ಯಡಿಯೂರಪ್ಪನವರೇ ಮೋದಿ ಭೇಟಿಯ ಸಂದರ್ಭವನ್ನು ನಿಮ್ಮ ಕುರ್ಚಿ ಉಳಿಸಿಕೊಳ್ಳಲು ಬಳಸದೇ ರಾಜ್ಯದ ಹಿತ ರಕ್ಷಣೆಗಾಗಿ ಖಡಕ್ ಆಗಿ ಮಾತನಾಡಿ. ರಾಜ್ಯದ ಜನ ನಿಮ್ಮ ಜೊತೆ ಇದ್ದಾರೆ’ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಬಿ.ಎಸ್.ವೈ ಅವರಿಗೆ ಟ್ವೀಟ್ ಮೂಲಕ ಸಲಹೆ ನೀಡಿದ್ದಾರೆ.
‘ಕಾಡಿಬೇಡಿ ಮೋದಿ ಭೇಟಿಯ ಅವಕಾಶವನ್ನು ಪಡೆದುಕೊಂಡಿದ್ದೀರಿ. ಕಳೆದ ವರ್ಷದ ಅತಿವೃಷ್ಠಿಗೆ ೩೫೦೦ ಪರಿಹಾರ ನೀಡಿದ್ದರು. ಈ ಬಾರಿ ೮೦೦೦ ಕೋಟಿ ಎಂದು ಹೇಳಿದ್ದೀರಿ. ಎಲ್ಲ ಬಾಕಿಯನ್ನು ರಾಜ್ಯಕ್ಕೆ ಕೊಡುವಂತೆ ಕೇಳಿ. ೧೫ನೇ ಹಣಕಾಸು ಆಯೋಗದಿಂದ ನಮ್ಮ ರಾಜ್ಯಕ್ಕೇ ಹೆಚ್ಚು ನಷ್ಟವಾಗಿದೆ. ತೆರಿಗೆ ಹಂಚಿಕೆ ಮತ್ತು ಎನ್ ಡಿ ಆರ್.ಎಫ್ ನಲ್ಲಿ ರಾಜ್ಯಕ್ಕೆ ನ್ಯಾಯಬದ್ಧ ಪಾಲು ಬರುವಂತೆ ನೋಡಿಕೊಳ್ಳಿ’ ಎಂದೂ ಹೇಳಿದ್ದಾರೆ.
‘ಕರೋನಾ ಸೋಂಕಿನಲ್ಲಿ ರಾಜ್ಯ ಎರಡನೇ ಸ್ಥಾನದಲ್ಲಿದೆ. ವೆಂಟಿಲೇಟರ್ ಹಾಗೂ ಆಕ್ಸಿಜನ್ ಸೌಲಭ್ಯದ ತುರ್ತು ಅಗತ್ಯವಿದೆ. ಆದರೆ ಮೋದಿಯವರು ಕರೋನಾ ನಿಯಂತ್ರಣ ಸಾಮಗ್ರಿಗಳ ಖರೀದಿಯನ್ನು ಕೇಂದ್ರೀಕರಣಗೊಳಿಸಿದ್ದಾರೆ. ಹೀಗಾಗಿ ಸಾಮಗ್ರಿಗಳನ್ನು ಖರೀದಿ ಮಾಡಲು ಸಾಧ್ಯವಾಗು ತ್ತಿಲ್ಲ. ಇದರಿಂದ ರಾಜ್ಯದಲ್ಲಿ ಜನ ಸಾಯುತ್ತಿದ್ದಾರೆ. ಮೋದಿಯವರಿಗೆ ಈ ಬಗ್ಗೆ ಕಣ್ಣು ತೆರೆಸಿ’ ಎಂದು ಯಡಿಯೂರಪ್ಪನವರಿಗೆ ಟ್ವೀಟ್ ಮೂಲಕ ಸಲಹೆ ನೀಡಿದ್ದಾರೆ.
More Stories
MUDA ಹಗರಣ: 15,085 ನಿವೇಶನಗಳು ಪೆಂಡಿಂಗ್, ಹಲವಾರು ಅಕ್ರಮ ಬಯಲು
ರಾಜ್ಯ ಸರ್ಕಾರದಿಂದ 7 ಐಪಿಎಸ್ ಅಧಿಕಾರಿಗಳ ವರ್ಗಾವಣೆ
ಕರ್ನಾಟಕದಲ್ಲಿ 6 ಲಕ್ಷ ಎಕರೆ ವಕ್ಫ್ ಆಸ್ತಿಗೆ ಪರಿಗಣನೆ: ಬಿಜೆಪಿ ಶಾಸಕ ಯತ್ನಾಳ್ ಆರೋಪ