December 23, 2024

Newsnap Kannada

The World at your finger tips!

Map karnataka flag

ಕರುನಾಡ ಜಿಲ್ಲೆಗಳ ಕಿರು ಪರಿಚಯ – 8 – ಗದಗ

Spread the love

ಕಲಾವತಿ ಪ್ರಕಾಶ್
ಬೆಂಗಳೂರು

ಕೃತಕ,ಕೃತಕಪುರ,ಗದಗು,ಎಂಬೆಲ್ಲ
“ಗದಗ” ಕ್ಕೆ ಇರುವ ಹೆಸರುಗಳು
ಚಾಲುಕ್ಯ ಹೊಯ್ಸಳರಾಳ್ವಿಕೆಯಲ್ಲಿ
ಬೆಳೆಸಿದಂಥ ಕಲೆ ಸಾಹಿತ್ಯ ವಾಸ್ತು ಶಿಲ್ಪಗಳು

ಲಕ್ಕುಂಡಿಯ ಮುಕ್ತಾಯಕ್ಕರು
ಕುಮಾರವ್ಯಾಸರ ಕರ್ಮ ಭೂಮಿಯು
ಗದಗ ಜಿಲ್ಲೆಯೇ ಕವಿ ಚಾಮರಸರ
ಜೀವಿಸಿದಂಥ ಜನ್ಮ ಭೂಮಿಯು

ತುಂಗಭದ್ರಾ ಮಲಪ್ರಭಾ ಬೆಣ್ಣೆ ಹಳ್ಳಗಳು
ಮೈದುಂಬಿ ಹರಿಯುವ ನಾಡು ಇದು
ಗದಗ ಬೆಟಗೇರಿ ಎಂಬ ನಗರಗಳು
ಅವಳಿ ನಗರವೆಂಬ ಬಿರುದಿಹುದು

ಮುದ್ರಣಾಲಯಗಳ ರಾಜಧಾನಿ ಹೆಗ್ಗಳಿಕೆ ಇದಕುಂಟು
ಕೈ ಮಗ್ಗದ ಉದ್ಯಮಕೆ ಹೊಸ ಆಯಾಮದ ಹುಟ್ಟು
ವಲಸಿಗ ಹಕ್ಕಿಗಳಿಗೆ ಮಾಗಡಿಯ ಪಕ್ಷಿಧಾಮ ಇಲ್ಲುಂಟು
ಭೀಷ್ಮಕೆರೆ ಬಸವಣ್ಣನ ಪ್ರತಿಮೆ ಅಡಿ ಎತ್ತರ ನೂರೆಂಟು

ಆಧುನಿಕ ಸಾಹಿತಿ ಸ್ವಾತಂತ್ರ್ಯ ಹೋರಾಟಗಾರ
ಹುಯಿಲಗೋಳ ನಾರಾಯಣರು
ವಿಜಯ ಕರ್ನಾಟಕ ವಿಜಯ ವಾಣಿಯ
ಸಂಸ್ಥಾಪಕರಿವರು ಗದುಗಿನ ವಿಜಯ ಸಂಕೇಶ್ವರರು

ಅಂಧರ ಬಾಳಿಗೆ ಬೆಳಕಾದವರು
ಪಂಡಿತ್ ಪಂಚಾಕ್ಷರಿ ಗವಾಯಿಗಳು
ಆಸ್ಥಾನದ ವಿದ್ವಾನ್ ಪಂಡಿತ್
ಪುಟ್ಟರಾಜ ಗವಾಯಿಗಳು

ಭಾರತ ರತ್ನ ಪ್ರಶಸ್ತಿ ಪುರಸ್ಕೃತ
ಪಂಡಿತ್ ಭೀಮಸೇನ್ ಜೋಷಿ
ಇವರು ಹುಟ್ಟೂದ್ದೂ ಗದಗ ಎಂದು
ಹೇಳಿಕೊಳ್ಳೋಕೆ ಬಲು ಖುಷಿ

ಸಾಹಿತ್ಯ ಕ್ಷೇತ್ರದ ರಂ.ಶ್ರೀ.ಮುಗಳಿಯವರು
ಚನ್ನವೀರ ಕಣವಿ R C ಹಿರೇಮಠರು
ಗದಗ ಜಿಲ್ಲೆಯ ಹುಯಿಲಗೋಳ ನಾರಾಯಣರು
ಆಲೂರು ವೆಂಕಟರಾಯ ಭೂಸನೂರರು

ಸಾಹಿತ್ಯ ಸಂಸ್ಕೃತಿ ಕಲೆ ಅಧ್ಯಾತ್ಮದ
ಉದ್ದಿಮೆಗಳ ನಾಡು ಈ ಗದಗ
ಹಾಕಿಯ ಮಾಂತ್ರಿಕ ರಾಜು ಬಾಗಡೆಯವರ
ಕ್ರಿಕೇಟ್ ಆಟಗಾರ ಸುನಿಲ್ ಜೋಷಿಯದೂ ಈ ಗದಗ

ಕಲ್ಯಾಣಿ ಚಾಲುಕ್ಯರ ವಿಜಯನಗರ ಹೊಯ್ಸಳ ಶೈಲಿಯ ದೇವಾಲಯ ವೀರನಾರಾಯಣ
ತ್ರಿಕುಟೇಶ್ವರ ಸರಸ್ವತಿ ಮಂದಿರ
ಅತ್ತಿಮಬ್ಬೆ ಕಟ್ಟಿಸಿದ ಜಿನಾಲಯ

ಇತಿಹಾಸ ಪ್ರಸಿದ್ಧ ಲಕ್ಕುಂಡಿ ದೇವಾಲಯ
ಕಾಶಿ ವಿಶ್ವೇಶ್ವರ ಸೋಮೇಶ್ವರನ ದೇವಾಲಯ
ಶಿಲ್ಪ ಕಲೆಗಳ ಸುಮದರ ಸೌಧ ನೋಡಲು
ಕೈ ಬೀಸಿ ಕರೆಯುವ ಧರ್ಮಾಲಯ

Copyright © All rights reserved Newsnap | Newsever by AF themes.
error: Content is protected !!