ಚಾಮರಾಜನಗರ
ಚಾಮರಾಜನಗರದ ಪ್ರಾಚೀನ ಹೆಸರು ಅರಿಕುಠಾರ
ಇಲ್ಲಿಯೇ ಜನಿಸಿದ್ದರಂತೆ ೯ನೆ ಚಾಮರಾಜ ಒಡೆಯರ್
ಕಾಲಾನಂತರ ಮಗ ಮುಮ್ಮಡಿ ಕೃಷ್ಣರಾಜ ಒಡೆಯರ್
ಅರಿಕುಠಾಕ್ಕೆ ತಂದೆಯ ಹೆಸರಿಟ್ಟರು ಚಾಮರಾಜನಗರ
ಗಂಗರು ಹೊಯ್ಸಳರು ವಿಜಯನಗರದ ಅರಸರು
ಟಿಪ್ಪುಸುಲ್ತಾನ ಮೈಸೂರು ಅರಸರು ಆಳಿದರು
ಚಾಮರಾಜನಗರ ಜಿಲ್ಲೆ ಭೂಪಟದಲ್ಲಿ ಬಾಹುಬಲಿಯ
ಬಲ ಭಾಗದ ಪಾದುಕೆಯಂತೆ ಕಂಗೊಳಿಸುತ್ತದೆ
ಚಾಮರಾಜನಗರ ಗುಂಡ್ಲುಪೇಟೆ ಯಳಂದೂರು
ಕೊಳ್ಳೆಗಾಲ ಹಾಗೂ ಹನೂರು ೫ ತಾಲ್ಲೂಕುಗಳು
ರೇಷ್ಮೆ ಉದ್ಯಮಕೆ ರೇಷ್ಮೆ ನಗರವೆಂದೇ ಕರೆಸಿಕೊಂಡಿದೆ
ಚಾಮರಾಜನಗರದಲ್ಲಿ ರೇಷ್ಮೆ ನೇಯ್ಗೆಯ ಕೇಂದ್ರವಿದೆ
ಸುವರ್ಣಾವತಿ ಚಿಕ್ಕಹೊಳೆ ಮೋಯಾರ್ ನದಿಗಳು
ಕಾವೇರಿ ಹಾಗೂ ಭಾರ್ಗವಿ ಇಲ್ಲಿ ಹರಿಯುವ ನದಿಗಳು
ಸುವರ್ಣಾವತಿ ಹಾಗೂ ಚಿಕ್ಕಹೊಳೆ ಜಲಾಶಯಗಳು
ಅರಿಶಿಣ ಕಬ್ಬು ರಾಗಿ ಜೋಳ ಚಿಯಾ ಇಲ್ಲಿನ ಬೆಳೆಗಳು
ಗುಂಡಾಲ್ ಅಣೆಕಟ್ಟು ಶಿವನ ಸಮುದ್ರ ಜಲಪಾತ
ಹೊಗೆನಿಕಲ್ ಜಲಪಾತಗಳೆಂಬ ಜಲಮೂಲಗಳು
ಬಿಳಿಗಿರಿ ರಂಗನ ಬೆಟ್ಟ ಮಲೆಮಹಾದೇಶ್ವರ ಬೆಟ್ಟ
ಹಿಮವದ್ಗೋಪಾಲಸ್ವಾಮಿ ಬೆಟ್ಟ ಹೆಸರಿನ ಬೆಟ್ಟಗಳು
ಕರ್ನಾಟಕದಲ್ಲೇ ಅತಿ ಹೆಚ್ಚು ಬುಡಕಟ್ಟು ಜನಾಂಗ
ಸೋಲಿಗ ಮತ್ತು ಗೊಂದಲಿಗ ಎಂಬ ಜನಾಂಗದವರು
ಬಿಳಿಗಿರಿ ರಂಗನ ವನ್ಯಜೀವಿ ಅಭಯಾರಣ್ಯ ಅಲ್ಲದೆ
ಬಂಡೀಪುರ ರಾಷ್ಟ್ರೀಯ ಉದ್ಯಾನವೂ ಇಲ್ಲಿಹುದು
ಆಧುನಿಕ ಕನ್ನಡದ ಮೊದಲ ನಾಟಕಕಾರ ಸಿಂಸರವರು
ಮುನ್ನಾ ಕೂಡು ಚಿನ್ನಸ್ವಾಮಿ ಎಂಬ ಪ್ರಸಿದ್ಧ ಕವಿಗಳು
ಜಾನಪದ ತಜ್ಞ ಹೊಂಗನೂರು ನಂಜಯ್ಯನವರು
ಡಾ ರಾಜಕುಮಾರ್ ನಿರ್ದೇಶಕ ಎಸ್ ಮಹೇಂದರ್
ನಟ ಅವಿನಾಶ್ ಬಿ ರಾಚಯ್ಯನವರು ಮೌಲ್ಯಯುತ
ರಾಜಕಾರಣಿಗಳಲ್ಲದೆ ಆರ್ ಧೃವನಾರಾಯಣ್ ರವರು
ಈ ಜಿಲ್ಲೆಯ ಸುಪ್ರಸಿದ್ಧ ರಾಜಕಾರಣಿಗಳಿವರಿಬ್ಬರೂ
ಮೇಲ್ಕಂಡವರೆಲ್ಲರೂ ಈ ಜಿಲ್ಲೆಯ ಖ್ಯಾತ ನಾಮರು
ಚಾಮರಾಜೇಶ್ವರ ವರದರಾಜ ದೇವಾಲಯಗಳು
ಅರ್ಕೇಶ್ವರ ವೀರಭದ್ರ ಗುಡಿ ಜೈನ ಬಸದಿಗಳು
ಮಲೆಮಹದೇಶ್ವರ ಶಿವನ ಸಮುದ್ರದ ಮಾರಮ್ಮ ಗುಡಿ
ಗೌರೀಶ್ವರ ದೇವಾಲಯ ಇತ್ಯಾದಿ ಧಾರ್ಮಿಕ ನೆಲೆಗಳು
ಕಲಾವತಿ ಪ್ರಕಾಶ್
ಬೆಂಗಳೂರು.
(ಜಿಲ್ಲೆ ೩೧)
More Stories
ಮೈಸೂರು- 40 ಸಾವಿರ ಲಂಚ ಸ್ವೀಕರಿಸುತ್ತಿದ್ದ ಬಿಲ್ ಕಲೆಕ್ಟರ್ ಲೋಕಾಯುಕ್ತ ಬಲೆಗೆ
IDBI ಬ್ಯಾಂಕಿನಲ್ಲಿ 600 ಹುದ್ದೆಗಳ ನೇಮಕಾತಿ – 2024
ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವಾ ದರ ಹೆಚ್ಚಳ