ನವದೆಹಲಿ: ದೇಶೀಯ ಸೇರಿದಂತೆ ಎಲ್ಲಾ ಅಂತಾರಾಷ್ಟ್ರೀಯ ಮಾದರಿಯ ಕ್ರಿಕೆಟಿಗೆ ಟೀಂ ಇಂಡಿಯಾದ ಆಟಗಾರ ಶಿಖರ್ ಧವನ್ ನಿವೃತ್ತಿ ಘೋಷಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ 38 ವರ್ಷದ ಶಿಖರ್ ಧವನ್ ವಿಡಿಯೋವನ್ನು ಹಂಚಿಕೊಳ್ಳುವ ಮೂಲಕ ನಿವೃತ್ತಿ ನಿರ್ಧಾರ ಪ್ರಕಟಿಸಿದ್ದಾರೆ.
ದೆಹಲಿಯಲ್ಲಿ ಡಿಸೆಂಬರ್ 5, 1985 ರಲ್ಲಿ ಜನಿಸಿದ ಶಿಖರ್ ಧವನ್ ಎಡಗೈ ಆಟಗಾರರಾಗಿ ಹಲವು ಬಾರಿ ಟೀಂ ಇಂಡಿಯಾ ಇನ್ನಿಂಗ್ಸ್ ಆರಂಭಿಸಿ,2010 ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಪಂದ್ಯದಲ್ಲಿ ಏಕದಿನಕ್ಕೆ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದ ಶಿಖರ್ ಧವನ್ 2021ರಲ್ಲಿ ಶ್ರೀಲಂಕಾ ವಿರುದ್ಧ ಕೊನೆಯ ಏಕದಿನ ಪಂದ್ಯವನ್ನು ಆಡಿದ್ದಾರೆ.
ತಮ್ಮ ವೃತ್ತಿ ಜೀವನದುದ್ದಕ್ಕೂ ಅವರಿಗೆ ಪ್ರೀತಿ ಮತ್ತು ಬೆಂಬಲ ನೀಡಿದ್ದಕ್ಕೆ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ.
ಮೊದಲಿಗೆ ನನ್ನ ಕುಟುಂಬ, ನನ್ನ ಬಾಲ್ಯದ ಕೋಚ್ ತಾರಕ್ ಸಿನ್ಹಾ ಮತ್ತು ಮದನ್ ಶರ್ಮಾ ಅವರ ಮಾರ್ಗದರ್ಶನದಲ್ಲಿ ನಾನು ಕ್ರಿಕೆಟ್ ಕಲಿತಿದ್ದೇನೆ. ಭಾರತ ತಂಡವನ್ನು ಸೇರಬೇಕು ಎನ್ನುವುದು ನನ್ನ ಗುರಿಯಾಗಿತ್ತು. ಸೇರಿದ ನಂತರ ಇಡೀ ತಂಡ, ಕುಟುಂಬ, ಅಭಿಮಾನಿಗಳಿಂದ ಬೆಂಬಲ ಸಿಕ್ಕಿತು. ಈಗ ವಿದಾಯ ಹೇಳುವ ಸಮಯ ಬಂದಿದೆ.
ನನ್ನ ಕ್ರಿಕೆಟ್ ಪಯಣದ ಈ ಅಧ್ಯಾಯವನ್ನು ಮುಕ್ತಾಯಗೊಳಿಸುತ್ತಿದ್ದೇನೆ. ಈ ಪ್ರಯಾಣದಲ್ಲಿ ನಾನು ನನ್ನೊಂದಿಗೆ ಅಸಂಖ್ಯಾತ ನೆನಪುಗಳು ಮತ್ತು ಕೃತಜ್ಞತೆಯನ್ನು ಹೊಂದಿದ್ದೇನೆ. ನಿಮ್ಮ ಪ್ರೀತಿ ಮತ್ತು ಬೆಂಬಲಕ್ಕಾಗಿ ಧನ್ಯವಾದಗಳು! ಜೈ ಹಿಂದ್!” ಎಂದು ಧವನ್ ವಿಡಿಯೋದಲ್ಲಿ ಹೇಳಿದ್ದಾರೆ.
ನಾನು ದೇಶಕ್ಕಾಗಿ ಸಾಕಷ್ಟು ಆಡಿದ್ದೇನೆ ಎಂಬ ತೃಪ್ತಿ ನನಗಿದೆ. ನನಗೆ ಈ ಅವಕಾಶವನ್ನು ನೀಡಿದ ಬಿಸಿಸಿಐ, ಡಿಡಿಸಿಎ (ದೆಹಲಿ ಕ್ರಿಕೆಟ್ ಸಂಸ್ಥೆ) ಮತ್ತು ಬೆಂಬಲಸಿದ ನನ್ನ ಎಲ್ಲಾ ಅಭಿಮಾನಿಗಳಿಗೆ ನಾನು ನಿಜವಾಗಿಯೂ ಕೃತಜ್ಞನಾಗಿದ್ದೇನೆ. ನಾನು ಮತ್ತೆ ನಿಮ್ಮ ದೇಶಕ್ಕಾಗಿ ಆಡುವುದಿಲ್ಲ ಎಂದು ದುಃಖಿಸಬೇಡಿ. ಆದರೆ ನಿಮ್ಮ ದೇಶಕ್ಕಾಗಿ ನೀವು ಆಡಿದ್ದಕ್ಕಾಗಿ ಯಾವಾಗಲೂ ಸಂತೋಷವಾಗಿರಿ. ಇದು ನನ್ನ ದೊಡ್ಡ ಸಾಧನೆಯಾಗಿದೆ ಎಂದು ಶಿಖರ್ ಧವನ್ ವಿಡಿಯೋದಲ್ಲಿ ಹೇಳಿದ್ದಾರೆ.ನಾಲ್ವಡಿ ಕೃಷ್ಣರಾಜರ ಸೇವೆ ಮರೆಯಲಾಗದು – ಯದುವೀರ್
67 ಏಕದಿನ ಪಂದ್ಯಗಳ 164 ಇನ್ನಿಂಗ್ಸ್‌ನಿಂದ 6,793 ರನ್ ಹೊಡೆದಿರುವ ಶಿಖರ್ ಧವನ್ 34 ಟೆಸ್ಟ್ ಪಂದ್ಯಗಳ 58 ಇನ್ನಿಂಗ್ಸ್‌ನಿಂದ 2,315 ರನ್ ಗಳಿಸಿದ್ದಾರೆ. 68 ಟಿ20 ಪಂದ್ಯಗಳಿಂದ 1,759 ರನ್ ಹೊಡೆದಿದ್ದಾರೆ.
More Stories
ನ.20ರಂದು ಕರ್ನಾಟಕದಲ್ಲಿ ಬಾರ್ ಬಂದ್
ಮಂಡ್ಯದ ಕಾರ್ಮೆಲ್ ಕಾಲೇಜಿನ ಪ್ರಥಮ, ದ್ವಿತೀಯ ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆ
ಟಿಪ್ಪು ಸುಲ್ತಾನ್ನ ಖಡ್ಗ 3.4 ಕೋಟಿಗೆ ಹರಾಜು