January 16, 2025

Newsnap Kannada

The World at your finger tips!

girl 1 1

ಸಿದ್ದರಾಮಯ್ಯ, ಡಿಕೆಶಿ ಅವರೇ ನನ್ನ ತಂದೆ-ತಾಯಿಗೆ ರಕ್ಷಣೆ ನೀಡಿ- ಸಿಡಿ ಯುವತಿ ‌ ಮನವಿ

Spread the love

ಮಾಜಿ ಸಚಿವರ ರಾಸಲೀಲೆ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದ ಸಂತೃಸ್ತ ಯುವತಿ ನನ್ನ ತಂದೆ ತಾಯಿಗೆ ರಕ್ಷಣೆ ನೀಡಿ ಎಂದು ಮತ್ತೊಂದು ವಿಡಿಯೋ‌ ಬಿಡುಗಡೆ ಮಾಡಿದ್ದಾಳೆ.

ನನಗೆ ಗೊತ್ತು, ನನ್ನ ಅಪ್ಪ ಅಮ್ಮ ಸ್ವಇಚ್ಛೆಯಿಂದ ದೂರು​ ಕೊಟ್ಟಿಲ್ಲ. ಏಕೆಂದರೆ ಅವರಿಗೆ ಗೊತ್ತು ಅವರ ಮಗಳು ತಪ್ಪು ಮಾಡಿಲ್ಲಾ ಅಂತಾ. ಹಾಗಾಗಿ ಅವರು ಹೆದರಿಕೊಳ್ಳುವ ಯಾವ ಅವಶ್ಯಕತೆ ಇಲ್ಲ ಎಂದಿದ್ದಾಳೆ.

ನನಗೆ ನನ್ನ ಅಪ್ಪ ಅಮ್ಮನ ರಕ್ಷಣೆ ಮುಖ್ಯ. ಯಾವಾಗ ನನ್ನ ತಂದೆ ತಾಯಿ ಸೇಫ್​ ಆಗಿದ್ದಾರೆ ಅನ್ಸುತ್ತೋ ಅವಾಗ ನಾನು ಎಸ್​ಐಟಿ ಮುಂದೆ ಬರ್ತೀನಿ. ಸೇಟ್​ಮೆಂಟ್​ ಕೊಡ್ತೀನಿ ಎಂದು ಹೇಳಿದ್ದಾಳೆ.

ಇದಕ್ಕೂ ಮುನ್ನ ಸಿದ್ದರಾಮಯ್ಯನವರೇ.. ಡಿ.ಕೆ ಶಿವಕುಮಾರ್ ಅವರೇ.. ರಮೇಶ್​ ಕುಮಾರ್ ಅವರೇ ಹಾಗೂ ಮಹಿಳಾ ಸಂಘಟನೆಯವರಿಗೆ ನನ್ನ ತಂದೆ ತಾಯಿಗೆ ರಕ್ಷಣೆ ಕೊಡಿ ಎಂದು ಕೋರಿದ್ದಾಳೆ.

Copyright © All rights reserved Newsnap | Newsever by AF themes.
error: Content is protected !!