January 30, 2026

Newsnap Kannada

The World at your finger tips!

WhatsApp Image 2022 04 30 at 1.54.50 PM

ಕೊಳದ ಮಠದ ಶಾಂತವೀರ ಮಹಾಸ್ವಾಮೀಜಿ ಹೃದಯಾಘಾತದಿಂದ ನಿಧನ

Spread the love

ಕೊಳದ ಮಠದ ಶಾಂತವೀರ ಮಹಾಸ್ವಾಮೀಜಿ(80) ಶನಿವಾರ ಬೆಳಗಿನ ಜಾವ ಹೃದಯಾಘಾತದಿಂದ ನಿಧನರಾದರು

ಶುಕ್ರವಾರವಷ್ಟೇ ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್ ಕಾರ್ಯಕ್ರಮದಲ್ಲಿ ಕೊಳದ ಮಠದ ಶಾಂತವೀರ ಮಹಾಸ್ವಾಮೀಜಿ ಪಾಲ್ಗೊಂಡಿದ್ದರು.

ಶ್ರೀಗಳು ಯಾವುದೇ ಅನಾರೋಗ್ಯ ಸಮಸ್ಯೆಗಳಿಂದ ಬಳಲುತ್ತಿರಲಿಲ್ಲ. ಆದರೆ ಬೆಳಗ್ಗೆ ಅವರ ಅಣ್ಣನ ಮಗ ಹರ್ಷ ಬಾಗಿಲು ತೆಗೆಯಲು ಹೋಗಿದ್ದಾರೆ. ಅಷ್ಟರಲ್ಲಿ ಕೊನೆಯುಸಿರೆಳೆದಿದ್ದಾರೆ. ಯಾವಾಗ ಪ್ರಾಣ ಹೋಗಿದೆ ಎನ್ನುವುದರ ಬಗ್ಗೆ ಗೊತ್ತಿಲ್ಲ ಎಂದು ಭಕ್ತರು ತಿಳಿಸಿದ್ದಾರೆ.

ಈ ಕುರಿತಂತೆ ಮಾತನಾಡಿದ ಹರ್ಷ ಅವರು, ನಾನು ಬೆಳಗ್ಗೆ 9:30ಕ್ಕೆ ನೋಡಿದಾಗ ಅವರು ಪ್ರಾಣ ಬಿಟ್ಟಿದ್ದರು. ವೈದ್ಯರನ್ನು ಕರೆಸಿದ್ದೇವು. ಅವರು ಹೃದಯಘಾತದಿಂದ ಪ್ರಾಣ ಹೋಗಿದೆ ಅಂತ ತಿಳಿಸಿದರು.

ಶ್ರೀಗಳ ಅಂತಿಮ ಸಂಸ್ಕಾರ ಮಠದ ಆವರಣದಲ್ಲೇ ಮಾಡಲು ವ್ಯವಸ್ಥೆಗೊಳಿಸಲಾಗಿದೆ.

error: Content is protected !!