February 25, 2026

Newsnap Kannada

The World at your finger tips!

shilpashetty

ಅಶ್ಲೀಲ‌ ಚಿತ್ರಗಳ ನಿರ್ಮಾಣದ ಆರೋಪ : ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಬಂಧನ‌

Spread the love

ಅಶ್ಲೀಲ ಚಿತ್ರಗಳ ನಿರ್ಮಾಣ ಆರೋಪಕ್ಕಾಗಿ ನಟಿ ಶಿಲ್ಪಾ ಶೆಟ್ಟಿ ಪತಿ, ಉದ್ಯಮಿ ರಾಜ್‌ ಕುಂದ್ರಾ ಅವರನ್ನು ಮುಂಬೈ ಕ್ರೈಂ ಬ್ರಾಂಚ್‌ ಪೊಲೀಸರು ಬಂಧಿಸಿದ್ದಾರೆ.

2021ರ ಫೆಬ್ರವರಿ ಕ್ರೈಂ ಬ್ರ್ಯಾಂಚ್‌ ಮುಂಬೈನಲ್ಲಿ ಅಶ್ಲೀಲ ಚಿತ್ರಗಳ ನಿರ್ಮಾಣ ಹಾಗೂ ಹಲವು ಅಪ್ಲಿಕೇಶನ್‌ಗಳ ಮೂಲಕ ಅವುಗಳನ್ನು ಪ್ರದರ್ಶಿಸುವ ಕುರಿತು ಪ್ರಕರಣ ದಾಖಲಾಗಿತ್ತು.

ಈ ಪ್ರಕರಣದಲ್ಲಿ ಉದ್ಯಮಿ ರಾಜ್‌ ಕುಂದ್ರಾ ಭಾಗಿಯಾಗಿದ್ದಾರೆ. ಈ ಕುರಿತು ಸಾಕಷ್ಟು ಸಾಕ್ಷಾಧಾರಗಳು ಸಿಕ್ಕಿವೆ. ಹೀಗಾಗಿ ಅವರನ್ನು ಬಂಧಿಸಲಾಗಿದೆ ಎಂದು ಮುಂಬೈ ಪೊಲೀಸ್ ಆಯುಕ್ತ ಹೇಮಂತ್ ನಾಗರೇಲ್ ತಿಳಿಸಿದ್ದಾರೆ.

shilpashetty1

ವಂಚನೆ, ಸಾರ್ವಜನಿಕ ಸ್ಥಳಗಳಲ್ಲಿ ಅಶ್ಲೀಲ ಕೃತ್ಯದಲ್ಲಿ ಭಾಗಿ, ಅಶ್ಲೀಲ ಪುಸ್ತಕ ಅಥವಾ ಸಾಹಿತ್ಯ ಪ್ರಸಾರ ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿಯಲ್ಲಿ ರಾಜ್‌ ಕುಂದ್ರಾ ವಿರುದ್ದ ಪ್ರಕರಣ ದಾಖಲಾಗಿದೆ.

ಮುಂಬೈನ ಕ್ರೈಂ ಬ್ರಾಂಚ್‌ ವಶದಲ್ಲಿರುವ ರಾಜ್‌ ಕುಂದ್ರಾ ಅವರನ್ನು, ಆಸ್ತಿ ಸೆಲ್‌ ಕಚೇರಿಯಲ್ಲಿ ಇರಿಸಲಾಗಿದೆ.

ರಾಜ್‌ ಕುಂದ್ರಾ, ಅಶ್ಲೀಲ ಚಿತ್ರಗಳಿಗಾಗಿ ನಗ್ನ ದೃಶ್ಯಗಳನ್ನು ಚಿತ್ರೀಕರಿಸಲು ನಟರನ್ನು ಒತ್ತಾಯಿಸಿದ ಆರೋಪದ ಹಿನ್ನೆಲೆಯಲ್ಲಿ ಪೊಲೀಸರು ಎರಡು ಎಫ್‌ಐಆರ್ ದಾಖಲಿಸಿದ್ದಾರೆ.

ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ವಾರ ಸುಮಾರು ಒಂಬತ್ತು ಮಂದಿ ಆರೋಪಿಗಳನ್ನು ಬಂಧಿಸಿದ್ದರು. ಈ ತಂಡ ಅಶ್ಲೀಲ ಚಿತ್ರಗಳನ್ನು ನಿರ್ಮಾಣ ಮಾಡಿ ಈಗಾಗಲೇ ಆಪ್‌ ಗಳ ಮೂಲಕ ಪ್ರದರ್ಶನವನ್ನು ಮಾಡಿದೆ ಅನ್ನೋ ಆರೋಪವಿದೆ. ಈ ಕುರಿತು ಕ್ರೈಂ ಬ್ರ್ಯಾಂಚ್‌ ಪೊಲೀಸರು ಸಾಕಷ್ಟು ಸಾಕ್ಷಾಧಾರಗಳನ್ನು ಕಲೆಹಾಕಿದ್ದಾರೆ.

ರಾಮ್ ಕುಂದ್ರಾ ಮತ್ತು ಅವರ ಸಹಚರರ ವಿರುದ್ಧ ಬಾಲಿವುಡ್‌ ನಟಿ ಪೂನಂ ಪಾಂಡೆ ಬಾಂಬೆ ಹೈಕೋರ್ಟ್‌ನಲ್ಲಿ ಪ್ರಕರಣ ದಾಖಲಿಸಿದ್ದಾರೆ.

error: Content is protected !!