ನಿವೃತ್ತ ಡಿಜಿ-ಐಜಿಪಿ ಶಂಕರ್ ಬಿದರಿ ಇ-ಮೇಲ್ ಐಡಿ ಹ್ಯಾಕ್ ಮಾಡಿ 25 ಸಾವಿರ ರು ಕಿತ್ತುಕೊಂಡಿದ್ದ ಮೂವರು ಹ್ಯಾಕರ್ಗಳನ್ನು ಬಂಧಿಸುವಲ್ಲಿ ಸೈಬರ್ ಪೊಲೀಸರು ಯಶಸ್ವಿಯಾಗಿದ್ದಾರೆ.
ಥಿಯಾ, ಸೆರೋಪಾ ಹಾಗೂ ಇಸ್ಟರ್ ಕೊನ್ಯಾಕ ಬಂಧಿತ ಆರೋಪಿಗಳು.
ನಾಗಾಲ್ಯಾಂಡ್ ಮೂಲದ ಈ ಆರೋಪಿ ಗಳು ನವೆಂಬರ್ನಿಂದ ಇತ್ತೀಚೆಗೆ 60 ಬ್ಯಾಂಕ್ ಅಕೌಂಟ್ಗಳನ್ನು ತೆರೆದಿದ್ದರು.
ನಾಗಾಲ್ಯಾಂಡ್ನ ನಿರುದ್ಯೋಗಿ ಯುವಕರಿಗೆ ಹಣದ ಆಮಿಷವೊಡ್ಡಿ ಆಧಾರ್ ಕಾರ್ಡ್, ಮನೆ ಬಾಡಿಗೆ ಪತ್ರಗಳನ್ನ ಪಡೆದುಕೊಳ್ಳುತ್ತಿದ್ದರು. ಅದನ್ನು ಬಳಸಿ ಈ ಅಕೌಂಟ್ಸ್ಗಳನ್ನು ತೆರೆದಿದ್ದರು ಎನ್ನಲಾಗಿದೆ.
ಕಳೆದ ಫೆಬ್ರವರಿಯಲ್ಲಿ ನಿವೃತ್ತ ಐಪಿಎಸ್ ಅಧಿಕಾರಿ ಶಂಕರ್ ಬಿದರಿ ಇ-ಮೇಲ್ ಐಡಿಯನ್ನು ಹ್ಯಾಕ್ ಮಾಡಿದ್ದರು. ಈ ಮೂಲಕ ಬಿದರಿ ಸ್ನೇಹಿತರಿಗೆ ಮೆಸೇಜ್ ಮಾಡಿ 25,000 ರು ಕಿತ್ತುಕೊಂಡಿದ್ದರು.
ಈ ಕುರಿತಂತೆ ಶಂಕರ್ ಬಿದರಿಯವರು ಆಗ್ನೇಯ ವಿಭಾಗದ ಸೈಬರ್ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ಕೈಗೆತ್ತಿಕೊಂಡ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತರಿಂದ 13 ಪ್ಯಾನ್ ಕಾರ್ಡ್, 6 ಆಧಾರ್ ಕಾರ್ಡ್, 2 ಎಟಿಎಂ, 2 ಮೊಬೈಲ್ಗಳನ್ನ ವಶಕ್ಕೆ ಪಡೆದಿದ್ದಾರೆ. ಸುಮಾರು 20 ಬ್ಯಾಂಕ್ ಅಕೌಂಟ್ಗಳಿಂದ 2ಲಕ್ಷ ರೂಪಾಯಿಯನ್ನ ಜಪ್ತಿ ಮಾಡಲಾಗಿದೆ.
- ರಾಜ್ಯ ಸರ್ಕಾರದಿಂದ 7 ಐಪಿಎಸ್ ಅಧಿಕಾರಿಗಳ ವರ್ಗಾವಣೆ
- ಕರ್ನಾಟಕದಲ್ಲಿ 6 ಲಕ್ಷ ಎಕರೆ ವಕ್ಫ್ ಆಸ್ತಿಗೆ ಪರಿಗಣನೆ: ಬಿಜೆಪಿ ಶಾಸಕ ಯತ್ನಾಳ್ ಆರೋಪ
- ದರ್ಶನ್ ಮಧ್ಯಂತರ ಜಾಮೀನು ಪ್ರಶ್ನಿಸಿ ಸುಪ್ರೀಂ ಕೋರ್ಟ್ನಲ್ಲಿ ಮೇಲ್ಮನವಿ ಅರ್ಜಿ ಸಲ್ಲಿಸಲು ತೀರ್ಮಾನ
- ನ.20ರಂದು ಕರ್ನಾಟಕದಲ್ಲಿ ಬಾರ್ ಬಂದ್
- ಮಂಡ್ಯದ ಕಾರ್ಮೆಲ್ ಕಾಲೇಜಿನ ಪ್ರಥಮ, ದ್ವಿತೀಯ ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆ
More Stories
ರಾಜ್ಯ ಸರ್ಕಾರದಿಂದ 7 ಐಪಿಎಸ್ ಅಧಿಕಾರಿಗಳ ವರ್ಗಾವಣೆ
ಆಯೋಧ್ಯೆ ರಾಮಮಂದಿರಕ್ಕೆ ಸ್ಫೋಟದ ಬೆದರಿಕೆ: ಆರ್ಡಿಎಕ್ಸ್ ಬಳಸಿ ಧ್ವಂಸಗೊಳಿಸುವ ಎಚ್ಚರಿಕೆ
ವಿಧಾನಸಭೆ ಉಪಚುನಾವಣೆ: ನ. 13 ರಂದು ರಾಜ್ಯ ಸರ್ಕಾರದಿಂದ ವೇತನ ಸಹಿತ ರಜೆ ಘೋಷಣೆ