January 12, 2025

Newsnap Kannada

The World at your finger tips!

7 memb

ಕಾಬೂಲ್‌ ನ ವಿಮಾನ ನಿಲ್ದಾಣದ ಬಳಿ ನೂಕು ನುಗ್ಗಲು : ಏಳು ಅಫ್ಘಾನ್ ನಾಗರಿಕರ ಸಾವು

Spread the love

ತಾಲಿಬಾನ್ ದಬ್ಬಾಳಿಕೆ, ಹಿಂಸೆ ತಡೆಯಲಾರದೇ ಪಲಾಯನ ಮಾಡುವವರ ಸಂಕಷ್ಟದ ನಡುವೆ ಕಾಬೂಲ್‌ ನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಜನಸಂದಣಿಯಲ್ಲಿ ಏಳು ಅಫ್ಘಾನ್ ನಾಗರಿಕರು ಸಾವನ್ನಪ್ಪಿದ್ದಾರೆ.‌ ಈ ವಿಷಯವನ್ನು ಬ್ರಿಟಿಷ್ ಮಿಲಿಟರಿ ಹೇಳಿದೆ.

ಅಲ್ಲಿನ ಪರಿಸ್ಥಿತಿಗಳು ಅತ್ಯಂತ ಸವಾಲಾಗಿವೆ, ಆದರೆ ಪರಿಸ್ಥಿತಿಯನ್ನು ಸಾಧ್ಯವಾದಷ್ಟು ಸುರಕ್ಷಿತವಾಗಿ ಮತ್ತು ಸುರಕ್ಷಿತವಾಗಿ ನಿರ್ವಹಿಸಲು ನಾವು ಪ್ರಯತ್ನ ಮಾಡುತ್ತಿದ್ದೇವೆ” ಎಂದು ರಕ್ಷಣಾ ಸಚಿವಾಲಯವು ಹೇಳಿಕೆ ನೀಡಿದೆ.

ಈ ನಡುವೆ ಭಾರತ ಅಫ್ಘಾನ್ ನಲ್ಲಿ ಸಿಲುಕಿರುವ ಭಾರತೀಯರು ಸೇರಿದಂತೆ ಹಲವರನ್ನು ತನ್ನ ವಾಯುಪಡೆ ವಿಮಾನಗಳ ಮೂಲಕ ಕರೆತರುವ ಕೆಲಸ ಮಾಡುತ್ತಿದೆ. ಇಂದು ಬೆಳಗ್ಗೆ 107 ಭಾರತೀಯರು ಸೇರಿ 168 ಮಂದಿ ಕಾಬೂಲ್ ನಿಂದ ವಾಯುಪಡೆ ವಿಮಾನದಲ್ಲಿ ಗಾಜೀಯಾಬಾದ್ ನ ಹಿಂಡನ್ ವಿಮಾನ ನಿಲ್ದಾಣದಲ್ಲಿ ಬಂದಿಳಿದರು.

Copyright © All rights reserved Newsnap | Newsever by AF themes.
error: Content is protected !!