November 16, 2024

Newsnap Kannada

The World at your finger tips!

BAMBA1

ಅಫ್ಘಾನಿಸ್ತಾನದಲ್ಲಿ ಸರಣಿ ಬಾಂಬ್ ಸ್ಪೋಟ : ಅಮೇರಿಕಾದ 13 ಸೈನಿಕರೂ ಸೇರಿ 73 ಮಂದಿ ಸಾವು

Spread the love
  • ನೀವು ಎಲ್ಲಿದ್ದರೂ ಹುಡುಕಿ ನಿಮ್ಮನ್ನು ಹೊಡೆಯುತ್ತೇವೆ. ಬೆಲೆ ತೆತ್ತುವಂತೆ ಮಾಡುತ್ತೇವೆ
  • ಅಮೇರಿಕಾದ ಅಧ್ಯಕ್ಷ ಜೋ ಬೈಡನ್ ಉಗ್ರರಿಗೆ ಸಂದೇಶ ರವಾನೆ

ಕಳೆದ ರಾತ್ರಿ ಅಫ್ಘಾನಿಸ್ತಾನದಲ್ಲಿ ಉಗ್ರರು ನಡೆಸಿದ ಸರಣಿ ಬಾಂಬ್ ಸ್ಪೋಟದಲ್ಲಿ ಅಮೇರಿಕಾದ 13 ಮಂದಿ ಸೈನಿಕರೂ ಸೇರಿ 73 ಮಂದಿ ಬಲಿಯಾಗಿದ್ದಾರೆ.

ಕಾಬೂಲ್ ಏರ್​ಪೋರ್ಟ್​ ಬಳಿ ಸರಣಿ ಬಾಂಬ್​​​​ ಸ್ಫೋಟಗಳು ಸಂಭವಿಸುತ್ತಲೇ ಇವೆ. ಇಲ್ಲಿಯವರೆಗೂ ಒಟ್ಟು 6 ಕಡೆ ಬಾಂಬ್​ ಸ್ಫೋಟಗೊಂಡಿದೆ ಎಂಬ ಮಾಹಿತಿ ಇದೆ.

ಈ ಭೀಕರ ದಾಳಿಯಲ್ಲಿ ಒಟ್ಟು 73ಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ. 130ಕ್ಕೂ ಹೆಚ್ಚು ಜನರು ತೀವ್ರವಾಗಿ ಗಾಯಗೊಂಡಿದ್ದಾರೆ ಎಂಬುದು ಅಧಿಕೃತ ಮಾಹಿತಿ.

ಆದರೆ 300ಕ್ಕೂ ಅಧಿಕ ಮಂದಿ ಸರಣಿ ಸ್ಫೋಟದಲ್ಲಿ ಮೃತರಾಗಿದ್ದಾರೆ ಅಂತಾ ಅಫ್ಘಾನ್​ನಲ್ಲಿನ ಕೆಲವು ಮಾಧ್ಯಮಗಳು ವರದಿ ಮಾಡಿವೆ.

ಅಮೆರಿಕಾ ಸೇನೆಯ ಒಟ್ಟು 13 ಸೈನಿಕರು ಈ ಭೀಬತ್ಸ ಸ್ಫೋಟದಲ್ಲಿ ಜೀವ ತೆತ್ತಿದ್ದಾರೆ. ಇನ್ನು, 15 ಮಂದಿ ಯುಎಸ್ ಯೋಧರು ಗಂಭೀರವಾಗಿ ಗಾಯಗೊಂಡಿದ್ದಾರೆ ಎನ್ನಲಾಗಿದೆ. ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಈ ಬೆನ್ನಲ್ಲೇ ಕಾಬೂಲ್​ನಲ್ಲಿ ಅಮೆರಿಕ ಸೆಕ್ಯುರಿಟ್ ಅಲರ್ಟ್ ಘೋಷಣೆ ಮಾಡಲಾಗಿದೆ. ಅಮೆರಿಕನ್ನರು ಯಾರೂ ಏರ್​ಪೋರ್ಟ್​ ಬಳಿ ಬರಬೇಡಿ ಎಂದು ಸೂಚನೆ ನೀಡಲಾಗಿದೆ.

ಅಮೇರಿಕಾ ಎಚ್ಚರಿಕೆ :

ನೀವು ಎಲ್ಲಿದ್ದರೂ ಹುಡುಕಿ ನಿಮ್ಮನ್ನು ಹೊಡೆಯುತ್ತೇವೆ. ಬೆಲೆ ತೆತ್ತುವಂತೆ ಮಾಡ್ತೇವೆ ಎಂದು ಅಮೇರಿಕಾದ ಅಧ್ಯಕ್ಷ ಜೋ ಬೈಡನ್ ಉಗ್ರರಿಗೆ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.

ಆಫ್ಘಾನಿಸ್ತಾನದ ಕಾಬೂಲ್​ನಲ್ಲಿ ನಡೆದ ಸರಣಿ ಸ್ಫೋಟಗಳಲ್ಲಿ ಅಮೆರಿಕದ 13 ಸೈನಿಕರು ಸೇರಿ ಒಟ್ಟು 73 ಮಂದಿ ಸಾವನ್ನಪ್ಪಿದ್ದಾರೆ ಎಂಬ ವರದಿ ಬೆನ್ನಲ್ಲೇ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಪತ್ರಿಕಾಗೋಷ್ಠಿಯಲ್ಲಿ ಈ ಕೃತ್ಯ ಎಸಗಿದವರಿಗೆ ಎಚ್ಚರಿಕೆ ಕೊಟ್ಟಿದ್ದಾರೆ.

ಈ ದುಷ್ಕೃತ್ಯವನ್ನ ನಾವು ಎಂದಿಗೂ ಮರೆಯುವುದಿಲ್ಲ.. ಈ ದುಷ್ಕೃತ್ಯ ಎಸಗಿದವರನ್ನು ಸುಮ್ಮನೆ ಬಿಡುವುದಿಲ್ಲ. ಘಟನೆಯ ಹಿಂದಿರುವವರನ್ನು ನಾವು ಕ್ಷಮಿಸುವುದಿಲ್ಲ.. ಈ ಕೃತ್ಯ ಎಸಗಿದವರಿಗೆ ತಕ್ಕ ಪಾಠ ಕಲಿಸುತ್ತೇವೆ ಎಂದು ಹೇಳಿದ್ದಾರೆ.

ಈ ದಾಳಿಯಲ್ಲಿ ಹುತಾತ್ಮರಾದ ಅಮೆರಿಕ ಸೈನಿಕರು ವೀರರು. ದಾಳಿ ನಂತರವೂ ಸ್ಥಳಾಂತರ ಕಾರ್ಯ ಮುಂದುವರೆಯುತ್ತದೆ. ನೀವು ಎಲ್ಲಿದ್ದರೂ ಬಿಡುವುದಿಲ್ಲ.. ಹುಡುಕಿ ಹೊಡೆಯುತ್ತೇವೆ.. ಈ ಕೃತ್ಯಕ್ಕೆ ಬೆಲೆ ಕಟ್ಟುವಂತೆ ಮಾಡುತ್ತೇವೆ. ಈವರೆಗೆ ತಾಲಿಬಾನ್ ಮತ್ತು ಇಸ್ಲಾಮಿಕ್ ಸ್ಟೇಟ್ಸ್ ಕೈ ಜೋಡಿಸಿ ಈ ಕೃತ್ಯ ನಡೆಸಿರುವ ಬಗ್ಗೆ ಮಾಹಿತಿ ಕಲೆ ಹಾಕುತ್ತಿರುವುದಾಗಿ ಜೋ ಬೈಡನ್​ ಹೇಳಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!