December 22, 2024

Newsnap Kannada

The World at your finger tips!

daebd278 c065 4b2a 86a7 80f4b238166b

ಚಿರು ಮಗೂಗೆ ಬೆಳ್ಳಿ ತೊಟ್ಟಿಲು ಗಿಫ್ಟ್

Spread the love

ಚಿರು ಅಗಲಿಕೆಯ ನಂತರ ಸರ್ಜಾ ಕುಟುಂಬದಲ್ಲಿ ದುಃಖ ಮನೆ ಮಾಡಿತ್ತು. ಈಗ ಚಿರು ಕುಟುಂಬದಲ್ಲಿ ಮತ್ತೆ ನಗು ಮೂಡುತ್ತಿದೆ.‌ ಮೇಘನಾ ಅವರಿಗೆ ಇನ್ನು ಕೆಲವೇ ದಿನಗಳಲ್ಲಿ ಹೆರಿಗೆ ಆಗುತ್ತಿದೆ. ಆ ಪುಟ್ಟ ಅತಿಥಿಯನ್ನು ಬರಮಾಡಿಕೊಳ್ಳಲು ಮನೆಯವರೆಲ್ಲ ಕಾತರರಾಗಿದ್ದಾರೆ. ಹೀಗೆ ಇಂತಹ ಸಂತಸದ ಸಮಯದಲ್ಲಿ‌ ಧ್ರುವ ಸರ್ಜಾ ತನ್ನ ಅಣ್ಣನ ಮಗುವಿಗಾಗಿ ಬರೋಬ್ಬರಿ 10 ಲಕ್ಷ ಬೆಲೆ ಬಾಳುವ ಬೆಳ್ಳಿಯ ತೊಟ್ಟಿಲನ್ನು ಖರೀದಿ ಮಾಡಿದ್ದಾರೆ.

ಚಿರು-ಧ್ರುವ ನಡುವಿನ ಬಾಂಧವ್ಯ ಎಂತಹದ್ದು ಎಂದು ಎಲ್ಲರಿಗೂ ಗೊತ್ತೇ ಇದೆ. ಧ್ರುವನನ್ನು ಚಿರು ತಂದೆಯ ರೀತಿಯಲ್ಲೇ ನೋಡಿಕೊಂಡಿದ್ದರು.

ಧ್ರುವ ಅವರು ಬೆಳ್ಳಿ ತೊಟ್ಟಿಲ ಫೋಟೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ‌ ಬಿತ್ತರಿಸಿದ್ದಾರೆ. ಧ್ರುವ ಅವರ ಈ ಪ್ರೀತಿಯ ಉಡುಗೊರೆಗೆ ಎಲ್ಲರಿಂದಲೂ ಮೆಚ್ಚುಗೆ ವ್ಯಕ್ತವಾಗಿದೆ.

ಇದೇ ವೇಳೆ ಮಂಗಳವಾರ ಬೆಳಿಗ್ಗೆ ವೈದ್ಯರ ಬಳಿ ಪರೀಕ್ಷೆ ಚೆಕ್‌ಅಪ್ ಮಾಡಿಸಿಕೊಂಡಿದ್ದಾರೆ ತುಂಬು ಗರ್ಭಿಣಿ ಮೇಘನಾ. ತಮ್ಮ ತಂದೆ‌ ಸುಂದರ್ ರಾಜ್, ಧ್ರುವ ಸರ್ಜಾ ಹಾಗೂ ಧ್ರುವ ಪತ್ನಿ ಪ್ರೇರಣಾ ಮೇಘನಾ ಅವರ ಜೊತೆಯಲ್ಲಿದ್ದರು. ವೈದ್ಯರು ಹೆರಿಗೆಯ ದಿನಾಂಕವನ್ನು ಈಗಾಗಲೇ ನಿಗದಿ ಮಾಡಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!