December 25, 2024

Newsnap Kannada

The World at your finger tips!

kangana

ಹನುಮಾನ್ ಚಾಲೀಸಾ ಬ್ಯಾನ್ ಮಾಡಲು ಹೊರಟ ಈ ಠಾಕ್ರೆಯನ್ನು ಶಿವನೂ ಕಾಪಾಡುವುದು ಅಸಾಧ್ಯ – ನಟಿ ಕಂಗನಾ

Spread the love

ನಟಿ ಕಂಗನಾ ರಣಾವತ್​ ಅವರ ಕಚೇರಿ ‘ಮಣಿಕರ್ಣಿಕಾ’ ಕಟ್ಟಡವನ್ನು ಅಲ್ಲಿನ ಪಾಲಿಕೆ, ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್​ ಠಾಕ್ರೆ ಸೂಚನೆ ಮೇರೆಗೆ ಕಳೆದ ವರ್ಷ ನೆಲಸಮಗೊಳಿಸಿತ್ತು.

ಈ ವೇಳೆ ರೊಚ್ಚಿಗೆದ್ದಿದ್ದ ಕಂಗನಾ ಮಣಿಕರ್ಣಿಕಾ ಕಚೇರಿಯನ್ನು ಕೆಡವಿದ್ದೀರಿ, ಇಂದು ನನ್ನ ಮನೆ ಮುರಿದಿದೆ, ನಾಳೆ ನಿಮ್ಮ ಅಹಂಕಾರವೂ ಮುರಿಯಲಿದೆ ಎಂದು ನೇರವಾಗಿಯೇ ಟ್ವಿಟರ್​ ಮೂಲಕ ಅಸಮಾಧಾನ ಹೊರಹಾಕಿದ್ದರು.

ಠಾಕ್ರೆ ರಾಜೀನಾಮೆ ನೀಡಿ, ರಾಜ್ಯಪಾಲರಿಂದ ಅಂಗೀಕಾರ ಆಗಿರುವ ಹಿನ್ನೆಲೆಯಲ್ಲಿ ನಟಿ ಮತ್ತೊಮ್ಮೆ ಟ್ವೀಟ್​ ಮಾಡಿ ಟೀಕಿಸಿದ್ದಾರೆ. ಈಗ ಅವರು ಹನುಮಾನ್​ ಚಾಲೀಸಾದ ಕುರಿತು ಹೇಳಿದ್ದಾರೆ. ಠಾಕ್ರೆ ಈ ಹಿಂದೆ ಹನುಮಾನ್​ ಚಾಲೀಸಾವನ್ನು ಬ್ಯಾನ್​ ಮಾಡಿ ಎಂದು ಪದೇಪದೇ ಸೂಚನೆ ನೀಡಿದ್ದರು.

ಇದನ್ನು ಉಲ್ಲೇಖಿಸಿರುವ ನಟಿ ಕಂಗನಾ, ಹನುಮಾನ್​ ಚಾಲೀಸಾವನ್ನು ಬ್ಯಾನ್​ ಮಾಡಲು ಹೊರಟಿದ್ರಲ್ವಾ? ಈಗ ಗೊತ್ತಾಯ್ತಾ ಅದರ ತಾಕತ್ತು. ಹನುಮಂತನನ್ನು ಶಿವನ 12ನೇ ಅವತಾರ ಎಂದು ಹೇಳಲಾಗುತ್ತದೆ. ಶಿವ ಸೇನೆಯೇ ಹನುಮಾನ್​ ಚಾಲೀಸಾವನ್ನು ಬ್ಯಾನ್​ ಮಾಡಿದರೆ ಅವರನ್ನು ಸ್ವತಃ ಶಿವನೂ ಕಾಪಾಡಲು ಸಾಧ್ಯವಿಲ್ಲ ಎಂದ ನಟಿ, ಹರಹರ ಮಹದೇವ್​ ಎಂದು ಬರೆದುಕೊಂಡಿದ್ದಾರೆ.

ಮಹಾರಾಷ್ಟ್ರಕ್ಕೆ ನೂತನ ಸಿಎಂ : ಪ್ರಮಾಣ ವಚನ ಸ್ವೀಕರಿಸಲು ಫಡ್ನವಿಸ್ ಸಿದ್ಧತೆ

ಅಧಿಕಾರದ ಅಹಂಕಾರದಿಂದ ಆ ವಿಶ್ವಾಸವನ್ನು ಮುರಿದರೆ ಅಂಥವರ ಪ್ರತಿಷ್ಠೆ ನುಚ್ಚುನೂರಾಗುತ್ತದೆ ಎಂದು ನಾನು 2020ರಲ್ಲೇ ಹೇಳಿದ್ದೆ. ಇದು ಯಾವುದೇ ವ್ಯಕ್ತಿಯ ಶಕ್ತಿ ಅಲ್ಲ. ಇದು ಚರಿತ್ರೆಯ ಶಕ್ತಿ’ ಎಂದಿ​ದ್ದಾರೆ ಕಂಗನಾ ರಣಾವತ್​.

Copyright © All rights reserved Newsnap | Newsever by AF themes.
error: Content is protected !!