January 11, 2025

Newsnap Kannada

The World at your finger tips!

sidda

ನಾನು ಲವ್​ ಮಾಡಿ ಮದ್ವೆಯಾಗ್ತೀನಿ..ಇಲ್ಲ ಇಲ್ಲ ನಂಗೆ ವಯಸ್ಸಾಗಿದೆ – ಸಿದ್ದು

Spread the love

ಮದುವೆನೇ ಬೇರೆ ಪ್ರೀತಿ ಬೇರೆ. ಪ್ರೀತಿಯನ್ನು ಯಾವ ವಯಸ್ಸಿಗೆ ಬೇಕಾದರೂ ಮಾಡಬಹುದು ಆದರೆ ಮದುವೆ ಹಾಗೆ ಮಾಡಲು ಕಷ್ಟ ಎನಿಸುತ್ತಿದೆ

ಬೆಳಗಾವಿಯ ಸುವಣ೯ಸೌಧ ದಲ್ಲಿ ನಡೆದಿರುವ ಅಧಿವೇಶನದಲ್ಲಿ ಮತಾಂತರ ನಿಷೇಧ ಕಾಯ್ದೆ ಬಗೆಗಿನ ಚಚೆ೯ ಮೇಲೆ ಪಾಲ್ಗೊಂಡು ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ ಬಿಜೆಪಿ ಸರ್ಕಾರ ತರಲು ಹೊರಟಿರುವ ಮತಾಂತರ ನಿಷೇಧ ಮಸೂದೆಯ ನ್ಯೂನ್ಯತೆಗಳನ್ನು ಬಿಡಿಸಿಟ್ಟರು

ನಾನು ಲವ್ ಮಾಡಿ ಮದುವೆ ಆಗ್ತೇನೆ.. ಎಕ್ಸ್.. (ಮಾಜಿ).. ಇಲ್ಲ.. ಇಲ್ಲ.. ನನ್ನ ಬಿಡಿ, ನನಗೆ ವಯಸ್ಸಾಗಿದೆ. ನನ್ನ ಸುದ್ದಿ ಬಿಟ್ಬಿಡಿ.. ನನಗೆ ವಯಸ್ಸಾಗಿಬಿಟ್ಟಿದೆ’’ ಎಂದರು. ಆಗ ಸಿದ್ದರಾಮಯ್ಯರ ಈ ಮಾತು ಕೇಳಿಸಿಕೊಂಡ ಸದಸ್ಯರು ಜೋರಾಗಿ ನಕ್ಕರು.

ಮಾತಿನ ಮಧ್ಯಪ್ರವೇಶ ಮಾಡಿದ ಸ್ಪೀಕರ್ ಕಾಗೇರಿ.. ‘ಸಿದ್ದರಾಮಯ್ಯನವರು.. ವಯಸ್ಸಿಗೂ ಮತ್ತು ಪ್ರೀತಿಗೂ ಇಂಟರ್​ಲಿಂಕ್ ಇರಲ್ವಾ?’ ಎಂದು ಪ್ರಶ್ನೆ ಮಾಡಿದರು.

ಅದಕ್ಕೆ ಉತ್ತರ ನೀಡಿದ ಸಿದ್ದರಾಮಯ್ಯ.. ‘‘ಇಲ್ಲ ಪ್ರೀತಿ ಬೇರೆ, ಮದುವೆ ಬೇರೆ. ಎರಡಕ್ಕೂ ವ್ಯತ್ಯಾಸ ಇದೆ. ನಾನು ಹೇಳಿದ್ದು ಮದುವೆ.. ಪ್ರೀತಿ ಬೇರೆ.. ಪ್ರೀತಿಯನ್ನು ಯಾವ ವಯಸ್ಸಿಗೂ ಮಾಡಬಹುದು’’ ಅನ್ನೋ ಮೂಲಕ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡರು.

ಆಗ ಕಾಗೇರಿ ತಲೆ ಅಲ್ಲಾಡಿಸಿ ಮತ್ತೆ ನಕ್ಕರು

ಈ ವೇಳೆ ಸಚಿವ ಕೆಎಸ್​ ಈಶ್ವರಪ್ಪ ಮಾತನಾಡಿ, ಸಿದ್ದರಾಮಯ್ಯನವರೇ.. ನಿಮಗೆ ವಯಸ್ಸು ಆಗಿದೆ ಅಂತಾ ಯಾರು ಹೇಳಿದ್ದು?’’? ಎಂದು ಪ್ರಶ್ನೆ ಮಾಡಿದ್ರು.. ಅದಕ್ಕೆ ಸಿದ್ದರಾಮಯ್ಯ ‘‘ನಾನೇ ಅಂದ್ಕೊಂಡಿದ್ದೇನೆ’ ಅಂದರು. ಆಗ ಈಶ್ವರಪ್ಪ, ನಿಮ್ಮ ಮನೆಯವರು ಹೇಳಿಲ್ಲ ತಾನೇಎಂದು ಮತ್ತೆ ಪ್ರಶ್ನೆ ಮಾಡಿದ್ರು.. ‘‘ಇಲ್ಲ ಇಲ್ಲ ನಾನೇ ಹೇಳ್ತಿದ್ದೇನೆ’ ಎಂದರು.

ಮತ್ತೆ ಮಾತು ಮುಂದುವರಿಸಿದ ಸಿದ್ದರಾಮಯ್ಯ, ‘‘ನಿಮ್ಗೆ ವಯಸ್ಸಾಗಿದೆ ಅಂತಾ ಅನ್ಕೊಂಡಿಲ್ವಾ ಈಶ್ವರಪ್ಪನವ್ರೇ’’ ಎಂದು ಪ್ರಶ್ನೆ ಮಾಡಿದರು.

ಅದಕ್ಕೆ ಈಶ್ವರಪ್ಪ ತಮ್ಮ ಎರಡೂ ಕೈಗಳನ್ನು ಬಿಚ್ಚಿ ‘‘ಖಂಡಿತವಾಗಿಯೂ ಇಲ್ಲ’’ ಎಂದು ತಮಾಷೆ ಮಾಡಿದರು.ಆಗ ಮತ್ತೆ ಸದನ ನಗೆಗಡಲಲ್ಲಿ ತೇಲಿತು.

Copyright © All rights reserved Newsnap | Newsever by AF themes.
error: Content is protected !!