February 19, 2026

Newsnap Kannada

The World at your finger tips!

murder

ಹೆತ್ತ ಮಗನನ್ನೇ ಇರಿದು ಕೊಂದ ಪಾಪಿ ತಂದೆ

Spread the love

ಬೆಂಗಳೂರು : ಬೆಂಗಳೂರಿನ ಅನ್ನಪೂರ‍್ನೇಶ್ವರಿ ನಗರ ಮುದ್ದನಪಾಳ್ಯದಲ್ಲಿ ತಂದೆ ಮಗನ ನಡುವೆ ಬೈಕ್ ವಿಚಾರವಾಗಿ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯವಾದೆ.

ಅಂಜನ್ ಕುಮಾರ್ (27)ನನ್ನು ರಿಯಲ್ ಎಸ್ಟೇಟ್ ಬ್ರೋಕರ್ ಆಗಿದ್ದ ತಂದೆ ವೆಂಕಟೇಶ್ ಚಾಕುವಿನಿಂದ ಇರಿದು ಕೊಂದಿದ್ದಾನೆ.

ಮಗಳ ಬೈಕ್ ತೆಗೆದುಕೊಂಡು ಹೊರಗೆ ಹೋಗಿದ್ದರಿಂದ ತಂದೆ ಮಗನ ನಡುವೆ ಜಗಳ ಶುರುವಾದ್ದು ,ಗಲಾಟೆಯಲ್ಲಿ ಮಗ ತಂದೆಗೆ ಹೆಲ್ಮೆಟ್ ನಿಂದ ಹೊಡೆದಿದ್ದಾನೆ.

ತನ್ನನ್ನು ಮಗ ಹೊಡೆಯುತ್ತಿದ್ದಾನೆ ಎಂದು ಕೋಪಗೊಂಡ ವೆಂಕಟೇಶ್, ಅಡುಗೆ ಮನೆಯಿಂದ ಚಾಕು ತಂದು ಮಗ ಅಂಜನ್ ಗೆ ಮನಬಂದಂತೆ ಇರಿದಿದ್ದಾರೆ.

ಗಂಭೀರವಾಗಿ ಗಾಯಗೊಂಡ ಮಗ ಅಂಜನ್ ಕುಮಾರ್ ನನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಮಾರ್ಗಮಧ್ಯೆಯೇ ಕೊನೆಯುಸಿರೆಳೆದಿದ್ದಾನೆ.ಚಿತ್ರದುರ್ಗ ಯುವಕನ ಕೊಲೆ ಪ್ರಕರಣ – ನಟ ದರ್ಶನ್ ಬಂಧನ

ತಂದೆ ವೆಂಕಟೇಶ್ ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

error: Content is protected !!