ಪುಲ್ವಾಮ ಸ್ಫೋಟಕಕ್ಕಿಂತ 12 ಪಟ್ಟು ಹೆಚ್ಚಿದ್ದ ಶಿವಮೊಗ್ಗ ಸ್ಫೋಟ !

Team Newsnap
1 Min Read

2019 ಫೆಬ್ರವರಿ 14 ರಂದು ಕಾಶ್ಮೀರದ ಪುಲ್ವಾನದಲ್ಲಿ ಕೇವಲ 250 ಕೆಜಿ ಸ್ಫೋಟಕಗಳನ್ನು ಉಗ್ರರು ಸಿಡಿಸಿದ್ದರು. ಆದರೆ ಗುರುವಾರ ರಾತ್ರಿ ಶಿವಮೊಗ್ಗದಲ್ಲಿ ಆಗಿದ್ದು 12 ಪಟ್ಟು ಹೆಚ್ಚಿನ ಭೀಕರ ಪ್ರಮಾಣದ ಸ್ಫೋಟ !

ಶಿವಮೊಗ್ಗದಲ್ಲಿ ಸ್ಫೋಟಕ ತುಂಬಿದ ಲಾರಿಯಲ್ಲಿ ಸುಮಾರು 3000 ಕೆ ಜಿ ತೂಕದ ಸ್ಫೋಟಕಗಳನ್ನು ಸಾಗಿಸಲಾಗುತ್ತಿತ್ತು. ಹೀಗಾಗಿ ಸ್ಪೋಟಕಗಳು ಸ್ಪೋಟ ಗೊಂಡಾಗ ಅದರ ಭೀಕರತೆ 67 ಕಿಮಿ ವರೆಗೂ ಇತ್ತು ಎಂದು ಪೋಲಿಸರು ತಿಳಿಸಿದ್ದಾರೆ.

ಸ್ಫೋಟಗೊಂಡ ಲಾರಿಯಲ್ಲಿ 3 ಟನ್ ಡಿಟೋನೇಟಸ್೯ ಹಾಗೂ 15 ಸಾವಿರ ಜಿಲೆಟಿನ್ ಕಡ್ಡಿಗಳನ್ನು ತುಂಬಲಾಗಿತ್ತು ಎಂದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ.

ಅಪಾರ ಪ್ರಮಾಣದ ನಷ್ಟ – ಮನೆಗಳಿಗೆ ಹಾನಿ:

ಶಿವಮೊಗ್ಗದ ಹುಣಸೋಡು ಗ್ರಾಮದ ಬಳಿ ಸಂಭವಿಸಿದ ಸ್ಪೋಟ ದಿಂದಾಗಿ ಭಾರೀ ಪ್ರಮಾಣದ ಹಾನಿಯಾಗಿದೆ. ಐವರು ಕಾರ್ಮಿಕರ ಮೃತದೇಹಗಳು ಪತ್ತೆಯಾಗಿವೆ.

ಸ್ಫೋಟದಿಂದ ಜೀವ ಹಾನಿ ಜೊತೆಗೆ ಆಸ್ತಿ ಪಾಸ್ತಿ ಸಹ ಹಾನಿಯಾಗಿದೆ, 150ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ. ಅಲ್ಲದೆ 1,422 ಕುಟುಂಬಗಳಿಗೆ ತೊಂದರೆಯಾಗಿದೆ.

ಜಿಲ್ಲೆಯ ಅಬ್ಬಲೆಗೆರೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ 150ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ. ಹೂಣಸೊಂಡ, ಬಸವನಗಂಗೂರು, ಕಲ್ಲುಗಂಗೂರು, ಅಬ್ಬಲಗೆರೆಯಲ್ಲಿ 150 ಕ್ಕು ಹೆಚ್ಚು ಮನೆಗಳಿಗೆ ಹಾನಿಯಾಗಿದೆ. ಅಬ್ಬಲಗೆರೆ ಸೇರಿ ಒಟ್ಟು 7 ಗ್ರಾಮಗಳಲ್ಲಿ ಕ್ರಷರ್ ಗಳದ್ದೇ ಸಾಮ್ರಾಜ್ಯ ವ್ಯಾಪಿಸಿಕೊಂಡಿದೆ

Share This Article
Leave a comment