January 7, 2025

Newsnap Kannada

The World at your finger tips!

girl1

ಪ್ರಿಯಕರನಿಗಾಗಿ ಗಂಡನಿಗೆ ನಿದ್ರೆ ಮಾತ್ರೆ ಕೊಟ್ಟು ಹತ್ಯೆ ಮಾಡಿದ ಶಿಲ್ಪಾ!

Spread the love

ಗಂಡನಿಗೆ ನಿದ್ರೆ ಮಾತ್ರೆ ಕೊಟ್ಟು ಉಸಿರು ಕಟ್ಟಿಸಿ ಹತ್ಯೆ ಮಾಡಿದ ಘಟನೆ 15 ದಿನಗಳ ನಂತರ ಬೆಳಕಿಗೆ ಬಂದಿದೆ. ಪ್ರಕರಣದ ರುವಾರಿ ಪತ್ನಿ, ಪ್ರಿಯತಮ ಈಗ ಪೋಲೀಸರ ಅತಿಥಿಯಾಗಿದ್ದಾರೆ.

girl2

ಪತ್ನಿಯೊಬ್ಬಳು ತನ್ನ ಅನೈತಿಕ ಸಂಬಂಧಕ್ಕಾಗಿ ಗಂಡನನ್ನೇ ಪ್ರಿಯತಮ ಜೊತೆ ಸೇರಿ ಕೊಲೆಗೈದಿದ್ದಾರೆ ಎನ್ನುವ ಘಟನೆ ಮಂಡ್ಯ ತಾಲೂಕಿನ ಹನಕೆರೆಯಲ್ಲಿ ಜರುಗಿದೆ.

ಪತ್ನಿ ಶಿಲ್ಪಾ ತನ್ನ ಮಹಿಳಾ ಸಂಘದ ಹಣ ಕಲೆಕ್ಷನ್ ಮಾಡೋ ಪ್ರಿಯಕರ ಮಧು ನಾಯಕ್ ಜೊತೆ ಸೇರಿ ಗಂಡ ಪ್ರದೀಪ್ ನನ್ನೇ ಉಸಿರುಗಟ್ಟಿಸಿ ಕೊಲೆಗೈದಿದ್ದಾರೆ. ನಂತರ ಹೃದಯಾಘಾತವೆಂದು ಬಿಂಬಿಸಿದ್ದಾರೆ. ಘಟನೆ ನಡೆದು 15 ದಿನಗಳ ಬಳಿಕ ಮೃತ ಗಂಡನ‌ ಸಂಬಂಧಿಕರು ಇದು ಪೂರ್ವ ನಿಯೋಜಿತ ಹತ್ಯೆ ಎಂದು ಮಂಡ್ಯ ಗ್ರಾಮಾಂತರ ಠಾಣೆಯ ಪೊಲೀಸರಿಗೆ ದೂರು ನೀಡಿದ್ದಾರೆ.

ಪ್ರಕರಣ ಕುರಿತು ಪತ್ನಿಯನ್ನು ವಿಚಾರಣೆ ಮಾಡಿದಾಗ ಗಂಡನ ಕೊಲೆ ರಹಸ್ಯ ಬೆಳಕಿಗೆ ಬಂದಿದೆ.

ಗಂಡನಿಗೆ ನಿದ್ರೆ ಮಾತ್ರೆ ತಿನ್ನಿಸಿ ಪ್ರಿಯಕರನ‌ ಜೊತೆ ಈ ಸೇರಿ ಕೃತ್ಯ ಎಸಗಿರುವುದಾಗಿ ಪೊಲೀಸರ ವಿಚಾರಣೆ ವೇಳೆ ಪತ್ನಿ ಶಿಲ್ಪಾ ಸತ್ಯ ಬಾಯ್ಬಿಟ್ಟಿದ್ದಾಳೆ

ಗಂಡನನ್ನು ಕೊಂದಿದ್ದು ಹೇಗೆ ?

ನ. 17 ರಂದು ಹನಕೆರೆ ಗ್ರಾಮದ ಹೊರವಲಯದಲ್ಲಿರುವ ತನ್ನ ಗಂಡನ‌ ಒಂಟಿ ಮನೆಯಲ್ಲಿ ಸಂಜೆ ಗಂಡನಿಗೆ ನಿದ್ರೆ ಮಾತ್ರೆ ಹಾಕಿ ತನ್ನ ಪ್ರಿಯಕರ ಮಧು ನಾಯಕ್ ಜೊತೆ ಸೇರಿ ಗಂಡನನ್ನು ಉಸಿರುಕಟ್ಟಿಸಿ ಕೊಲೆಗೈದು ಹೃದಯಾಘಾತವೆಂದು ಆಸ್ಪತ್ರೆಗೆ ಕರೆದೊಯ್ದು ನಂಬಿಸಿದ್ದಾಳೆ. ಆಸ್ಪತ್ರೆಯಲ್ಲಿ ಸಾವು ಖಚಿತ ಪಡಿಸಿಕೊಂಡು ಗಂಡನ‌ ಅಂತ್ಯಸಂಸ್ಕಾರದ ಕಾರ್ಯವನ್ನು ಮುಗಿಸಿದ್ದಾಳೆ.

ಮೃತ ಪ್ರದೀಪನ ಅಂತ್ಯ ಸಂಸ್ಕಾರದ ವೇಳೆ ಮೃತ ಪ್ರದೀಪ್​ನ ಸಂಬಂಧಿಕರಿಗೆ ಕೊಲೆಯ ಅನುಮಾನ‌ ಬಂದಿತ್ತಾದರೂ ಸಾವಿನ‌ ಮನೆಯಲ್ಲಿ ಜಗಳ ಬೇಡವೆಂದು ಗಾಯದ ಗುರುತಿನ‌ ಪೋಟೋ ತೆಗೆದುಕೊಂಡು ಮೃತ ಪ್ರದೀಪನ ಅಂತ್ಯ ಸಂಸ್ಕಾರ ನಡೆಸಿದ್ದಾರೆ.

ಮೊಬೈಲ್ ನಲ್ಲಿ ಪ್ರಿಯಕರನ ಫೋಟೊ!

ಪತ್ನಿ ಶಿಲ್ಪಾಳ ಮೊಬೈಲ್​ನಲ್ಲಿ ಪ್ರಿಯಕರ ಮಧು ನಾಯಕ್ ಜೊತೆಗಿರುವ ಫೋಟೋ ಹಾಗೂ ಮನೆಯಲ್ಲಿ ಸಿಕ್ಕ ಟೀ ಗ್ಲಾಸ್​ನಲ್ಲಿ ಪ್ರಿಯಕರನ ಫೋಟೋ ಮೊಬೈಲ್ ನಲ್ಲಿ ಇರುವುದನ್ನು ನೋಡಿದ್ದಾರೆ. ಕೊನೆಗೆ ತಿಥಿ ಕಾರ್ಯ ಮುಗಿದ ಬಳಿಕ ಸಂಬಂಧಿಕರು ಪೊಲೀಸರಿಗೆ ದೂರು ನೀಡಿದ್ದಾರೆ‌.

ಆ ದೂರಿನ ಮೇರೆಗೆ ಪತ್ನಿಯನ್ನು ವಿಚಾರಣೆ ಮಾಡುತ್ತಿದ್ದಂತೆ ಗಂಡನ ಕೊಲೆ ಪ್ರಕರಣ ಬಯಲಾಗಿದೆ. ಗಂಡನನ್ನು ಕೊಲೆಗೈದ ಪತ್ನಿಗೆ ತಕ್ಕ ಶಿಕ್ಷೆ ವಿಧಿಸಬೇಕೆಂದು ಸಂಬಂಧಿಕರು ಆಗ್ರಹವಾಗಿದೆ.

ಈ ಸಂಬಂಧ, ಪ್ರಕರಣ ದಾಖಲಿಸಿಕೊಂಡಿರುವ ಮಂಡ್ಯ ಗ್ರಾಮಾಂತರ ಠಾಣೆಯ ಪೊಲೀಸರು ಇದೀಗ ಆರೋಪಿಗಳ ವಿಚಾರಣೆ ನಡೆಸಿ ಸತ್ಯ ಬಾಯ್ಬಿಡಿಸಿದ್ದಾರೆ. ಅಲ್ಲದೆ, ಕೃತ್ಯ ಎಸಗಿದ ಆರೋಪಿಗಳಾದ ಶಿಲ್ಪಾ ಹಾಗೂ ಆಕೆಯ ಪ್ರಿಯಕರ ಮಧು ನಾಯಕ್​ನನ್ನು ಬಂಧಿಸಿದ್ದಾರೆ. ಕೋರ್ಟ್ ಇವರಿಬ್ಬರನ್ನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

Copyright © All rights reserved Newsnap | Newsever by AF themes.
error: Content is protected !!