Karnataka

ಬಿಜೆಪಿಯಿಂದ ಸಿಎಂ ನಿವಾಸಕ್ಕೆ ಮುತ್ತಿಗೆ : ಆರ್.ಅಶೋಕ್ ಸೇರಿದಂತೆ ಹಲವು ನಾಯಕರು ಪೊಲೀಸ್ ವಶಕ್ಕೆ

ಬೆಂಗಳೂರು : ಬಿಜೆಪಿ ನಾಯಕರು ,ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ-ಮುಡಾ ನಿವೇಶನ ಹಂಚಿಕೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವಂತೆ ಒತ್ತಾಯಿಸಿ ಪ್ರತಿಭಟನೆ ತೀವ್ರಗೊಳಿಸಿದ್ದಾರೆ.

ಬೆಂಗಳೂರಿನಲ್ಲಿ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿ ವಿಪಕ್ಷ ನಾಯಕ ಆರ್.ಅಶೋಕ್ ನೇತೃತ್ವದಲ್ಲಿ ಮಾಜಿ ಸಚಿವ ಅರಗ ಜ್ಞಾನೇಂದ್ರ, ಶಾಸಕ ಅರವಿಂದ್ ಬೆಲ್ಲದ್ ಹಾಗೂ ಬಿಜೆಪಿ ಕಾರ್ಯಕರ್ತರು ಧಿಕ್ಕಾರ ಕೂಗಿದ್ದಾರೆ.

“ಮುಡಾದಲ್ಲಿ ಭಾರೀ ಹಗರಣ ನಡೆದಿದೆ. ಒಬ್ಬೊಬ್ಬರಿಗೆ 15 ಸೈಟ್ ಗಳನ್ನು ಹಂಚಿದ್ದಾರೆ. ಕಾಂಗ್ರೆಸ್ ಸರ್ಕಾರ ಲೂಟಿ ಮಾಡುತ್ತಿದೆ. ಮಂಡ್ಯದಲ್ಲಿ ನಡೆದಿದ್ದ ನಿವೇಶನ ಹಂಚಿಕೆ ಅಕ್ರಮ ಪ್ರಕರಣವನ್ನು ಸಿಬಿಐಗೆ ವಹಿಸಿದಂತೆ ಮುಡಾ ಅಕ್ರಮ ಕೇಸ್ ನ್ನು ಸಿಬಿಐಗೆ ಒಪ್ಪಿಸಬೇಕು ” ಎಂದು ಆರ್.ಅಶೋಕ್ ಆಗ್ರಹಿಸಿದ್ದಾರೆ.

ಕಾಂಗ್ರೆಸ್ ಸರ್ಕಾರ ವಾಲ್ಮೀಕಿ ನಿಗಮದಲ್ಲಿ ಅಕ್ರಮ, ಮುಡಾ ಅಕ್ರಮ ಸೇರಿದಂತೆ ಬ್ರಹ್ಮಾಂಡ ಭ್ರಷ್ಟಾಚಾರದಲ್ಲಿ ಮುಳುಗಿದೆ. ಬಿಜೆಪಿ ಪ್ರತಿಭಟನೆಯನ್ನು ಹತ್ತಿಕ್ಕುವ ಮೂಲಕ ಸರ್ಕಾರ ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.25 IPS ಅಧಿಕಾರಿಗಳ ವರ್ಗಾವಣೆ. ಮೈಸೂರು, ಮಂಡ್ಯ ಎಸ್​ಪಿ ಬದಲಾವಣೆ

ಬಿಜೆಪಿ ನಾಯಕರು ಇದೇ ವೇಳೆ ಸಿಎಂ ಸಿದ್ದರಾಮಯ್ಯ ಅವರ ಕಾವೇರಿ ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ್ದು ,ತಿಭಟನೆ ತೀವ್ರಗೊಳ್ಳುತ್ತಿದ್ದಂತೆ ಆರ್.ಅಶೋಕ್, ಮಾಜಿ ಸಚಿವ ಅರಗ ಜ್ಞಾನೇಂದ್ರ, ಶಾಸಕ ಅರವಿಂದ ಬೆಲ್ಲದ್ ಅವರನ್ನು ಪೊಲೀಸರು ವಶಕ್ಕೆ ಪಡೆದು ವಾಹನಗಳಲ್ಲಿ ಕರೆದೊಯ್ದಿದ್ದಾರೆ.

Team Newsnap
Leave a Comment

Recent Posts

ನಾನೇ ಚನ್ನಪಟ್ಟಣದ ಮೈತ್ರಿ ಅಭ್ಯರ್ಥಿ, ಅಧಿಕೃತ ಘೋಷಣೆ ಅಷ್ಟೇ ಬಾಕಿ : ಸಿ.ಪಿ.ಯೋಗೇಶ್ವರ್

ರಾಮನಗರ : ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ , ಚನ್ನಪಟ್ಟಣ ಉಪಚುನಾವಣೆಗೆ ನಾನೇ ಮೈತ್ರಿ ಅಭ್ಯರ್ಥಿ , ನಾನು ಸ್ಪರ್ಧಿಸುವಂತೆ ಹೆಚ್.ಡಿ.ಕುಮಾರಸ್ವಾಮಿ… Read More

July 5, 2024

KRS ಅಣೆಕಟ್ಟು ವ್ಯಾಪ್ತಿಯಲ್ಲಿ ಟ್ರಯಲ್ ಬ್ಲಾಸ್ಟ್ ವಿರೋಧಿಸಿ ಪ್ರತಿಭಟನೆ

ಮಂಡ್ಯ :ಜಿಲ್ಲೆಯ ಪಾಂಡವಪುರ ತಾಲೂಕಿನ ವಿವಾದಿತ ಬೇಬಿಬೆಟ್ಟದಲ್ಲಿ ಐದು ಕಡೆಗಳಲ್ಲಿ ಕುಳಿಗಳನ್ನು ಕೊರೆದು ಇನ್ನು ಎರಡು ಮೂರು ದಿನಗಳಲ್ಲಿ ಪರಿಕ್ಷಾರ್ಥ… Read More

July 5, 2024

ವರದಕ್ಷಿಣೆ ಕಿರುಕುಳಕ್ಕೆ ಸಿಲುಕಿದ ಯುವತಿ ಆತ್ಮಹತ್ಯೆಗೆ ಶರಣು

ಬೆಂಗಳೂರು: ಬೆಂಗಳೂರಿನ ಗಂಗಮ್ಮನ ಗುಡಿಯಲ್ಲಿ ಎರಡು ವರ್ಷದ ಹಿಂದೆ ಮದುವೆಯಾಗಿದ್ದ ಹುಡುಗಿಯೊಬ್ಬಳು ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ. ಎರಡು ವರ್ಷಗಳ… Read More

July 5, 2024

ಮೈಸೂರು ನೂತನ ಜಿಲ್ಲಾಧಿಕಾರಿಯಾಗಿ ಲಕ್ಷ್ಮಿ ಕಾಂತ ರೆಡ್ಡಿ. ಜಿ ಅಧಿಕಾರ ಸ್ವೀಕಾರ

ಮೈಸೂರು ನೂತನ ಜಿಲ್ಲಾಧಿಕಾರಿಯಾಗಿ ಲಕ್ಷ್ಮಿ ಕಾಂತ ರೆಡ್ಡಿ .ಜಿ ಅವರು ಇಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಿದರು. ನಿರ್ಗಮಿತ ಜಿಲ್ಲಾಧಿಕಾರಿ… Read More

July 5, 2024

ಡಾ.ಬಿ.ಎನ್.ಗಂಗಾಧರ್ ರಾಷ್ಟ್ರೀಯ ವೈದ್ಯಕೀಯ ಆಯೋಗದ ಮುಖ್ಯಸ್ಥರಾಗಿ ನೇಮಕ

ಬೆಂಗಳೂರು : ಕನ್ನಡಿಗ ಡಾ.ಬಿ.ಎನ್ ಗಂಗಾಧರ್ ರಾಷ್ಟ್ರೀಯ ವೈದ್ಯಕೀಯ ಆಯೋಗದ ಮುಖ್ಯಸ್ಥರಾಗಿ ನೇಮಕಗೊಂಡಿದ್ದಾರೆ. ನಿಮ್ಹಾನ್ಸ್ (NIMHANS) ನಿರ್ದೇಶಕರಾಗಿ ಗಂಗಾಧರ್ ಅವರು… Read More

July 4, 2024

ಪರಿವ್ರಾಜಕ ವೀರ ಸಂನ್ಯಾಸಿ

ಇಂದು ವಿವೇಕಾನಂದರ ಪುಣ್ಯ ಸ್ಮರಣೆ ಆ ವ್ಯಕ್ತಿತ್ವ ಚಿರತಾರುಣ್ಯದ ಪ್ರತೀಕ! ಆ ವ್ಯಕ್ತಿತ್ವದ ಪ್ರತಿಯೊಂದು ಆಯಾಮವು, ಉತ್ಸಾಹದ, ಧೀರತೆಯ ಮತ್ತು… Read More

July 4, 2024