November 22, 2024

Newsnap Kannada

The World at your finger tips!

Government , guarantee Yojana , Politics

ಸುಮ್ನೆ ರಸ್ತೆಯಲ್ಲಿ ಹೋಗೋರಿಗೆ ದುಡ್ಡು ಕೊಡಕ್ಕಾಗಲ್ಲ – ಡಿಸಿಎಂ ಡಿಕೆಶಿ

Spread the love

ಬೆಂಗಳೂರು : ಸುಮ್ನೆ ರಸ್ತೆಯಲ್ಲಿ ಹೋಗೋರಿಗೆಲ್ಲಾ ದುಡ್ಡು ಕೊಡೋದಕ್ಕೆ ಆಗಲ್ಲ ಎಂದು ನೂತನ ಡಿಸಿಎಂ ಡಿಕೆಶಿ ಬೆಂಗಳೂರಿನಲ್ಲಿ ಹೇಳಿದರು.

ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ ನೂತನ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅದೆಲ್ಲದಕ್ಕೂ ವರದಿಗಳನ್ನು ಪಡೆಯಬೇಕಾಗುತ್ತೆ ಎಂದರು.

ಯಾರಿಗೆ ಹಣ ಕೊಡಬೇಕು? ಯಾರಿಗೆ ವಿದ್ಯುತ್ ಕೊಡಬೇಕು? ಫಲಾನುಭವಿಗಳು ಯಾರು ಎಂಬುದನ್ನೆಲ್ಲಾ ವರದಿ ಪಡೆದು ಯೋಜನೆ ಅನುಷ್ಠಾನಕ್ಕೆ ತರುತ್ತೇವೆ ಎಂದು ಭರವಸೆ ನೀಡಿದರು.

ನೂತನ ಸಿಎಂ ಸಿದ್ದರಾಮಯ್ಯ ಕಾಂಗ್ರೆಸ್ ನೀಡಿದ ಎಲ್ಲಾ ಭರವಸೆಗಳು ಒಂದೇ ವರ್ಷದಲ್ಲಿ ಈಡೇರಿಸುವ ಭರವಸೆಗಳಲ್ಲ. 5 ವರ್ಷಗಳಲ್ಲಿ ಈಡೇರಿಸುವಂತಹದ್ದು. ಮೊದಲ ಸಂಪುಟದಲ್ಲಿ 5 ಗ್ಯಾರಂಟಿಗಳ ಜಾರಿ ಬಗ್ಗೆ ಮಾತು ಕೊಟ್ಟಿದ್ದೆವು. ನಮ್ಮ ಸರ್ಕಾರ ನುಡಿದಂತೆ ನಡೆಯುವ ಸರ್ಕಾರ. ಈಗಾಗಲೇ ನಿರ್ಧಾರ ಮಾಡಿದ್ದು, ಮುಂದಿನ ಸಂಪುಟ ಸಭೆಯ ಬಳಿಕ ಆದೇಶ ಹೊರಡಿಸಲಾಗುವುದು ಎಂದು ಹೇಳಿದರು.ಮೇ 22 ರಿಂದ ಮೂರು ದಿನ ಅಧಿವೇಶನ : ಆರ್ ವಿ ದೇಶಪಾಂಡೆ ಹಂಗಾಮಿ ಸ್ಪೀಕರ್ – ಸಿಎಂ

2013-2018 ರಲ್ಲಿ 158 ಭರವಸೆ ಈಡೇರಿಸಿದ್ವಿ, ಅದರ ಜೊತೆಗೆ 30 ಕಾರ್ಯಕ್ರಮಗಳನ್ನು ಹೊಸದಾಗಿ ಜಾರಿ ಮಾಡಿದ್ವಿ. ಇಂದಿರಾ ಕ್ಯಾಂಟೀನ್, ಶೂ ಭಾಗ್ಯ, ವಿದ್ಯಾಸಿರಿ ಯೋಜನೆಗಳನ್ನ ಹೊಸದಾಗಿ ಜಾರಿಗೊಳಿಸಿದ್ವಿ. ಜನರಿಗೆ ನಮ್ಮ ಮೇಲೆ ವಿಶ್ವಾಸ ಇದೆ. ನಾವು ಕೊಟ್ಡ ಮಾತಿನಂತೆ ನಡೆಯುತ್ತೇವೆ ಎಂದು ಭರವಸೆ ನೀಡಿದರು.

Copyright © All rights reserved Newsnap | Newsever by AF themes.
error: Content is protected !!