February 21, 2026

Newsnap Kannada

The World at your finger tips!

SIDDARAM V

ಮೇಕೆದಾಟು ಪಾದಯಾತ್ರೆಯಲ್ಲಿ ಸುಸ್ತಾದ ಸಿದ್ದರಾಮಯ್ಯ ಕಾರಿನಲ್ಲಿ ವಾಪಸ್‌

Spread the love

ಕಾಂಗ್ರೆಸ್ ಹಮ್ಮಿಕೊಂಡಿರುವ ಮೇಕೆದಾಟು ಪಾದಯಾತ್ರೆಯ ಪಾಲ್ಗೊಂಡಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ನಾಲ್ಕು ಕಿ.ಮೀ. ನಡೆದು ಸುಸ್ತಾಗಿ ಬೇರೊಂದು ಕಾರಿನಲ್ಲಿ ವಾಪಸ್ಸಾಗಿದ್ದಾರೆ.

73 ವರ್ಷ ವಯಸ್ಸಿನ ಸಿದ್ದರಾಮಯ್ಯ ಮೇಕೆದಾಟು ಪಾದಯಾತ್ರೆಯಲ್ಲಿ ಡಿ.ಕೆ.ಶಿವಕುಮಾರ್‌ ಅವರೊಂದಿಗೆ ನೇತೃತ್ವ ವಹಿಸಿದ್ದರು.

ಜನವರಿ 18ರವರೆಗೆ ನಡೆಯುವ ಈ ಪಾದಯಾತ್ರೆಗೆ ಇಂದು ಕನಕಪುರ ತಾಲೂಕಿನ ಕಾವೇರಿ ತಟ, ಸಂಗಮದಲ್ಲಿ ಚಾಲನೆ ನೀಡಲಾಯಿತು.

ಕೋವಿಡ್‌ ಕಾರಣ ಸರ್ಕಾರ ವೀಕೆಂಡ್‌ ಕರ್ಫ್ಯೂ ವಿಧಿಸಿದ್ದರೂ ಅಪಾರ ಸಂಖ್ಯೆಯಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ.

ಡಿ.ಕೆ.ಶಿವಕುಮಾರ್‌ ಮತ್ತು ಸಿದ್ದರಾಮಯ್ಯ ಮೇಕೆದಾಟು ಪಾದಯಾತ್ರೆಯ ನೇತೃತ್ವ ವಹಿಸಿದ್ದರು. ಇಂದು 15 ಕಿ.ಮೀ. ಪಾದಯಾತ್ರೆ ನಡೆಸಿ ಕನಕಪುರ ತಲುಪಲು ಯೋಜನೆ ಹಾಕಿಕೊಳ್ಳಲಾಗಿತ್ತು. ಆದರೆ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದ ಸಿದ್ದರಾಮಯ್ಯ ಅವರು 4 ಕಿ.ಮೀ. ನಡೆಯುವಷ್ಟರಲ್ಲಿ ಸುಸ್ತಾಗಿದ್ದಾರೆ. ಸುಸ್ತಾಗಿ ಕುಳಿತ ಅವರನ್ನು ಕಾರಿನಲ್ಲಿ ವಾಪಸ್‌ ಕರೆದುಕೊಂಡು ಹೋಗಲಾಯಿತು

ಕಾನೂನು ಕ್ರಮಕ್ಕೆಚಿಂತನೆ :

ಕಾಂಗ್ರೆಸ್‌ ನಡೆಸುತ್ತಿರುವ ಪಾದಯಾತ್ರೆ ವಿರುದ್ಧ ಬಿಜೆಪಿ ನಾಯಕರು ಟೀಕೆ ವ್ಯಕ್ತಪಡಿಸಿದ್ದಾರೆ. ಇದು ರಾಜಕೀಯ ಪ್ರೇರಿತ ಪಾದಯಾತ್ರೆ ಎಂದು ಟೀಕಿಸಿದೆ. ಅಲ್ಲದೇ ಕೋವಿಡ್‌ ನಿಯಮ ಉಲ್ಲಂಘಿಸಿದ್ದಾರೆ ಎಂದು ಕಾಂಗ್ರೆಸ್‌ನವರ ವಿರುದ್ಧ ಶಿಸ್ತುಕ್ರಮ ಜರುಗಿಸುವ ಬಗ್ಗೆ ತೀರ್ಮಾನಿಸಲು ಸರ್ಕಾರ ಸಭೆ ಕೂಡ ಕರೆದಿದೆ.

error: Content is protected !!