ರೂಪದರ್ಶಿಯೊಬ್ಬರಿಗೆ ಆಕೆಯ ಪ್ರಿಯತಮನೇ ಬೆದರಿಸಿ, ಪ್ರಜ್ಞೆ ಬರುವ ಜ್ಯೂಸ್ ಕುಡಿಸಿ , ತನ್ನ ಗೆಳೆಯನ ಜೊತೆ ಸೇರಿ 18 ಬಾರಿ ಅತ್ಯಾಚಾರ ನಡೆಸಿ, ಲೈಂಗಿಕ ಕಿರುಕುಳ ನೀಡಿದ ಘಟನೆ ವರದಿಯಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯಶವಂತಪುರ ಪೊಲೀಸ್ ಠಾಣೆಗೆ ಪ್ರಿಯಕರ ಹಾಗೂ ಆತನ ಗೆಳೆಯನ ವಿರುದ್ದ ದೂರು ನೀಡಿದ್ದಾಳೆ.
ಪ್ರಿಯತಮೆಯ ಖಾಸಗಿ ವಿಡಿಯೋ ಗಳನ್ನ ವೈರಲ್ ಮಾಡ್ತಿನಿ ಅಂತ ಬೆದರಿಸಿ ಈ ಇಬ್ಬರು 18 ಬಾರಿ ಲೈಂಗಿಕ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಖಾಸಗಿ ಪೋಟೊ ವಿಡಿಯೋಗಳನ್ನು ತಂದೆ – ತಾಯಿಗೆ ತೋರಿಸ್ತೀನಿ, ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಮಾಡ್ತಿನಿ ಅಂತ ಬೆದರಿಕೆ ಹಾಕಿ ಗೆಳೆಯನ ಜೊತೆ ಸೇರಿ ಪ್ರಿಯತಮೆಯನ್ನು ಆರೋಪಿ ಅತ್ಯಾಚಾರ ಮಾಡಿದ್ದಾನೆ ಎನ್ನಲಾಗಿದೆ.
ಆರೋಪಿ ಪ್ರಮೋದ್ ಎಂಬಾತನನ್ನು ರೂಪದರ್ಶಿ ಪ್ರೀತಿ ಮಾಡುತ್ತಿದ್ದಳು. ಕಳೆದ ವರ್ಷ ಯುವತಿಯ ಹಿಂದೆ ಬಿದ್ದು ಆರೋಪಿ ಪ್ರೀತಿಸಿದ್ದ, ಫೇಸ್ಬುಕ್ ಮೂಲಕ ಮಾಡೆಲ್ ಯುವತಿಯನ್ನು ಸಂಪರ್ಕಿಸಿ ಮೊಬೈಲ್ ನಂಬರ್ ಪಡೆದಿದ್ದ ಎನ್ನಲಾಗಿದೆ.
ಮಾತನಾಡಬೇಕು ಬಾ ಅಂತ ಯಶವಂತಪುರ ಬಳಿಯ ಲಾಡ್ಜ್ ಗೆ ಕರೆಸಿ ಯುವತಿಗೆ ಮತ್ತು ಬರೋ ಜ್ಯೂಸ್ ನೀಡಿದ್ದಾನೆ. ನಂತರ ಯುವತಿ ಜೊತೆಗಿನ ಖಾಸಗಿ ಪೊಟೊಗಳನ್ನು ಚಿತ್ರಿಕರಿಸಿಕೊಂಡಿದ್ದಾನೆ. ಅಲ್ಲದೇ ಸಂತ್ರಸ್ಥ ಮಾಡೆಲ್ ಯುವತಿಯನ್ನು ಬ್ಲಾಕ್ ಮೇಲ್ ಮಾಡಿ ಹಲವು ಬಾರಿ ಆರೋಪಿ ಅತ್ಯಾಚಾರ ಮಾಡಿದ್ದಾನೆ.
ಕರೆದಾಗಲೆಲ್ಲ ಬರಬೇಕು ಇಲ್ಲಂದ್ರೆ ಸೋಷಿಯಲ್ ಮೀಡಿಯಾದಲ್ಲಿ ಪೋಟೊ ವೈರಲ್ ಮಾಡೋದಾಗಿ ಬೆದರಿಕೆ ಹಾಕಿದ್ದಾನೆ.ಅಲ್ಲದೇ ಪ್ರೀತಿಸಿದ ಯುವತಿಗೆ ಗೆಳೆಯನೊಂದಿಗೆ ಸೇರಿ ಅತ್ಯಾಚಾರ ನಡೆಸಿದ್ದಾನೆ.
ಯುವತಿ ಪ್ರಿಯಕರ ಪ್ರಮೋದ್ ತನ್ನ ಗೆಳೆಯ ಧನಂಜಯ ಎಂಬಾತನ ಜೊತೆ ಸೇರಿ ಅತ್ಯಾಚಾರ ಎಸಗಿದ್ದಾನೆ ಎಂದು ತಿಳಿಯಲಾಗಿದೆ.
ನೊಂದ ಯುವತಿ ಯಶವಂತಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ. ಪೊಲೀಸರು ಕೇಸು ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ.
- ಇನ್ಫೋಸಿಸ್ ಕ್ಯಾಂಪಸ್ನಲ್ಲಿ ಚಿರತೆ ಹುಡುಕಾಟ ಸ್ಥಗಿತ
- ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಐತಿಹಾಸಿಕ ಸಾಧನೆ: ಗರಿಷ್ಠ ರನ್ ಹಾಗೂ ಭರ್ಜರಿ ಗೆಲುವು
- ಮಂಡ್ಯ: ಕಾವೇರಿ ನದಿಯಲ್ಲಿ ಮುಳುಗಿ ಬಿ.ಇ ವಿದ್ಯಾರ್ಥಿ ದುರ್ಮರಣ
- ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದಲ್ಲಿ 89 ಉದ್ಯೋಗಾವಕಾಶ
- ಕೆನರಾ ಬ್ಯಾಂಕ್ನಲ್ಲಿ 60 ಹುದ್ದೆಗಳಿಗೆ ಅರ್ಜಿ ಆಹ್ವಾನ
More Stories
ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಐತಿಹಾಸಿಕ ಸಾಧನೆ: ಗರಿಷ್ಠ ರನ್ ಹಾಗೂ ಭರ್ಜರಿ ಗೆಲುವು
KPSC ಪರೀಕ್ಷೆಗಳಲ್ಲಿ ಕನ್ನಡ ದೋಷಗಳ ವಿವಾದ – ಮರುಪರೀಕ್ಷೆಗೆ ಪ್ರಬಲ ಒತ್ತಾಯ
ರಾಜ್ಯ ಸರ್ಕಾರದಿಂದ 11 ಡಿವೈಎಸ್ಪಿ (ಸಿವಿಲ್) ಅಧಿಕಾರಿಗಳ ವರ್ಗಾವಣೆ