December 28, 2024

Newsnap Kannada

The World at your finger tips!

Kolar , Congress , JDS

ಸಿದ್ದರಾಮಯ್ಯ ಗೊಬೆಲಪ್ಪ, ಬ್ರೋಕರಪ್ಪ: ಹೆಚ್ ಡಿ ಕೆ

Spread the love

ಜೆಡಿಎಸ್ ಮುಳುಗುವ ಹಡುಗು ಎಂದು ಹೇಳಿಕೆ ನೀಡಿರುವ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಕಿಡಿಕಾರಿದ್ದಾರೆ.

ಪ್ರತಿಪಕ್ಷ ನಾಯಕರನ್ನು ಹಿಟ್ಲರ್ ಆಸ್ಥಾನದಲ್ಲಿ ಸುಳ್ಳು ಹೇಳುವುದನ್ನೇ ಕಾಯಕ ಮಾಡಿಕೊಂಡಿದ್ದ ಗೊಬೆಲ್‍ಗೆ ಹೋಲಿಕೆ ಮಾಡಿ ಟಾಂಗ್ ನೀಡಿದ್ದಾರೆ.

ಬೆಳಗ್ಗೆ ಸರಣಿ ಟ್ವೀಟ್ ಮಾಡಿ ಸಿದ್ದರಾಮಯ್ಯನ ಮೇಲೆ ಪ್ರಹಾರ ನಡೆಸಿರುವ ಹೆಚ್‍ಡಿಕೆ, ಸಿದ್ದರಾಮಯ್ಯ ಅವರನ್ನು ‘ಗೊಬೆಲಪ್ಪ’ ಮತ್ತು ‘ಬ್ರೋಕರಪ್ಪ’ ಎಂದು ಕರೆದಿದ್ದಾರೆ.

ಟ್ವೀಟ್‍ನಲ್ಲೇನಿದೆ..?

ಸುಳ್ಳು ಹೇಳುವ ಚಾಳಿಗೆ ಚಿಕಿತ್ಸೆ ಇಲ್ಲ. ‘ಸಿದ್ದಕಲೆ’ಯ ನಿಷ್ಣಾತರಿಗೆ ಸುಳ್ಳೇ ದೇವರು, ಸುಳ್ಳೇ ಸರ್ವಸ್ವ. ಜೆಡಿಎಸ್ ಮುಳುಗುತ್ತಿರುವ ಹಡಗು ಎಂದು ಸುಳ್ಳು ಹೇಳಿಕೊಂಡು ಓಡಾಡುವ ‘ಗೊಬೆಲಪ್ಪ’ನ ‘ಬೂಸಿಭಜನೆ’ ಹೊಸದೇನೂ ಅಲ್ಲ. ರಾಜಕೀಯ ಜನ್ಮಕೊಟ್ಟ ಪಕ್ಷದ ಬಗ್ಗೆಯೇ ಹಗುರವಾಗಿ ಮಾತನಾಡುವ ‘ಕೃತಘ್ನ’ತೆಗೆ ಇದೇ ಸಾಕ್ಷಿ.

ಒಬ್ಬ ನಾಯಕನನ್ನು ಸೃಷ್ಟಿಸುವ ಯೋಗ್ಯತೆ ಇಲ್ಲ. ಇರುವ ಪಕ್ಷದ ಮೇಲೆ ವಿಶ್ವಾಸವಿಲ್ಲ. ‘ಬ್ರೂಟಸ್ ಮನಃಸ್ಥಿತಿ’, ಸಂದರ್ಭಕ್ಕೆ ತಕ್ಕಂತೆ ‘ಬಣ್ಣ ಬದಲಿಸುವ ಊಸರವಳ್ಳಿ ದುಸ್ಥಿತಿ’. ಆಪರೇಷನ್ ಕಮಲದಲ್ಲಿ ಕುಮ್ಮಕ್ಕಾಗಿ ಮೈತ್ರಿ ಸರಕಾರ ಕೆಡವಿದ ಸಿದ್ದಶೂರನ ಸಾರಥ್ಯದಲ್ಲಿ ‘ಆಪರೇಷನ್ ಹಸ್ತ’ ನಡೆಯುತ್ತಿದೆ, ಎಂದು ಟೀಕಿಸಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!