Uncategorized

ಶಿರಾ-ಆರ್‌ಆರ್‌ ನಗರ ಉಪ ಚುಣಾವಣೆ; ಕೋಟಿ ಕೋಟಿ ಕುಳಗಳೇ ಕಣದಲ್ಲೇ

ಕರ್ನಾಟಕದಲ್ಲಿನ ಉಪಚುಣಾವಣಾ ಕದನ ದಿನೇ ದಿನೇ ಕುತೂಹಲದ ತಿರುವನ್ನು ಪಡೆದುಕೊಳ್ಳುತ್ತಿದೆ. ಚುಣಾವಣೆ ಎನ್ನುವುದು ಇಂದಿನ ದಿನಗಳಲ್ಲಿ ದಲ್ಲಾಳಿ ಮಾರುಕಟ್ಟೆಯಂತಾಗಿದೆ.

ಪ್ರತಿಯೊಂದು ಮತಕ್ಕೂ ಒಂದು ನಿಗದಿತ ಮೊತ್ತ ಒಬ್ಬ ಮತದಾರನಿಗೆ ಹೋಗುತ್ತದೆ. ಇದೀಗ ಶಿರಾ-ಆರ್‌ಆರ್ ನಗರದ ಉಪ ಚುಣಾವಣೆಯಲ್ಲಿ ಸ್ಪರ್ಧಿಸಲಿರುವ ಅಭ್ಯರ್ಥಿಗಳ ಆಸ್ತಿವಿವರ ಲಭ್ಯವಾಗಿದೆ.

ಅಮ್ಮಾಜಮ್ಮ

ಸಿರಾ ಉಪಚುಣಾವಣೆಯ ಜೆಡಿಎಸ್ ಅಭ್ಯರ್ಥಿ ಅಮ್ಮಾಜಮ್ಮ, ಮೃತ ಜೆಡಿಎಸ್‌ನ ಶಾಸಕ, ಮಾಜಿ ಸಚಿವ ದಿವಂಗತ ಸತ್ಯನಾರಾಯಣರ ಪತ್ನಿ. ಇವರು ಚುಣಾವಣಾ ಆಯೋಗಕ್ಕೆ ನೀಡಿರುವ ಮಾಹಿತಿಯ ಪ್ರಕಾರ ಇವರ ಸರಾಸರಿ ಒಟ್ಟು ನಗದು (ಆಭರಣ, ಕಾರುಗಳು, ಇತರರಿಗೆ ನೀಡಿದ ಹಣದ ಸಹಿತ) 51,04,334 ರೂ ಗಳಾಗಿವೆ. ಇವರ ಬಳಿ ಸದ್ಯ 25,000 ನಗದು ಹಣವಿದೆ. 60,00,0000 ರೂ ಬೆಲೆಯ 1200 ಗ್ರಾಂ ಬಂಗಾರ ಹಾಗೂ 4,20,000 ರೂ ಬೆಲೆಯ 7 ಕೆಜಿ ಬೆಳ್ಳಿ ಇದೆ. 1,80,22,750 ರೂ ಬೆಲೆಯ ಕೃಷಿ ಭೂಮಿ ಹಾಗೂ ಇತರೆ ಭೂಮಿಯಿದೆ. ಪ್ರಸ್ತುತ 2,32,54,784 ರೂ ಗಳ ಮಾರುಕಟ್ಟೆ ಮೌಲ್ಯದ ಕಟ್ಟಡಗಳನ್ನು ಹೊಂದಿದ್ದಾರೆ. ತಾವರೆಕೆರೆ, ಸಿರಾದ ಕೆನರಾ ಬ್ಯಾಂಕ್‌ಗಳಲ್ಲಿ, ಸಿರಾದ ಟಿ.ಸಿ. ಬ್ಯಾಂಕ್ ಹಾಗೂ ತುಮಕೂರಿನ ಎಸ್‌ಬಿಐ ಬ್ಯಾಂಕುಗಳಲ್ಲಿ ಅಮ್ಮಾಜಮ್ಮ ಖಾತೆಗಳನ್ನು ಹೊಂದಿದ್ದಾರೆ.

ಟಿ.ಬಿ. ಜಯರಾಮ್

ಸಿರಾದ ಉಪಚುಣಾವಣೆಯ ಕಾಂಗ್ರೆಸ್ ಅಭ್ಯರ್ಥಿ ಟಿ.ಬಿ. ಜಯರಾಮ್ ಅವರ ಒಟ್ಟು ಹಣ ಅವರ ಬಳಿ ಇರುವ ಸರಾಸರಿ ಒಟ್ಟು ನಗದು ಆಸ್ತಿ (ಆಭರಣ, ಕಾರುಗಳು, ಇತರರಿಗೆ ನೀಡಿದ ಹಣದ ಸಹಿತ) 1,68,845.57 ರೂಗಳು. ಒಟ್ಟು ಹಣ 1,33,81,409.41 ರೂಗಳು. ಜಯರಾಮ್ ಅವರ ಬಳಿ 100 ಗ್ರಾಂ ನಗದು ಇದೆ. ಅದರ ಮೌಲ್ಯ 1,00,000 ರೂ ಗಳು.ಅವರ ಹೆಂಡತಿಯ ಬಳಿ 11,44,700 ರೂ ಮೌಲ್ಯದ 610 ಗ್ರಾಂ ಬಂಗಾರವಿದೆ. 1,50,000 ಮೌಲ್ಯದ 2.5 ಕೆಜಿ ಬೆಳ್ಳಿಯಿದೆ. ಕೃಷಿ ಭೂಮಿ, ಕೃಷಿಗೆ ಒಳಪಡದ ಭೂಮಿ, ಹಾಗೂ ಇತರೆ ಕಟ್ಟಡಗಳು ಸೇರಿದಂತೆ ಪ್ರಸ್ತುತ ಮಾರುಕಟ್ಟೆ ಮೌಲ್ಯದಲ್ಲಿ 13,10,00,000 ರೂ ಗಳು. 2020-21 ವಾರ್ಷಿಕ ಆದಾಯ 68,01,856 ರೂ ಗಳಾಗಿವೆ. ಅಪೆಕ್ಸ್ ಬ್ಯಾಂಕ್‌ನಲ್ಲಿ 1 ಖಾತೆ, ಬ್ಯಾಂಕ್ ಆಫ್ ಬರೋಡಾ ಪ್ಯಾಲೇಸ್ ಆರ್ಚರ್ಡ್ಸ್‌ನ ಶಾಖೆಯಲ್ಲಿ 3 ಖಾತೆಗಳು, ಸಿರಾದ ಕೆನರಾ ಬ್ಯಾಂಕ್‌ನಲ್ಲಿ 1 ಖಾತೆಗಳನ್ನು ಹೊಂದಿದ್ದಾರೆ. ಅಲ್ಲದೇ ಇವರ ಮೇಲೆ ಒಟ್ಟು ನಾಲ್ಕು ಅಪರಾಧದ ಪ್ರಕರಣಗಳೂ ಇವೆ.

ಮುನಿರತ್ನ
ರಾಜ ರಾಜೇಶ್ವರಿ ನಗರದ ಉಪ ಚುಣಾವಣೆಯ ಬಿಜೆಪಿ ಅಭ್ಯರ್ಥಿ ಮುನಿರತ್ನ ಅವರ ಬಳಿ ಇರುವ ಸರಾಸರಿ ಒಟ್ಟು ಹಣ (ಆಭರಣ, ಕಾರುಗಳು, ಇತರರಿಗೆ ನೀಡಿದ ಹಣದ ಸಹಿತ) 26,11,16, 191 ರೂ ಗಳು. ಅವರ ಬಳಿ ಇರುವ ನಗದು ಹಣ 10,66,420 ರೂ ಗಳು. ಮುನಿರತ್ನ ಅವರ ಬಳಿ 1,23,99,005 ರೂ ಮೌಲ್ಯದ ವಜ್ರ (111.27 ಕ್ಯಾರಟ್) ಬಗಾರ (3930.45 ಗ್ರಾಂ) ಬೆಳ್ಳಿ (40.94 ಕೆಜಿ) ಹಾಗೂ ಅವರ ಪತ್ನಿ ಬಳಿ, 4,40,000 ಮೌಲ್ಯದ ಬಂಗಾರದ ಆಭರಣಗಳಿವೆ. ಅಲ್ಲದೇ 10,69,37,000 ರೂಗಳ (ಪ್ರಸ್ತುತ ಮಾರುಕಟ್ಟೆ ಮೌಲ್ಯ 51,91,97,400 ರೂ ಗಳು) ಕೃಷಿಗೆ ಒಳಪಡುವ, ಇತ್ರೆ ವಾಣಿಜ್ಯ ಉದ್ದೇಶಗಳಿಗೆ ಇರುವ ಭೂಮಿ, ಹಾಗೂ ವಾಣಿಜ್ಯ ಮತ್ತು ವಾಸಸ್ಥಳದ ಕಟ್ಟಡಗಳು ಇವರ ಹೆಸರಿನಲ್ಲಿವೆ. ನಾಮಪತ್ರದಲ್ಲಿ ತೋರಿಸಿರುವ ಪ್ರಕಾರ ಅವರ ಒಟ್ಟು ಆದಾಯ 52,85,710 ರೂ ಗಳು. ಅಲ್ಲದೇ ಇವರ ಮೇಲೆ 10 ಕ್ಕೂ ಅಪರಾಧ ಹಾಗೂ ಇನ್ನಿತರೆ ಪ್ರಕರಣಗಳಿವೆ. ಅವುಗಳಲ್ಲಿ ಇನ್ನೂ 5 ಪ್ರಕರಣಗಳಲ್ಲಿ ವಿಚಾರಣೆ ಎದುರಿಸುತ್ತಿದ್ದಾರೆ.

ಕುಸುಮ . ಹೆಚ್


ರಾಜ ರಾಜೇಶ್ವರಿ ನಗರ ಉಪ ಚುಣಾವಣೆಯ ಕಾಂಗ್ರೆಸ್ ಅಭ್ಯರ್ಥಿ ಕುಸುಮ ಹೆಚ್ ಅವರ ಬಳಿ ಇರುವ ಸರಾಸರಿ ಒಟ್ಟು ಹಣ (ಆಭರಣ, ಕಾರುಗಳು, ಇತರರಿಗೆ ನೀಡಿದ ಹಣದ ಸಹಿತ) 1,13,02,197.38 ರೂ ಗಳು. ಸದ್ಯ ಅವರ ಬಳಿ ಇರುವ ನಗದು 1,41,050 ರೂ ಗಳು. ನಾಗರ ಭಾವಿಯ ಕೆನರಾ ಬ್ಯಾಂಕ್, ಕುಮಾರ ಸ್ವಾಮಿ ಲೇಔಟ್‌ನ ಬ್ಯಾಂಕ್ ಆಫ್ ಬರೋಡ, ಐಟಿಐ ಲೇಔಟ್‌ನ ಆಕ್ಸಿಸ್ ಬ್ಯಾಂಕ್, ಸೌತ್ ಎಂಡ್ ರೋಡ್‌ನ ಬ್ಯಾಂಕ್ ಆಫ್ ಬರೋಡ, ನಾಗರಭಾವಿಯ ಎಸ್‌ಬಿ‍ಐ ಬ್ಯಾಂಕ್‌ಗಳಲ್ಲಿ ಒಂದೊಂದು ಅಕೌಂಟ್‌ಗಳನ್ನು ಕುಸುಮ ಹೊಂದಿದ್ದಾರೆ. ಉಡುಗೊರೆಯಾಗಿ ಬಂದ 45,00,000 ಮೌಲ್ಯದ ಚಿನ್ನವಿದೆ. 1,37,10,000 ರೂ ಗಳ ಪ್ರಸ್ತುತ ಮಾರುಕಟ್ಟೆ ಮೌಲ್ಯದ ಕೃಷಿ ಭೂಮಿ, ಕೃಷಿಗೆ ಒಳಪಡದ ಭೂಮಿ, ವಾಣಿಜ್ಯ ಕಟ್ಟಡಗಳು, ರೆಸಿಡೆನ್ಷಿಯಲ್ ಕಟ್ಟಡಗಳು ಇವರ ಬಳಿ ಇವೆ.

ಕೃಷ್ಣಮೂರ್ತಿ . ವಿ

ರಾಜ ರಾಜೇಶ್ವರಿ ನಗರ ಉಪ ಚುಣಾವಣೆಯ ಜೆಡಿಎಸ್ ಅಭ್ಯರ್ಥಿ ಕೃಷ್ಣಮೂರ್ತಿ ವಿ ಅವರ ಬಳಿ ಇರುವ ಸರಾಸರಿ ಒಟ್ಟು ಹಣ (ಆಭರಣ, ಕಾರುಗಳು, ಇತರರಿಗೆ ನೀಡಿದ ಹಣದ ಸಹಿತ) 18,01,058.64 ರೂ ಗಳು. ಅವರ ಬಳಿ ನಗದು ಹಣ 1,75,000 ರೂ ಗಳು. ವಿಶ್ವೇಶ್ವರಯ್ಯ ಲೇಔಟ್‌ನ ಎಸ್‌ಬಿಐ ಬ್ಯಾಂಕ್, ಜ್ಞಾನ ಜ್ಯೋತಿ ನಗರದ ಇಂಡಿಯನ್ ಬ್ಯಾಂಕ್, ವಿಜಯ ನಗರದ ಬೆಂಗಳೂರು ಸಿಟಿ ಕೊ-ಆಪರೇಟಿ ಬ್ಯಾಂಕ್, ಉಲ್ಲಾಳದ ಐಸಿಐಸಿಐ ಬ್ಯಾಂಕ್‌ನಲ್ಲಿ ತಲಾ ಒಂದೊಂದು ಖಾತೆಗಳಿವೆ. ಇವರ ಬಳಿ 16,03,36,800 ರೂ ಗಳ ಪ್ರಸ್ತುತ ಮಾರುಕಟ್ಟೆ ಮೌಲ್ಯದ ಕೃಷಿಯೇತರ ಭೂಮಿಯಿದೆ. 90,000 ಸಾವಿರ ಮೌಲ್ಯದ 150 ಗ್ರಾಂ ಚಿನ್ನವಿದೆ

Team Newsnap
Leave a Comment
Share
Published by
Team Newsnap

Recent Posts

ಭಾರತದಲ್ಲಿ ಚಿನ್ನದ ದರದ ಬಗ್ಗೆ ತಿಳಿಯಿರಿ | Gold Price In India

ನವದೆಹಲಿ ,ಮೇ 15 : ಭಾರತದಲ್ಲಿ 22 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ 66,750 ರೂಪಾಯಿ ದಾಖಲಾಗಿದೆ. 24… Read More

May 15, 2024

ಅಕ್ರಮ ಜಾಹಿರಾತು ಫಲಕ ಕುಸಿತಕ್ಕೆ 14 ಸಾವು, 74 ಜನರು ಗಂಭೀರ

ಮುಂಬೈ: ನಿನ್ನೆ ಬೀಸಿದ ಬಿರುಗಾಳಿಗೆ ನಗರದಲ್ಲಿ ತಲೆಎತ್ತಿದ್ದ ಅಕ್ರಮ ಜಾಹಿರಾತು ಫಲಕ ಕುಸಿದು, 8 ಮಂದಿ ಸಾವನ್ನಪ್ಪಿದ್ದು, 60 ಜನರು… Read More

May 14, 2024

ರೇವಣ್ಣ ರಿಲೀಸ್ : ಬಿಗ್ ರಿಲೀಪ್

ಐದು ದಿನಗಳ ಜೈಲು ವಾಸಕ್ಕೆ ಅಂತ್ಯ ⁠5 ಲಕ್ಷ ರು ಬಾಂಡ್ , ಎಸ್ ಐಟಿ ತನಿಖೆಗೆ ಸಹಕರಿಸಬೇಕು ಎಂಬ… Read More

May 13, 2024

ನನ್ನನ್ನು ಯಾರು ಅಪಹರಣ ಮಾಡಿಲ್ಲ, ಮಗ ತಪ್ಪು ದೂರು ಕೊಟ್ಟಿದ್ದಾನೆ ಎಂದ ಕಿಡ್ನ್ಯಾಪ್ ಸಂತ್ರಸ್ತೆ

ಬೆಂಗಳೂರು : ಪ್ರಜ್ವಲ್‌ ರೇವಣ್ಣ ವಿಚಾರದ ಕಿಡ್ನ್ಯಾಪ್‌ ಪ್ರಕರಣಕ್ಕೆ ಸಂಬಂಧಪಟ್ಟಂತೆ ದಿನಕ್ಕೊಂದು ಟ್ವಿಸ್ಟ್‌ ಪಡೆದುಕೊಳ್ಳುತ್ತಲೇ ಇದೆ. ಈ ಕೇಸ್‌ನಲ್ಲಿ ಸಂತ್ರಸ್ತೆ… Read More

May 13, 2024

ಸರಿಯಾದ ಸಮಯಕ್ಕೆ ಆಂಬ್ಯುಲೆನ್ಸ್ ಬಂದಿದ್ದರೆ ಮಂಡ್ಯದ ನಟಿ ಪವಿತ್ರಾ ಸಾಯುತ್ತಿರಲಿಲ್ಲ- ಗೆಳೆಯ ಚಂದ್ರಕಾಂತ್

ಹೈದ್ರಾಬಾದ್ : ನಿಜ ಹೇಳಬೇಕು ಅಂದ್ರೆ ಅಪಘಾವಾದ ಸ್ಥಳಕ್ಕೆ ಆಂಬ್ಯುಲೆನ್ಸ್ ಸುಮಾರು 20 ನಿಮಿಷಗಳ ಕಾಲ ತಡವಾಗಿ ಬಂದಿದ್ದಕ್ಕೆ ಆಕೆ… Read More

May 13, 2024

CBSE 12 ನೇ ತರಗತಿಯ ಫಲಿತಾಂಶ ಪ್ರಕಟ: ಇಲ್ಲಿದೆ ಫಲಿತಾಂಶವನ್ನು ಪರಿಶೀಲಿಸಲು ನೇರ ಲಿಂಕ್

ನವದೆಹಲಿ : ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ ( CBSE ) 12ನೇ ತರಗತಿ ಫಲಿತಾಂಶ ಇಂದು ಪ್ರಕಟವಾಗಿದ್ದು… Read More

May 13, 2024