January 11, 2025

Newsnap Kannada

The World at your finger tips!

patna

ಕೋವಿಡ್ ನಿಯಮ ಧಿಕ್ಕರಿಸಿ ಸೀರಿಯಲ್ ಶೂಟಿಂಗ್ – ಶ್ರೀರಂಗಪಟ್ಟಣದಲ್ಲಿ ಸಾರ್ವಜನಿಕರ ಭಾರಿ ವಿರೋಧ

Spread the love

ಶ್ರೀರಂಗಪಟ್ಟಣದ ಯಂಗ್ ಐಲ್ಯಾಂಡ್ ರೆಸಾರ್ಟ್ ನಲ್ಲಿ ಕಳೆದ ರಾತ್ರಿ ಅನಧಿಕೃತವಾಗಿ ನಡೆಯುತ್ತಿದ್ದ ಸೀರಿಯಲ್ ಚಿತ್ರೀಕರಣಕ್ಕೆ ಸಾರ್ವಜನಿಕರೇ ಅಡ್ಡಿ ಪಡಿಸಿ ಘಟನೆ ಜರುಗಿದೆ.‌

ಶ್ರೀರಂಗಪಟ್ಟಣದ ಹೊರವಲಯದಲ್ಲಿರುವ ಯಂಗ್ ಐಲ್ಯಾಂಡ್ ರೆಸಾರ್ಟ್ ನಲ್ಲಿ ತಡರಾತ್ರಿ ಯಾರಿಗೂ ತಿಳಿದ ಹಾಗೆ ಸಿರೀಯಲ್ ಚಿತ್ರೀಕರಣ ನಡೆಯುತ್ತಿತ್ತು.‌

ಲಾಕ್ಡೌನ್ ಸಂದರ್ಭದಲ್ಲೂ ಹೆಚ್ಚಿನ ಜನರು ಸೇರಿಸಿ ನಡೆಯುತ್ತಿದ್ದ ಸಿರೀಯಲ್ ನ ಚಿತ್ರೀಕರಣದ ಸ್ಥಳಕ್ಕೆ
ಸ್ಥಳೀಯ ಸಾರ್ವಜನಿಕರು ರೆಸಾರ್ಟ್ ಗೆ ತೆರಳಿ ಸೀರಿಯಲ್ ಚಿತ್ರೀಕರಣಕ್ಕೆ ಅಡ್ಡಿ ಮಾಡಿದರು.

patna1

ತಡರಾತ್ರಿ ಚಿತ್ರೀಕರಣ ತಂಡದೊಂದಿಗೆ ಸ್ಥಳೀಯ ಸಾರ್ವಜನಿಕರ ಮಾತಿನ ಚಕಮಕಿಯೂ ನಡೆದಿದೆ.

ಸ್ಥಳಕ್ಕೆ ಪೊಲೀಸರ ಭೇಟಿ, ಎರಡು ಕಡೆಯವರನ್ನು ಸಮಾಧಾನ ಪಡಿಸಿ ಶಾಂತಿ ಸಂಧಾನ ಮಾಡಿದರು.

ಕೊರೋನಾ ಮಾರ್ಗಸೂಚಿಗಳನ್ನು ಧಿಕ್ಕರಿಸಿ ಅನಧಿಕೃತವಾಗಿ ಚಿತ್ರೀಕರಣ ಮಾಡಿದ ಬಗ್ಗೆ ಪೊಲೀಸರು ಮತ್ತು ತಾಲೂಕು ಆಡಳಿತ ಯಾವುದೇ ದೂರು ದಾಖಲು ಮಾಡಿಲ್ಲ. ಸ್ಥಳೀಯ ಆಡಳಿತ ವಿರುದ್ದ ಸಾರ್ವಜನಿಕರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!