ಕಲಾವತಿ ಪ್ರಕಾಶ್
ಬೆಂಗಳೂರು
ವಿಜಯನಗರ ರಾಜಮನೆತನದ ಗುರು ವಿದ್ಯಾರಣ್ಯರು
ಗುರುಗಳ ಹೆಸರನಿಟ್ಟರು ಹಕ್ಕ ಬುಕ್ಕರು
ವಿದ್ಯಾನಗರವೇ ವಿಜಯನಗರವಾಯಿತು
ಹಂಪಿಯ ಐತಿಹಾಸಿಕ ಹೆಸರೇ ಜಿಲ್ಲೆ ಆಯಿತು
ಈ ಸಾಮ್ರಾಜ್ಯದ ಸ್ಥಾಪಕರವರೇ ಹಕ್ಕ ಬುಕ್ಕರು
ಕಾಲಾನಂತರ ಪ್ರಸಿದ್ಧಿಗೆ ಕೃಷ್ಣದೇವರಾಯ ಕಾರಣರು
ಮುತ್ತುರತ್ನಗಳನ್ನು ಬಳ್ಳದೊಳಳೆಯುತಿದ್ದ ಕಾಲವದು
ಇದಕೆ ಪೌರಾಣಿಕ ಹಿನ್ನಲೆಯೂ ಇಹುದು
ದಾಕ್ಷಾಯಿಣಿ ಪರ್ವತ ರಾಜನ ಮಗಳಾಗಿ ಜನಿಸಿದ್ದು
ಶಿವನಿಗಾಗಿ ತಪವ ಮಾಡಿ ಮದುವೆಯಾದದ್ದು
ಶಬರಿ ಮಾತೆ ರಾಮನಿಗಾಗಿ ಇಲ್ಲೇ ಕಾಯುತಿದ್ದುದು
ಪಂಪಾ ಸರೋವರದ ಬಳಿ ಈಗಲೂ ಗುಹೆಯಿಹುದು
ಹೊಸಪೇಟೆ ಹಗರಿ ಬೊಮ್ಮನಹಳ್ಳಿ ಹೂವಿನ ಹಡಗಲಿ
ಕೂಡ್ಲಿಗಿ ಕೊಟ್ಟೂರು ಹರಪನಹಳ್ಳಿ ತಾಲ್ಲೂಕುಗಳಿಲ್ಲಿ
ಹೊಸಪೇಟೆ ವಿಜಯನಗರ ಜಿಲ್ಲೆಯ ಆಡಳಿತ ಕೇಂದ್ರ
ಇಲ್ಲಿ ಕಟ್ಟಲಾದ ಜಲಾಶಯ ಅದುವೇ ನದಿ ತುಂಗಭದ್ರ
ಭಾರತದ ಎತ್ತರದ ಧ್ವಜಸ್ತಂಭ ಹೊಸಪೇಟೆಯಲ್ಲಿದೆ
ಉಕ್ಕಿನ ಕಾರ್ಖಾನೆಯಿಂದಿದು ಉಕ್ಕಿನ ನಗರವೆನಿಸಿದೆ
ಹಗರಿಬೊಮ್ಮನಹಳ್ಳಿಯ ದನಗಳ ಸಂತೆಗೆ ಹೆಸರಾಗಿದೆ
ಹೂವಿನಹಡಗಲಿ ಮಲ್ಲಿಗೆಗೆ ಪ್ರಸಿದ್ಧವಾಗಿದೆ
ಕೂಡ್ಲಗಿ ಪ್ರಸಿದ್ಧಿ ಪಡೆದಿದೆ ಈಗ ಹುಣಸೆಗೆ
ಹೆಸರಾದ ಮಿರ್ಚಿ ಮಂಡಕ್ಕಿ ಭಾಗ್ಯಲಕ್ಷ್ಮಿ ಪಾನಿಪೂರಿಗೆ
ಬಂಡೆ ರಂಗನಾಥ ದೇಗುಲ ಕೊಟ್ಟೂರು ಬಸವೇಶ್ವರ
ಹಕರತ್ಮಹಮ್ಮದ್ದರ್ಗಾ ದೇವಾಲಯ ಜಂಬೂನಾಥರ
ಪ್ರಪಂಚದಲ್ಲೇ ಭಾಷೆಗೆ ಹುಟ್ಟಿಕೊಂಡ ವಿದ್ಯಾಲಯ ಸ್ಥಾಪಿತವಾಗಿದೆ ಹಂಪಿಯ ಕನ್ನಡ ವಿಶ್ವ ವಿದ್ಯಾಲಯ
ನಾಡೋಜ ಪ್ರಶಸ್ತಿ ನೀಡುವುದೀ ವಿಶ್ವ ವಿದ್ಯಾಲಯ
ಕನ್ನಡದ ಪ್ರಸಿದ್ದ ಕಲಾವಿದ ಅಜಯ್ ರಾವ್ ಜಿಲ್ಲೆಯು
ಅತ್ಯಂತ ಸಮೃದ್ಧ ಪ್ರಬಲ ರಾಜ ಮನೆತನದವರು
೧೩೩೬ ರಿಂದ ೧೬೪೬ರವರೆಗೆ ಆಳ್ವಿಕೆ ಮಾಡಿದರು
ಶ್ರೀಕೃಷ್ಣದೇವರಾಯನ ಕಾಲವದು ಸುವರ್ಣಯುಗ
ಮುತ್ತುರತ್ನ ಬಜಾರ್ ಬೀದಿಯಲ್ಲಿ ಮಾರುತಿದ್ದರಾಗ
ಕಲ್ಲು ಕಲ್ಲಿನಲು ಕಲೆ ಅರಳಿಸಿದ ವೈಭವದ ಕಲಾನಾಡು
ಈಗ ನೋಡಲದು ಹಾಳಾದ ಹಂಪಿಯ ಬೀಡು
ಕಲ್ಲಿನ ರಥದ ಚಿತ್ರ ನೋಟಿನ ಮೇಲೆ ಮುದ್ರಿಸಲಾಗಿದೆ
ಹಂಪಿಯ ಕಲ್ಲಿನ ರಥ ನಮ್ಮ ಹೆಮ್ಮೆಯ ಪ್ರತೀಕವಾಗಿದೆ
ಭಾರತದ ಪುರಾತತ್ವ ತಾಣಗಳಲೊಂದು ಈ ಹಂಪಿ
ವಿಶ್ವ ಪರಂಪರೆಯ ತಾಣವೆಂದು ಗುರುತಿಸಿ ಹಂಪಿ
ಯುನೆಸ್ಕೊ ಮೆಚ್ಚಿ ಮಾಡಿದೆ ಘೋಷಣೆಯ
ಐತಿಹಾಸಿಕ ಸ್ಮಾರಕ ವಿರೂಪಾಕ್ಷ ದೇವಾಲಯ
೫೬ ಕಲ್ಲಿನ ಕಂಬಗಳ ವಿಜಯ ವಿಠಲನ ದೇವಾಲಯ ಕಂಬಗಳಲ್ಲಿ ಕೇಳುತ್ತೆ ಸಪ್ತ ಸ್ವರ ಹೊಮ್ಮುವ ಪರಿಯ
ಅಲ್ಲಿ ಸಾಸಿವೆಕಾಳು ಕಡಲೆ ಕಾಳು ಗಣಪನ ನೊಡುವಿರಿ
ಕಮಲ್ ಮಹಲ್ ಮಹಾನವಮಿ ದಿಬ್ಬ ಆನೆಲಾಯ ರೀ
- ಹೊರರಾಜ್ಯದ ಯುವತಿಯರನ್ನ ಕರೆಸಿ ಹೈಟೆಕ್ ವೇಶ್ಯಾವಾಟಿಕೆ ದಂಧೆ: ಆರೋಪಿ ಬಂಧನ
- ಬೆಂಗಳೂರಿನಲ್ಲಿ ಮಹಿಳೆಗೆ 30 ಲಕ್ಷ ರೂ. ವಂಚನೆ!
- ಎಪಿಗಾಮಿಯಾ ಸಹ-ಸಂಸ್ಥಾಪಕ ರೋಹನ್ ಮಿರ್ಚಂದಾನಿ ನಿಧನ
- ಮಾತೃವಾತ್ಸಲ್ಯದ ಗಣಿ, ಪ್ರೇಮಮಯಿ ಜಗನ್ಮಾತೆ ಶಾರದಾದೇವಿ
- ಜನವರಿ 23, 24, 25 ರಂದು ಅಂತರಾಷ್ಟ್ರೀಯ ಸಿರಿಧಾನ್ಯ ಮೇಳ ಜರುಗಲಿದೆ: ಎನ್ ಚಲುವರಾಯಸ್ವಾಮಿ
More Stories
ಹೊರರಾಜ್ಯದ ಯುವತಿಯರನ್ನ ಕರೆಸಿ ಹೈಟೆಕ್ ವೇಶ್ಯಾವಾಟಿಕೆ ದಂಧೆ: ಆರೋಪಿ ಬಂಧನ
ಬೆಂಗಳೂರಿನಲ್ಲಿ ಮಹಿಳೆಗೆ 30 ಲಕ್ಷ ರೂ. ವಂಚನೆ!
ಕುಂಭಮೇಳ ಪ್ರಯಾಣಿಕರಿಗೆ ಸುವಾರ್ತೆ: ಮೈಸೂರು-ಪ್ರಯಾಗ್ ರಾಜ್ ವಿಶೇಷ ರೈಲು ಸೇವೆ