ಖಾತೆ ಬದಲಾವಣೆ ನಿರ್ಧಾರದಲ್ಲಿ ರಚ್ಚೆ ಹಿಡಿದಿದ್ದ ಸಚಿವ ಶ್ರೀರಾಮು ಕೊನೆಗೂ ಸಿ ಎಂ ಸಂಧಾನದಲ್ಲಿ ತಣ್ಣಗಾಗಿದ್ದಾರೆ
ಸಿಎಂ ಬಿಎಸ್ ಯಡಿಯೂರಪ್ಪ ನಿವಾಸದಲ್ಲಿ ಮಂಗಳವಾರ ಬೆಳಿಗ್ಗೆ ಸಚಿವರಾದ ಡಾ. ಕೆ.ಸುಧಾಕರ್ ಮತ್ತು ಶ್ರೀರಾಮುಲು ಮಧ್ಯೆ ಸಿಎಂ ಸಂಧಾನ ಮಾಡಿದರು. ಕೇವಲ 5 ನಿಮಿಷಗಳಲ್ಲಿ ಮಾತುಕತೆ ಮಗಿಸಿದರ.
ಸಂಧಾನ ಸಭೆ ಬಳಿಕ ಇಬ್ಬರು ಸಚಿವರು ಮಾಧ್ಯಮ ದವರ ಜೊತೆ ಮಾತನಾಡಿ,
ಖಾತೆ ಬದಲಾವಣೆ ಮಾಡಿದ ವಿಚಾರವಾಗಿ ಒಳ್ಳೆಯ ಕೆಲಸ ಮಾಡಲು ಸಿಎಂ ಸಲಹೆ ಕೊಟ್ಟಿದ್ದಾರೆ. ನಮ್ಮಿಬ್ಬರನ್ನೂ ಕರೆಸಿ ಸಿಎಂ ಬಿಎಸ್ವೈ ಸೂಚನೆ ಕೊಟ್ಟಿದ್ದಾರೆ ಎಂದು ಶ್ರೀರಾಮುಲು ಹೇಳಿದರು.
ಸಿಎಂ ಬಿಎಸ್ವೈ ಬಳಿ ಈ ಹಿಂದೆಯೇ ಸಮಾಜ ಕಲ್ಯಾಣ ಖಾತೆ ಕೇಳಿದ್ದೆ. ಸಿಎಂ ನನಗೆ ಈಗ ಸಮಾಜ ಕಲ್ಯಾಣ ಖಾತೆ ಕೊಟ್ಟಿದ್ದಾರೆ. ನಾನು ಸಂತೋಷದಿಂದ ಈ ಖಾತೆ ವಹಿಸಿಕೊಂಡಿದ್ದೇನೆ. ನನ್ನ ಸ್ನೇಹಿತರಾಗಿರುವ ಸುಧಾಕರ್ ವೈದ್ಯರಾಗಿರುವ ಹಿನ್ನೆಲೆ ಸಿಎಂ ಅವರಿಗೆ ವೈದ್ಯಕೀಯ ಶಿಕ್ಷಣ ಜೊತೆ ಆರೋಗ್ಯ ಇಲಾಖೆಯನ್ನು ವಹಿಸಿದ್ದಾರೆ ಎಂದು ಶ್ರೀರಾಮುಲು ಹೇಳಿದರು.
ಈ ಹಿಂದೆ ಕೆ.ಸುಧಾಕರ್ ಗೆ ಬೆಂಗಳೂರು ಉಸ್ತುವಾರಿ ನೀಡಿದ್ದರು. ಸುಧಾಕರ್ ಕೊರೊನಾ ವಿಚಾರದಲ್ಲಿ ಬೆಂಗಳೂರು ಉಸ್ತುವಾರಿಯಾಗಿದ್ರು. ನಾನಿದ್ದಾಗ ಬೆಂಗಳೂರಲ್ಲಿ ಕೊರೊನಾ ಕೇಸ್ ಸಾವಿರ ಇತ್ತು. ಸುಧಾಕರ್ ಪಡೆದ ಬಳಿಕ ಕೊರೊನಾ ಕೇಸ್ 5000ಕ್ಕೇರಿತ್ತು. ಹೀಗೆಂದು ನಾನು ನಿಭಾಯಿಸಲು ವಿಫಲನಾಗಿದ್ದೇನೆ ಎಂದಲ್ಲ ಎಂದು ಶ್ರೀರಾಮುಲು ಪರೋಕ್ಷವಾಗಿ ಸುಧಾಕರ್ ಗೆ ಟಾಂಗ್ ಕೊಟ್ಟರು.
More Stories
ರಾಜ್ಯದಲ್ಲಿ ಮುಂದಿನ 5 ದಿನ ಮಳೆಯ ಮುನ್ಸೂಚನೆ
10 ಸಾವಿರ ಕೋಟಿ ಕೈಗಾರಿಕೆ ಸ್ಥಾಪನೆ: ಪ್ರಸ್ತಾವನೆಗೆ ಉನ್ನತ ಮಟ್ಟದ ಸಮಿತಿ ಒಪ್ಪಿಗೆ
ನಾನೊಬ್ಬ ರೈತ (ರೈತ ದಿನಾಚರಣೆಯ ಪ್ರಯುಕ್ತ )