ಕರುಳಿನ ಆರೋಗ್ಯ ಚೇತರಿಕೆಗೆ ಕರಿ ಎಳ್ಳು ರಾಮಬಾಣ !

Team Newsnap
4 Min Read

ಎಳ್ಳು ನೋಡಲು ಪುಟ್ಟದಾಗಿದ್ದು ಕಟುವಾದ ಯಾವ ವಾಸನೆಯೂ ಇಲ್ಲದ, ತನ್ನೊಡನೆ ಬೆರೆತ ಇತರ ವಸ್ತುಗಳ ಪರಿಮಳವನ್ನು ತನ್ನೊಡನೆ ಹೀರಿಕೊಳ್ಳುವ ವಿಶೇಷಗುಣ ವಿರುವ ಚಕ್ಕುಲಿ-ಕೋಡುಬಳೆಯಂತಹ ತಿಂಡಿಗಳಿರಲಿ ಅಥವಾ ಯಾವುದೇ ಸಿಹಿಯಾದ ಆಹಾರ ಪದಾರ್ಥಗಳಾಗಲಿ ಅದಕ್ಕೊಂದು ಚೂರು ಎಳ್ಳು ಹಾಕಿದರೆ ಸಾಕು ಅದರ ರುಚಿನೇ ಬೇರೆ. ಹೆಚ್ಚಾಗಿ ನಾವು ಎಳ್ಳು ಬಳಕೆ ಮಾಡುತ್ತೇವೆಯಾದರೂ ಇದರ ಆರೋಗ್ಯಕರ ಪ್ರಯೋಜನಗಳನ್ನು ಅಷ್ಟಾಗಿ ತಿಳಿದಿಲ್ಲ.

ಪೌಷ್ಟಿಕಾಂಶಗಳ ಅಗರವಾಗಿರುವ ಎಳ್ಳಿನಲ್ಲಿ ಪ್ರೋಟೀನ್, ಜಿಂಕ್ ಮತ್ತು ಐರನ್ ಹೆಚ್ಚಿದ್ದು, ಇದರಲ್ಲಿ ಹೆಚ್ಚು ಆ್ಯಂಟಿ ಆಕ್ಸಿಡೆಂಟ್ಗಳಿದ್ದು, ಜೀವಕೋಶದ ಸಮಸ್ಯೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ. 30 ಜನರ ಮೇಲೆ ನಡೆಸಿದ ಒಂದು ಸಣ್ಣ ಅಧ್ಯಯನವು 4 ವಾರಗಳ ಕಾಲ ಪ್ರತಿದಿನ 2.5 ಗ್ರಾಂ ಕಪ್ಪು ಎಳ್ಳು ಸೇವಿಸುವುದರಿಂದ ಸಾಮಾನ್ಯವಾಗಿ ರಕ್ತದೊತ್ತಡದ ಮಟ್ಟವು ಕಡಿಮೆಯಾಗುತ್ತದೆ ಎಂದು ಕಂಡುಹಿಡಿಯಲಾಗಿದೆ.

image 13

ಎಳ್ಳನ್ನು ಆಹಾರದಲ್ಲಿ ಸೇರಿಸೋದ್ರಿಂದ ಆರೋಗ್ಯಕ್ಕಾಗುವ ಲಾಭಗಳು

1) ಎಳ್ಳಿನಲ್ಲಿರುವ ಕ್ಯಾಲ್ಶಿಯಂ ಹಾಗೂ ಝಿಂಕ್‌ ನಮ್ಮ ದೇಹದ ಎಲುಬಿನ ಆರೋಗ್ಯಕ್ಕೆ ಅತ್ಯಂತ ಮುಖ್ಯ. ಚಳಿಗಾಲದಲ್ಲಿ ಮೂಳೆಗಳ ನೋವು ಹೆಚ್ಚಾಗದಂತೆ ಕಾಪಾಡಲೂ ಕೂಡಾ ಎಳ್ಳು ನೆರವಾಗುತ್ತದೆ.

2) ಎಳ್ಳು ರೋಗ ನಿರೋಧಕತೆಯನ್ನೂ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇದರಲ್ಲಿ ವಿಟಮಿನ್‌ ಇ ಹೇರಳವಾಗಿದೆ. ಈ ಗುಣ ಚಳಿಗಾಲಕ್ಕೆ ಅತ್ಯಂತ ಉಪಯುಕ್ತ.

3) ಕೆಲವು ಸಂಶೋಧನೆಗಳ ಪ್ರಕಾರ , ಎಳ್ಳು ಮಧುಮೇಹದ ಮಂದಿಗೂ ಒಳ್ಳೆಯ ಆಹಾರ ಎಂದು ದೃಢಪಡಿಸಿವೆ. ಇದರ ಸೇವನೆಯಿಂದ ಮಧುಮೇಹ ಸಮತೋಲನದಲ್ಲಿರುತ್ತದೆ ಎನ್ನಲಾಗುತ್ತದೆ.

4) ಉಸಿರಾಟದ ತೊಂದರೆ ಇರುವವರು ಎಳ್ಳು ತಿನ್ನುವುದರಿಂದ ಆರೋಗ್ಯವನ್ನು ವೃದ್ಧಿಸಿಕೊಳ್ಳಬಹುದು. ಇದರಲ್ಲಿ ಮ್ಯಾಗ್ನೇಷಿಯಂ ಅಂಶ ಇರುವುದರಿಂದ ದೇಹದಲ್ಲಿ ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುತ್ತದೆ. ಶ್ವಾಸಕೋಶವನ್ನು ಶುದ್ದಿಗೊಳಿಸುವಲ್ಲಿ ಎಳ್ಳಿನ ಪಾತ್ರ ಮುಖ್ಯವಾದದ್ದು.

5) ಎಳ್ಳಿನಲ್ಲಿರುವ ಹೆಚ್ಚಿನ ಫೈಬರ್‌ ಅಂಶ ಆಹಾರ ಬೇಗನೇ ಜೀರ್ಣವಾಗುವಂತೆ ಮಾಡುತ್ತದೆ. ಇದರಿಂದ ದೇಹದ ಕ್ರಿಯೆಗಳು ಸರಾಗವಾಗಿ ನಡೆಯಲು ಸಹಕರಿಸುತ್ತದೆ. ಎಳ್ಳು ಸೇವನೆಯಿಂದ ಸುಸ್ತು ಕಡಿಮೆಯಾಗುವುದಲ್ಲದೆ, ದೇಹದ ಶಕ್ತಿ ಹೆಚ್ಚುತ್ತದೆ.

6) ದೇಹದಲ್ಲಿನ ಅಧಿಕ ಬೊಜ್ಜು ಹಾಗೂ ಕೊಬ್ಬಿನಾಂಶವನ್ನು ಕಡಿಮೆಗೊಳಿಸಲು ಎಳ್ಳು ಸಹಕಾರಿ. ಚರ್ಮ, ಮೂಳೆ, ನರಮಂಡಲ, ಮಾಂಸಖಂಡಗಳನ್ನು ಪೋಷಿಸುತ್ತದೆ. ಎಳ್ಳಿನಲ್ಲಿ ಸಾಕಷ್ಟು ಪ್ರಮಾಣದ ನಾರಿನಾಂಶವಿದ್ದು ಮಲಬದ್ಧತೆ, ಮೂಲವ್ಯಾಧಿಯಂತಹ ಸಮಸ್ಯೆಗಳನ್ನು ನಿವಾರಣೆ ಮಾಡುತ್ತದೆ.

7) ಎಳ್ಳಿನಲ್ಲಿರುವ ಸತುವಿನ ಅಂಶ ಚರ್ಮದ ಆರೊಗ್ಯವನ್ನು ವೃದ್ಧಿಸುವಲ್ಲಿ ಸಹಕಾರಿಯಾಗಿದ್ದು ಸೂರ್ಯನ ಕಿರಣದಿಂದ ಚರ್ಮ ಕಪ್ಪಾಗಿದ್ದರೆ ಎಳ್ಳಿನ ಬಳಕೆ ಫಲಾಕಾರಿಯಾಗಿರುತ್ತದೆ.
ಇದರಿಂದ ಚರ್ಮ ಸುಕ್ಕು ಗಟ್ಟುವುದನ್ನು ತಪ್ಪಿಸಬಹುದು. ಚರ್ಮದ ಮೇಲಿನ ಗಾಯ , ಬಿರುಕು, ಕಲೆಗಳನ್ನು ಹೊಗಲಾಡಿಸಿ ತ್ವಚೆಯನ್ನು ಕೋಮಲಗೊಳಿಸಲು ಎಳ್ಳು ಸಹಕಾರಿ. ಮುಖದಲ್ಲಿ ಕಪ್ಪು ಕಲೆಯನ್ನು ಹೊಗಲಾಡಿಸಲು ಕಪ್ಪು ಎಳ್ಳನ್ನು ಹಾಲಲ್ಲಿ ನೆನೆಸಿ, ರುಬ್ಬಿ ಸಾಯಂಕಾಲ ಮುಖಕ್ಕೆ ಲೇಪಿಸಿಕೊಂಡು ಅರ್ಧಗಂಟೆ ಬಳಿಕ ಮುಖ ತೊಳೆಯಿರಿ ಇದರಿಂದ ತ್ವಚೆ ಇನ್ನಷ್ಟು ಕೋಮಲವಾಗುತ್ತದೆ.

8) ಎಳ್ಳಿನ ಎಣ್ಣೆ ಲೇಪಿಸಿಕೊಳ್ಳುವುದರಿಮದ ಕೂದಲಿನ ಆರೊಗ್ಯವನ್ನು ಕಾಪಾಡಲು ಸಹಕಾರಿ. ದಂತ ಪಂಕ್ತಿಗಳು ಗಟ್ಟಿಯಾಗುವಂತೆ ಮಾಡುತ್ತದೆ. ಏಕಾಗ್ರತೆಗೆ ಹಾಗೂ , ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಎಳ್ಳು ಸೇವನೆ ತುಂಬಾನೆ ಸಹಕಾರಿ.

9) ಪ್ರತಿ ನಿತ್ಯ ಎಳ್ಳು ಪಾನಕ ಸೇವಿಸಿದರೆ ಸಂಧಿಗಳ ನೋವು ಮತ್ತು ಸವೆತವನ್ನು ತಡೆಗಟ್ಟಬಹುದು. ಎಳ್ಳೆಣ್ಣೆಯಲ್ಲಿ ವಿಟಮಿನ್‌ ಇ ಹಾಗೂ ಕೀಟಾಣು, ವೈರಾಣು ನಾಶಕ ಗುಣಗಳಿರುವುದರಿಂದ ವಸಡಿನ ರಕ್ತಸ್ರಾವ, ಹಲ್ಲು ನೋವು, ಹಲ್ಲು ಹುಳುಕಾಗುವಿಕೆ, ಬಾಯಿ ಹುಣ್ಣಿನ ಸಮಸ್ಯೆಯನ್ನು ಸುಲಭವಾಗಿ ಹೋಗಲಾಡಿಸಬಹುದು.

10) ಕಪ್ಪೆಳ್ಳನ್ನು ಹುರಿದು ಹುಡಿ ಮಾಡಿ, ಒಂದು ಲೋಟ ನೀರಿನಲ್ಲಿ ಕುದಿಸಿ ಸ್ವಲ್ಪ ಬೆಲ್ಲ ಸೇರಿಸಿ ದಿನಕ್ಕೊಮ್ಮೆ ಕುಡಿಯುವುದರಿಂದ ಮಹಿಳೆಯರಿಗೆ ಉತ್ತಮ.

11) ನಿತ್ಯವೂ ಒಂದು ಚಮಚ ಎಳ್ಳನ್ನು ನಿಯಮಿತವಾಗಿ ಸೇವಿಸಿದರೆ, ಅಧಿಕ ಕೊಲೆಸ್ಟ್ರಾಲ್ ಮತ್ತು ಹೃದ್ರೋಗಕ್ಕೆ ಕಾರಣವಾಗುವ ಟ್ರೈ ಗ್ಲಿಸರೈಡ್‌ಗಳು ಕಡಿಮೆಯಾಗುತ್ತವೆ.

12) ಒಂದು ಚಮಚ ಎಳ್ಳು ಅಂದರೆ 10 ಗ್ರಾಂ ಎಳ್ಳು ಬೀಜಗಳಲ್ಲಿ 4 ಪ್ರತಿಶತ ಫೈಬರ್ ಹೊಂದಿರುತ್ತದೆ. ಇದು ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸುತ್ತದೆ. ಇದು ಬೊಜ್ಜು ಮತ್ತು ಟೈಪ್ 2 ಮಧುಮೇಹವನ್ನು ಸಹ ತಡೆಯುತ್ತದೆ.

13) ಪ್ರತಿದಿನ ಒಂದು ಚಮಚ ಎಳ್ಳನ್ನು ತಿನ್ನುವುದನ್ನು ಅಭ್ಯಾಸ ಮಾಡಿಕೊಂಡರೆ. ತೂಕ ಇಳಿದು, ದೇಹ ಬಿಗಿಯಾಗುತ್ತದೆ. ಇದು ತಿಂಗಳ ಮಾಸಿಕದ ಸಮಯದಲ್ಲಿ ಬೆನ್ನು ನೋವು ಮತ್ತು ಹೊಟ್ಟೆ ನೋವನ್ನು ತಡೆಯುತ್ತದೆ

14) ಎಳ್ಳು ಮೂಳೆಗಳ ಬೆಳವಣಿಗೆಗೆ ಉತ್ತಮ ಆಹಾರ. ಸಿಪ್ಪೆ ತೆಗೆಯದ ಎಳ್ಳಿನಲ್ಲಿ ಕ್ಯಾಲ್ಸಿಯಂ ಸಮೃದ್ಧವಾಗಿರುತ್ತದೆ.
ಎಳ್ಳು ತಿಂದರೆ ಥೈರಾಯ್ಡ್ ಕಡಿಮೆಯಾಗುತ್ತದೆ ಎನ್ನುತ್ತಾರೆ ವೈದ್ಯರು.

15)ಸೆಲೆನಿಯಮ್ ಥೈರಾಯ್ಡ್ ಹಾರ್ಮೋನುಗಳನ್ನು ಸಮತೋಲನದಲ್ಲಿಡಲು ಸಹಾಯ ಮಾಡುತ್ತದೆ. ಎಳ್ಳು ಅಗತ್ಯವಾದ ಕಬ್ಬಿಣ ಮತ್ತು ವಿಟಮಿನ್ ಬಿ 6 ಅನ್ನು ಪೂರೈಸುತ್ತದೆ.

image 14


ಎಷ್ಟು ಎಳ್ಳು ತಿನ್ನಬೇಕು?
ನಿಯಮಿತ ಚಳಿಗಾಲದಲ್ಲಿ 1 ಚಮಚ ಕಪ್ಪು ಎಳ್ಳು ಅಥವಾ ಬಿಳಿ ಎಳ್ಳನ್ನು ನಮ್ಮ ಆಹಾರದಲ್ಲಿ ಸೇರಿಸಬಹುದು. ಎಳ್ಳು ಶಾಖದ ಗುಣಗಳನ್ನು ಹೊಂದಿರುವುದರಿಂದ ಬೇಸಿಗೆಯಲ್ಲಿ ನೆನೆಸಿ ಸೇವಿಸುವುದು ಒಳ್ಳೆಯದು.


ಎಳ್ಳನ್ನು ಯಾರು ಸೇವಿಸಬಾರದು!!

1)ಎಳ್ಳು ಕೆಲವು ವ್ಯಕ್ತಿಗಳಲ್ಲಿ ಮೂತ್ರಪಿಂಡದ ಕಲ್ಲುಗಳಿಗೆ ಕಾರಣವಾಗಬಹುದು. ಮೂತ್ರಪಿಂಡದ ಕಲ್ಲುಗಳ ಇತಿಹಾಸವನ್ನು ಹೊಂದಿದ್ದವರು , ಹೆಚ್ಚಿನ ಪ್ರಮಾಣದಲ್ಲಿ ಎಳ್ಳು ಬೀಜಗಳನ್ನು ಸೇವಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಉತ್ತಮ.ಭಾರತದಲ್ಲಿ ಚಿನ್ನದ ದರದ ಬಗ್ಗೆ ತಿಳಿಯಿರಿ | Gold Price In India

2) ಎಳ್ಳು ಬೀಜಗಳಲ್ಲಿನ ಹೆಚ್ಚಿನ ಫೈಬರ್ ಅಂಶವು ಕೆಲವು ವ್ಯಕ್ತಿಗಳಲ್ಲಿ ಜೀರ್ಣಕಾರಿ ಅಸ್ವಸ್ಥತೆಯನ್ನು ಉಂಟುಮಾಡಬಹುದು, ವಿಶೇಷವಾಗಿ ಅಧಿಕವಾಗಿ ಸೇವಿಸಿದರೆ. ಸಣ್ಣ ಪ್ರಮಾಣದಲ್ಲಿ ಪ್ರಾರಂಭಿಸಿದರೆ ಒಳಿತು .

sowmya sanath

ಸೌಮ್ಯಾ ಸನತ್ ✍️.

Share This Article
Leave a comment