January 6, 2025

Newsnap Kannada

The World at your finger tips!

drug,bollywood,banglore

Shraddha Kapoor's brother Siddhant seized by police in Bangalore

ಬೆಂಗಳೂರಲ್ಲಿ ಡ್ರಗ್ಸ್ ಪಾರ್ಟಿ: ಶ್ರದ್ಧಾ ಕಪೂರ್ ಸಹೋದರ ಸಿದ್ಧಾಂತ್ ಪೋಲಿಸ್ ವಶಕ್ಕೆ

Spread the love

ಬಾಲಿವುಡ್ ನಟಿ ಶ್ರದ್ಧಾ ಕಪೂರ್ ಸಹೋದರ ಸಿದ್ಧಾಂತ್ ಕಪೂರ್ ಅವರನ್ನು ಬೆಂಗಳೂರು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ

ಇದನ್ನು ಓದಿ -ಚೀರನಹಳ್ಳಿಯಲ್ಲಿ ನವ ವಿವಾಹಿತರಿಗೆ ಕಿರುಕುಳ ನೀಡಿದ ಗ್ರಾಮಾಂತರ ಪೋಲಿಸರು : ನೆರವಿಗೆ ಧಾವಿಸಿದ ಮಂಡ್ಯ SP

ಕಳೆದ ರಾತ್ರಿ ಎಂಜಿ ರಸ್ತೆಯಲ್ಲಿರುವ ಹೋಟೆಲ್ ಒಂದರಲ್ಲಿ ಪಾರ್ಟಿ ನಡೆದಿತ್ತು. ಈ ಪಾರ್ಟಿ ವೇಳೆ ಅವರು ಡ್ರಗ್ಸ್​ ಸೇವನೆ ಮಾಡಿದ್ದಾರೆ ಅನ್ನುವ ಆರೋಪದ ಮೇಲೆ ವಶಕ್ಕೆ ಪಡೆದುಕೊಂಡಿದ್ದಾರೆ ಎನ್ನಲಾಗಿದೆ.

ಸಿದ್ಧಾಂತ್​ರನ್ನು ವಶಕ್ಕೆ ಪಡೆದಿರುವ ಪೊಲೀಸರು, ಡ್ರಗ್​​ ಸೇವನೆ ಮಾಡಿದ್ದಾರೆ ಅಥವಾ ಇಲ್ಲವೋ ಎನ್ನುವುದನ್ನು ತಿಳಿಯಲು ಸ್ಯಾಂಪಲ್ಸ್​​ ಅನ್ನ ವೈದ್ಯಕೀಯ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ ಎಂದು ತಿಳಿದು ಬಂದಿದೆ.

ಬಾಲಿವುಡ್​​ ನಟ ಪಾರ್ಟಿಯಲ್ಲಿ ಭಾಗಿಯಾಗಿದ್ದರು ಎನ್ನಲಾಗಿರುವ ಸುಮಾರು 50ಕ್ಕೂ ಹೆಚ್ಚು ಯುವಕ, ಯುವತಿಯರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!