ಚಿಕ್ಕಮಗಳೂರು : ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರು ಡಿಕೆ ಶಿವಕುಮಾರ್ ವಿರುದ್ಧ ಗಂಭೀರ ಆರೋಪ ಮಾಡಿದ್ದು,9 ವರ್ಷದ ಬಾಲಕಿ ಕಣ್ಣಿಗೆ ಬಟ್ಟೆ ಕಟ್ಟಿ, ಕೂಡಿ ಹಾಕಿ ಆಸ್ತಿ ಬರೆಸಿಕೊಂಡಿದ್ದಾರೆ ಎಂದು ಹೇಳಿದ್ದಾರೆ.
ದೇವೇಗೌಡರು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯಲ್ಲಿ DCM ಡಿಕೆ ಶಿವಕುಮಾರ್ ವಿರುದ್ಧ ಗಂಭೀರ ಆರೋಪ ಮಾಡಿದ್ದು , 1996-97 ರಲ್ಲಿ 9 ವರ್ಷದ ಬಾಲಕಿಯನ್ನ ಕರೆದೋಯ್ದು ಆಸ್ತಿ ಬರೆಸಿಕೊಂಡಿದ್ದಾರೆ.ನನ್ನ ಬಳಿ ಎಲ್ಲಾ ದಾಖಲೆಗಳಿವೆ.ಸುಪ್ರೀಂ ಕೋರ್ಟ್ ನಲ್ಲಿ ಡಿಕೆ ಶಿವಕುಮಾರ್ ಗೆ ಮುಖಭಂಗವಾಗುತ್ತದೆ.
ಅಮೇರಿಕಾದಿಂದ ಹಣ ತಂದಿದ್ದ ವ್ಯಕ್ತಿಗೆ ಆಸ್ತಿ ಬರೆಸಿದರು ಎಂದು ಗಂಭಿರ ಆರೋಪ ಮಾಡಿದ್ದಾರೆ.ರಾಹುಲ್ ಗಾಂಧಿ ರಾಜ್ಯಕ್ಕೆ ಬರುವುದರಿಂದ ಯಾವುದೇ ಪರಿಣಾಮವಿಲ್ಲ : HDK
9 ವರ್ಷದ ಬಾಲಕಿಯನ್ನ ಗಂಗಯ್ಯ ತಿಮ್ಮಯ್ಯ ಎಂಬುವರ ಮನೆ ಪಕ್ಕದಲ್ಲಿಟ್ಟು ,.ಬಾಲಕಿ ಕಣ್ಣಿಗೆ ಬಟ್ಟೆ ಕಟ್ಟಿ 9 ದಿನ ಕೂಡಿ ಹಾಕಿ ,ನಿನ್ನ ಮಗಳು ಬೇಕು ಎಂದರೆ ಆಸ್ತಿ ಬರೆದುಕೊಡು ಬಾಲಕಿ ತಾಯಿಯನ್ನು ಬೆದರಿಸಿ ಆಸ್ತಿ ಬರೆಸಿಕೊಂಡಿದ್ದಾರೆ ಎಂದು ದೇವೇಗೌಡರು ಡಿಕೆ ಶಿವಕುಮಾರ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ .
More Stories
ಎಪಿಗಾಮಿಯಾ ಸಹ-ಸಂಸ್ಥಾಪಕ ರೋಹನ್ ಮಿರ್ಚಂದಾನಿ ನಿಧನ
ಮಾತೃವಾತ್ಸಲ್ಯದ ಗಣಿ, ಪ್ರೇಮಮಯಿ ಜಗನ್ಮಾತೆ ಶಾರದಾದೇವಿ
ಓದಿನ ಮಹತ್ವ