ಮದುವೆಯಾದ 6 ವರ್ಷದ ಬಳಿಕ
ಗಾಯಕಿ ಶ್ರೆಯಾ ಘೋಷಾಲ್ ತಾಯಿಯಾಗುತ್ತಿದ್ದಾರೆ.
ಈ ವಿಷಯವನ್ನು ತಮ್ಮ ಚಿತ್ರದೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಗಾಯಕಿ ಶ್ರೆಯಾ ಘೋಷಾಲ್ ‘ಮಗು, ‘ಶ್ರೆಯಾದಿತ್ಯ’ ಆಗಮಿಸುತ್ತಿದೆ ಎಂದಿದ್ದಾರೆ.
ಶಿಲಾದಿತ್ಯ ಹಾಗೂ ನಾನು ಈ ಸಿಹಿಸುದ್ದಿಯನ್ನು ಹಂಚಿಕೊಳ್ಳಲು ಬಹಳ ರೋಮಾಂಚಿತಗೊಂಡಿದ್ದೇವೆ. ನಮ್ಮ ಜೀವನದ ಈ ಹೊಸ ಅಧ್ಯಾಯಕ್ಕೆ ನಾವು ಸಿದ್ಧರಾಗಲು ನಿಮ್ಮ ಶುಭಹಾರೈಕೆ ಹಾಗೂ ಆಶೀರ್ವಾದಗಳು ಬೇಕಿವೆ’ ಎಂದಿದ್ದಾರೆ ಶ್ರೆಯಾ ಘೋಷಾಲ್.
ಗಾಯಕಿ ಶ್ರೆಯಾ ಘೋಷಾಲ್ ಹಾಗೂ ಶಿಲಾದಿತ್ಯ ಮುಖೋಪಾಧ್ಯಾಯ ಅವರುಗಳು 2015 ರ ಫೆಬ್ರವರಿ 05 ರಂದು ವಿವಾಹವಾಗಿದ್ದರು. ಮದುವೆಗೆ ಮುನ್ನಾ ಈ ಇಬ್ಬರೂ ಹತ್ತು ವರ್ಷಗಳ ಕಾಲ ಪ್ರೀತಿಸಿದ್ದರು.
2000 ರಲ್ಲಿ ‘ಸಾರೆಗಾಮಪಾ’ ರಿಯಾಲಿಟಿ ಶೋ ನಲ್ಲಿ ಹಾಡಲು ಆರಂಭಿಸಿದ ಶ್ರೆಯಾ ಘೋಷಾಲ್ ಈ 21 ವರ್ಷಗಳಲ್ಲಿ ಸಾವಿರಾರು ಹಾಡುಗಳನ್ನು ಹಾಡಿದ್ದಾರೆ. ಕನ್ನಡದಲ್ಲಿಯೂ ಹಲವಾರು ಹಿಟ್ ಹಾಡುಗಳಿಗೆ ಶ್ರೆಯಾ ಘೋಷಾಲ್ ದನಿ ಇದೆ.
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು