January 11, 2025

Newsnap Kannada

The World at your finger tips!

anne bath

ಮೈಸೂರು ಮೃಗಾಲಯದಲ್ಲಿ ಪ್ರಾಣಿಗಳಿಗೆ ಶವರ್ ಬಾತ್ – ಮಕ್ಕಳಿಗಂತೂ ನೋಡೋಕೆ ಖುಷಿ

Spread the love

ಮೈಸೂರು ಮೃಗಾಲಯದ ಪ್ರಾಣಿಗಳಿಗಾಗಿ ಶವರ್​ ಬಾತ್ ವ್ಯವಸ್ಥೆ ಮಾಡಲಾಗಿದೆ. ಈ ಮೂಲಕ ಬೇಸಿಗೆ ಬಿಸಿಲಿನ ಧಗೆಯನ್ನು ತಗ್ಗಿಸುವ ಪ್ರಯತ್ನ ಅಧಿಕಾರಿಗಳದ್ದು.

ಮೈಸೂರಿನಲ್ಲಿ ಬಿಸಿಲ ಬೇಗೆ ದಿನೇ ದಿನೇ ಹೆಚ್ಚುತ್ತಿದೆ. ಬೇಸಿಗೆ ಜನರನ್ನು ಮಾತ್ರವಲ್ಲ ಪ್ರಾಣಿಗಳಿಗೂ ಸಂಕಷ್ಟ ತಂದೊಡ್ಡಿದೆ. ಅದರಲ್ಲೂ ಪಕ್ಷಿಗಳು ಹನಿ ಹನಿ‌ಗೂ ಪರದಾಡುತ್ತಿವೆ. ಆದರೆ ಈ ಬಿರು ಬೇಸಿಗೆಯಲ್ಲೂ ಮೃಗಾಲಯದ ಪ್ರಾಣಿ-ಪಕ್ಷಿಗಳನ್ನು ತಂಪಾಗಿಡುವ ಹೊಸ ಪ್ರಯತ್ನ ಮೆಚ್ಚುಗೆಗೆ ಕಾರಣವಾಗಿದೆ.

zoo water 2

ಮೈಸೂರು ಮೃಗಾಲಯದಲ್ಲಿ ಅಳವಡಿಸಿರುವ ನೀರು ಸಿಂಪಡಿಸುವ ಯಂತ್ರಗಳು ಮತ್ತು ಆನೆಗಳಿಗಾಗಿ ವಿಶೇಷವಾಗಿ ಸಿದ್ಧಪಡಿಸಿರುವ ಶವರ್ ವ್ಯವಸ್ಥೆ ಇದೆ. ಅಧಿಕಾರಿಗಳು, ಮೃಗಾಲಯದ ಪ್ರಾಣಿಗಳಿಗೆ ಸ್ಪ್ರಿಂಕ್ಲರ್​ನ ಅಳವಡಿಸಿದ್ದಾರೆ. ಈ ಮೂಲಕ ಪ್ರಾಣಿಗಳ ಮೇಲೆ ನೀರಿನ ಸಿಂಚನ ಮಾಡಲಾಗುತ್ತಿದೆ. ಪ್ರಾಣಿಗಳು ಕೂಲಾಗಿರುವಂತೆ ನೋಡಿಕೊಳ್ಳಲಾಗುತ್ತಿದೆ.

ಮಧ್ಯಾಹ್ನದ ವೇಳೆ ಈ ಸ್ಪ್ರಿಂಕ್ಲರ್ ಆರಂಭ :

ನೀರಿನ ಸ್ಪ್ರಿಂಕ್ಲರ್​ನ ಪ್ರತಿಯೊಂದು ಪ್ರಾಣಿಯ ಬೋನ್ ಬಳಿಯೂ ಅಳವಡಿಸಲಾಗಿದೆ. ಮಧ್ಯಾಹ್ನದ ವೇಳೆ ಈ ಸ್ಪ್ರಿಂಕ್ಲರ್ ಆನ್ ಮಾಡಲಾಗುತ್ತೆ. ಸ್ಪ್ರಿಂಕ್ಲರ್​ಗಳಿಂದ ಚಿಮ್ಮುವ ನೀರನ್ನು ಝೂನ ಪ್ರಾಣಿಗಳು ಎಂಜಾಯ್ ಮಾಡುತ್ತಿವೆ.

zoo water 1

ಜೊತೆಗೆ ಬೇಸಿಗೆ ಹಿನ್ನೆಲೆ ಪ್ರಾಣಿಗಳ ಆಹಾರ ಪದ್ಧತಿಯಲ್ಲಿ ಬದಲಾವಣೆ ಮಾಡಲಾಗಿದೆ. ಸಸ್ಯಹಾರಿ ಪ್ರಾಣಿಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಹಣ್ಣು ನೀಡಲಾಗುತ್ತಿದೆ.

zoo water 3

ಪ್ರಾಣಿಗಳಿಗೂ ಎಳ ನೀರು :

ಎಳನೀರು ಸೇರಿದಂತೆ ದ್ರವರೂಪದ ಪದಾರ್ಥಗಳನ್ನು ನೀಡಲಾಗುತ್ತಿದೆ. ಪ್ರಾಣಿಗಳ ಆರೋಗ್ಯದ ದೃಷ್ಟಿಯಿಂದ ಝೂ ಆಡಳಿತ ಆಧಿಕಾರಿಗಳು ಕ್ರಮಕೈಗೊಂಡಿದ್ಧಾರೆ. ಬೇಸಿಗೆ ಅಂತ್ಯವಾಗುವವರೆಗೆ ಈ ರೀತಿ ಪ್ರಾಣಿಗಳಿಗೆ ಕೊಡುವ ಆಹಾರ ಪದ್ಧತಿಯಲ್ಲು ಬದಲಾವಣೆ ಇರುತ್ತದೆ.
ಅಧಿಕಾರಿಗಳ ಈ ಎಲ್ಲಾ ಪ್ರಯತ್ನಕ್ಕೆ ಪ್ರವಾಸಿಗರು ಕೂಡ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!