January 30, 2026

Newsnap Kannada

The World at your finger tips!

amir

ಅಮೀರ್ ಖಾನ್ ಮಗಳ ಮೇಲೆ ಎಳೆ ವಯಸ್ಸಿನಲ್ಲೇ ಲೈಂಗಿಕ ದೌರ್ಜನ್ಯ

Spread the love

ಬಾಲಿವುಡ್​ನ ಪರ್ಫೆಕ್ಟ್​​ ನಟ ಅಮಿರ್​ ಖಾನ್​, ತನ್ನ ಸೃಜನಾತ್ಮಕ ಕಾರ್ಯದ ಮೂಲಕ ಗುರುತಿಸಿಕೊಂಡಿದ್ದ ಈ ನಟನ ಮಗಳು ಇರಾ ಖಾನ್​.

ಅಪ್ಪನಂತೆ ನೇರ ಮಾತಿನ ಇರಾ ಖಾನ್​ ಇತ್ತೀಚೆಗಷ್ಟೇ ತನಗೆ ಇದ್ದ ಖಿನ್ನತೆ ಖಾಯಿಲೆ ಬಗ್ಗೆ ಮುಕ್ತವಾಗಿ ಮಾತನಾಡಿದ್ದಳು. ಇಂದು ಮತ್ತೆ ತನ್ನ ಜೀವನದಲ್ಲಿ ಆದ ಮತ್ತೊಂದು ಘಟನೆ ಬಗ್ಗೆ ಇರಾ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದಾಳೆ.

ಹೌದು ಸ್ಟಾರ್​ ನಟನ ಮಗಳಾಗಿದ್ದರೂ ಇರಾ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದಳು. ಈ ಬಗ್ಗೆ ಮಾತನಾಡಿರುವ ಇರಾ, ತಾನು 14ನೇ ವಯಸ್ಸಿನವಳಿದ್ದಾಗ ತನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆದಿತ್ತು. ಆ ವಯಸ್ಸಿನಲ್ಲಿ ಈ ಬಗ್ಗೆ ನನಗೆ ಅರ್ಥವಾಗಲಿಲ್ಲ ಎಂದು ತಿಳಿಸಿದ್ದಾಳೆ.

ವ್ಯಕ್ತಿಯೊಬ್ಬ ತನ್ನ ಮೇಲೆ ತಿಳಿದು ಈ ರೀತಿ ದೌರ್ಜನ್ಯ ಎಸಗುತ್ತಿದ್ದಾನೆ ಎಂಬ ಬಗ್ಗೆ ನನಗೆ ಅರ್ಥವಾಗಲಿಲ್ಲ. ಆತ ಉದ್ದೇಶಪೂರ್ವಕವಾಗಿಯೇ ಈ ಕಾರ್ಯ ನಡೆಸಿದ ಎಂದು ನನಗೆ ತಿಳಿಯಲು ವರ್ಷವೇ ಬೇಕಾಯಿತು. ಈ ಬಗ್ಗೆ ತಕ್ಷಣಕ್ಕೆ ನನ್ನ ಪೋಷಕರಿಗೆ ಮೇಲ್​ ಬರೆದು ಪರಿಸ್ಥಿತಿ ತಿಳಿಸಿದೆ. ಇದಾದ ಬಳಿಕ ಈ ಆಘಾತದಿಂದ ಹೊರ ಬಂದೆ. ಈ ಪರಿಸ್ಥಿತಿಯಿಂದ ಹೊರ ಬಂದ ಬಳಿಕ ಈ ಬಗ್ಗೆ ಇದ್ದ ಹೆದರಿಕೆ ನನಗೆ ಹೊರಟುಹೋಯಿತು ಎಂದಿದ್ದಾರೆ ಇರಾ

ಪೋಷಕರ ವಿಚ್ಛೇದನ

ಇದೇ ವೇಳೆ ಪೋಷಕರ ನಡುವಿನ ವಿಚ್ಛೇದನದ ಕುರಿತು ಕೂಡ ಮಾತನಾಡಿದ್ದಾಳೆ. ಇರಾ ಮತ್ತು ಆಕೆ ಸಹೋದರ ಜುನೈದ್​ಗಾಗಿ ಯಾವಾಗಲೂ ಪೋಷಕರು ಬೆಂಬಲವಾಗಿ ನಿಂತಿದ್ದ ಕಾರಣ ಅವರ ವಿಚ್ಛೇದನ ತಮಗೆ ಆಘಾತ ನೀಡಲಿಲ್ಲ. ನಾನು ಚಿಕ್ಕವಳಿದ್ದಾಗ ಅವರು ಬೇರೆಯಾದರೂ ಆದರೆ ಅವರಿಬ್ಬರು ಸೌಹಾರ್ದಯುತವಾಗಿ ಇದ್ದಿದ್ದರಿಂದ ನನಗೆ ಅವರ ವಿಚ್ಛೇದನ ನೋವು ನೀಡಲಿಲ್ಲ. ನಾವು ಇಡೀ ಕುಟುಂಬದ ಸದಸ್ಯರು ಇಂದಿಗೂ ಸ್ನೇಹಿತರಂತೆ ಇದ್ದೇವೆ ಎಂದು ಹೇಳಿದ್ದಾರೆ.

error: Content is protected !!