February 22, 2026

Newsnap Kannada

The World at your finger tips!

boating sidd

ಆಪ್ತ ವಲಯ ಶಿಷ್ಯರ ಜೊತೆ ಸಿದ್ದರಾಮಯ್ಯ ಬೋಟಿಂಗ್ ಮಾಡಿಕೊಂಡು ಎಂಜಾಯ್

Spread the love

ಮೈಸೂರಿನ ಹೆಚ್ ಡಿ ಕೋಟೆ ಕಬಿನಿ ಹಿನ್ನೀರಿಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ತಮ್ಮ ಆಪ್ತರ ಜೊತೆ ಬೋಟಿಂಗ್ ಹೋಗಿರುವ ವೀಡಿಯೋ ವೈರಲ್ ಆಗುತ್ತಿದೆ.

ಸಿದ್ದರಾಮಯ್ಯ ಕಳೆದ ಎರಡು ದಿನಗಳಿಂದ ಮೈಸೂರು ಜಿಲ್ಲೆಯ ಎಚ್.ಡಿ. ಕೋಟೆಯ ಕಬಿನಿ ಹಿನ್ನಿರಿನಲ್ಲಿರುವ ಆರೆಂಜ್ ಕೌಂಟಿ ರೆಸಾರ್ಟ್‍ನಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ.

ಸಿದ್ದರಾಮಯ್ಯ ಅವರ ಪರಮಾಪ್ತರಾದ ಮಾಜಿ ಸಚಿವ ಡಾ.ಎಚ್.ಸಿ. ಮಹದೇವಪ್ಪ, ಪಿರಿಯಾಪಟ್ಟಣ ವೆಂಕಟೇಶ್ ಕೂಡ ಅವರ ಜೊತೆಯಲ್ಲೇ ಇದ್ದಾರೆ.

ಶಾಸಕರಾದ ಎಚ್.ಪಿ. ಮಂಜುನಾಥ್, ಅನಿಲ್ ಚಿಕ್ಕಮಾದು ಸೇರಿದಂತೆ ಕೆಲವು ಮುಖಂಡರು ಸಿದ್ದರಾಮಯ್ಯ ಅವರ ಜೊತೆ ಕಾಡು ಸುತ್ತಿದ್ದಾರೆ. ಸದ್ಯ ಇದರ ಫೋಟೋ ಹಾಗೂ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ವಿಶ್ರಾಂತಿ ನಡುವೆ ಬೋಟಿಂಗ್ ಕೂಡ ಹೋಗಿದ್ದಾರೆ. ಅಲ್ಲದೇ ಕಾಡಿನೊಳಗೆ ಸಫಾರಿ ಕೂಡ ಮಾಡಿದ್ದಾರೆ. 3 ದಿನಗಳ ವಿಶ್ರಾಂತಿಯ ಸಮಯದಲ್ಲಿ ಕಾಂಗ್ರೆಸ್ ಮುಖಂಡರ ಸಭೆಯಲ್ಲಿ ಭಾಗಿಯಾಗಿ ನಂತರ ಸಿದ್ದರಾಮಯ್ಯ ಫೆಬ್ರವರಿ 2 ರಂದು ಬೆಂಗಳೂರಿಗೆ ವಾಪಸ್ಸಾಗಲಿದ್ದಾರೆ.

error: Content is protected !!