಲೇ ಅವರನ್ನು ಹೊಸಕೋಟೆಯಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರೂ ಉಳಿಸಿ ಕೊಳ್ಳಲು ಸಾಧ್ಯವಾಗಿಲ್ಲ ಎಂಬ ಮಾಹಿತಿ ಸಿಕ್ಕದೆ.

ಈ ನಡುವೆ ಕೊರೋನಾ ಪರೀಕ್ಷೆ ನಡೆಸಿದಾಗ ಕೋವಿಡ್ ಪಾಸಿಟಿವ್ ಇರುವುದು ದೃಢಪಟ್ಟಿದೆ.

ಆದರೂ ಕೋಲಾರ ಪೋಲಿಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.‌

Copyright © All rights reserved Newsnap | Newsever by AF themes.
error: Content is protected !!