ಸ್ವತಂತ್ರ ದಿನಾಚರಣೆಯ ದಿನದಂದು ಡಾ ಅಂಬೇಡ್ಕರ್ ಫೋಟೋ ಇಡದೆ ಅವಮಾನ

Team Newsnap
1 Min Read

ಕೊಳ್ಳೇಗಾಲ : ತಾಲೂಕಿನ ಮಧುವನಹಳ್ಳಿ ಗ್ರಾಮ ಪಂಚಾಯತ್ ನಲ್ಲಿ 77ನೇ ಸ್ವಾತಂತ್ರ್ಯ ದಿನ ಆಚರಣೆಯ ಸಂದರ್ಭದಲ್ಲಿ ಡಾ. ಬಿ.ಆರ್ .ಅಂಬೇಡ್ಕರ್ ರವರ ಭಾವಚಿತ್ರ ಇಡದೆ ಅವರಿಗೆ ಅವಮಾನ ಮಾಡಿರುವ ಘಟನೆ ನಡೆದಿದೆ.

ಸ್ವಾತಂತ್ರ್ಯ ಹೋರಾಟಗಾರರ ಪ್ರತೀಕವಾಗಿ ಗಾಂಧಿಯವರ ಭಾವಚಿತ್ರ ಮತ್ತು ಡಾ ಬಿ ಆರ್ ಅಂಬೇಡ್ಕರ್ ರ ಭಾವಚಿತ್ರ ಇಡಬೇಕೆಂಬ ಕೇಂದ್ರ ಸರ್ಕಾರದ ಸುತ್ತೋಲೆ ಇದ್ದರೂ ಕೂಡ ಕೆಲ ಅಧಿಕಾರಿಗಳ ಮನಸ್ಥಿತಿ ಎಂತದ್ದು ಎಂಬುದನ್ನು ಇಂತಹ ಸನ್ನಿವೇಶದಲ್ಲಿ ಕಾಣಬಹುದು.

ಸಂವಿಧಾನ ಶಿಲ್ಪಿ ಡಾ ಬಿ.ಆರ್ ಅಂಬೇಡ್ಕರ್ ಅವರ ಭಾವಚಿತ್ರ ಇಟ್ಟು ಅವರಿಗೆ ಗೌರವ ಸಮರ್ಪಣೆ ಮಾಡುವುದರ ಜೊತೆಗೆ ಅವರು ಈ ರಾಷ್ಟ್ರಕ್ಕೆ ಕೊಟ್ಟಿರುವಂತಹ ಕೊಡುಗೆಯನ್ನು ಸವಿಸ್ಥಾರವಾಗಿ ಹೇಳುವ ಸುದಿನ. ಇಂತಹ ಸಂದರ್ಭದಲ್ಲಿ ಬಹುಸಂಖ್ಯಾತ ವಿರೋಧಿಯಾಗಿರುವ ಕೆಲ ಮನುವಾದಿ ಅಧಿಕಾರಿಗಳು ಡಾ. ಬಿ.ಆರ್ ಅಂಬೇಡ್ಕರ್ ರವರು ರಚಿಸಿರುವ ಸಂವಿಧಾನದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು. ಇದನ್ನು ಅರಿಯದೆ ಅವಮಾನ ಮಾಡಿದ್ದಾರೆ. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಪುಣ್ಯತಿಥಿ : ಪ್ರಧಾನಿ ಮೋದಿಯಿಂದ ಗೌರವ ನಮನ

ಆದ್ದರಿಂದ ಮಧುವನಹಳ್ಳಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪುಷ್ಪಲತಾ ಅವರ ಮೇಲೆ ಜಿಲ್ಲಾಧಿಕಾರಿಗಳು ಹಾಗು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಕ್ರಮ ತೆಗೆದುಕೊಂಡು ಅವರನ್ನು ಅಮಾನತ್ತು ಗೊಳಿಸಬೇಕೆಂದು ಮಧುವನಹಳ್ಳಿ ಗ್ರಾಮದ ಯುವಕರು ಹಾಗು ವಿವಿಧ ಸಂಘ ಸಂಸ್ಥೆಗಳು ಒತ್ತಾಯಿಸಿದ್ದಾರೆ.

ವರದಿ :- ನಾಗೇಂದ್ರ ಪ್ರಸಾದ್

Share This Article
Leave a comment