‘ಸಿಎಂ ಯಡಿಯೂರಪ್ಪ ಹಾಗೂ ಅವರ ಕುಟುಂಬದ ಭ್ರಷ್ಟಾಚಾರವನ್ನು ನೀವು ಹೇಗೆ ಸಹಿಸಿಕೊಂಡಿದ್ದೀರಿ?’ ಎಂದು ಬಿಜೆಪಿ ನಾಯಕ, ಮಾಜಿ ಪೋಲೀಸ್ ಮಹಾ ನಿರ್ದೇಶಕ ಶಂಕರ್ ಬಿದರಿ ಪ್ರಧಾನಿ ಮೋದಿಯವರನ್ನು ಪ್ರಶ್ನೆ ಮಾಡಿದ್ದಾರೆ.
ಟ್ವೀಟ್ ಮೂಲಕ ಪ್ರಧಾನಿ ಮೋದಿ ಹಾಗೂ ಸಂಸದ ಪ್ರಹ್ಲಾದ್ ಜೋಷಿ ಅವರನ್ನು ಟ್ಯಾಗ್ ಮಾಡಿ ಪ್ರಶ್ನೆ ಮಾಡಿರುವ ಅವರು ‘ಚಿಮನ್ ಭಾಯ್, ಕೇಶುಭಾಯ್ ಅಂತವರನ್ನು ಎದುರಿಸಿದ ಪಕ್ಷ ಬಿ.ಎಸ್.ವೈ ಅವರಿಗೆ ಭಯಪಡುತ್ತಿದಿಯಾ? ಇದು ಶ್ಯಾಮ್ ಪ್ರಸಾದ್, ಅಟಲ್ ಅವರ ಪಕ್ಷವೇನಾ? ಯಡಿಯೂರಪ್ಪನವರ ಮಗ ವಿಜಯೇಂದ್ರ ಇತ್ತೀಚಿಗೆ ೫೦೦೦ ಕೋಟಿ ಹಗರಣ ಮಾಡಿರುವುದು ಸುದ್ದಿಯಾಗಿತ್ತು. ಇದು ಇ.ಡಿ, ಐ.ಟಿ ಅಧಿಕಾರಿಗಳಿಗೆ ಗೊತ್ತಿರದ ವಿಷಯವೇ? ಬಿಜೆಪಿ ನಾಯಕರಿಗೆ ಪಕ್ಷದ ಬಗ್ಗೆ ಕಾಳಜಿಯಿಲ್ಲವೇ?’ ಎಂದು ಪ್ರಶ್ನೆಗಳ ಸುರಿಮಳೆಯನ್ನೇ ಸುರಿಸಿದ್ದಾರೆ.
‘ಭ್ರ ಷ್ಟಾಚಾರ ಪ್ರಕರಣದಲ್ಲಿ ಯಡಿಯೂರಪ್ಪ ಜೈಲು ಸೇರಿದ್ದವರು. ಅವರಿಂದ ಪಕ್ಷದ ಗೌರವ ಹಾಳಾಗಿದೆ. ಅವರನ್ನು ಮುಖ್ಯಮಂತ್ರಿಯಾಗಿ ಏಕೆ ಆರಿಸಿದ್ದೀರಿ. ಪಕ್ಷದಿಂದ ವಜಾಗೊಳೊಳಿಸಿ’ ಎಂದು ಖಾರವಾಗಿ ಟ್ಟೀಟ್ ಮಾಡಿದ್ದಾರೆ.
More Stories
ಕರ್ತವ್ಯದ ವೇಳೆ ಬ್ರೈನ್ಸ್ಟ್ರೋಕ್ಗೆ ಬಲಿಯಾದ ಅರಣ್ಯ ಇಲಾಖೆ ನೌಕರ
ಮುದ್ದುಲಕ್ಷ್ಮಿ ಸೀರಿಯಲ್ ನಟ ಚರಿತ್ ಬಾಳಪ್ಪ ಲೈಂಗಿಕ ದೌರ್ಜನ್ಯ ಆರೋಪದಡಿ ಬಂಧನ
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಳೆಯ ಮುನ್ಸೂಚನೆ: ಬೆಂಗಳೂರು ಸೇರಿ 21 ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ