ಐತಿಹಾಸಿಕ ಶ್ರೀರಂಗಪಟ್ಟಣ ದಸರಾ ಮಹೋತ್ಸವವು ಸೆಪ್ಟೆಂಬರ್ 28ರಿಂದ ಅ. 2ರವರೆಗೆ ಐದು ದಿನಗಳ ಕಾಲ ನಡೆಯಲಿದೆ.
ಈ ಬಾರಿಯ ಶ್ರೀರಂಗಪಟ್ಟಣದ ದಸರಾ ಮಹೋತ್ಸವ ವಿಜೃಂಭಣೆಯಿಂದ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ ಎಂದು ಅಬಕಾರಿ ಸಚಿವರು ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ತಿಳಿಸಿದರು.
ಜಿಲ್ಲಾ ಪಂಚಾಯತ್ ಕಾವೇರಿ ಸಭಾಂಗಣದಲ್ಲಿ ಶ್ರೀರಂಗಪಟ್ಟಣದ ದಸರಾ ಮಹೋತ್ಸವ ಆಚರಣೆ ಸಂಬಂಧ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಸಚಿವರು ಮಾತನಾಡಿದರು.
ಬನ್ನಿಮಂಟಪ, ಕಲ್ಯಾಣಿಗಳಲ್ಲಿ ಹಾಗೂ ಎಲ್ಲಾ ಐತಿಹಾಸಿಕ ಸ್ಥಳಗಳಲ್ಲಿ ಸಂಪೂರ್ಣ ಸ್ವಚ್ಛತೆ ಮಾಡಲು ಸೂಚಿಸಿದರು.ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ ಹಾಗೂ ಇನ್ನಿತರ ಮೂಲಸೌಕರ್ಯಗಳ ಕುರಿತು ವ್ಯವಸ್ಥಿತವಾಗಿ ಕ್ರಮವಹಿಸಿ ಎಂದರು.
ಕಳೆದ ಬಾರಿ ದಸರಾ ಆಚರಣೆಗಾಗಿ ಮೈಸೂರು ಜಿಲ್ಲಾಧಿಕಾರಿಗಳ ಕಚೇರಿಯಿಂದ 50 ಲಕ್ಷ ರು ಪ್ರವಾಸೋದ್ಯಮ ಇಲಾಖೆಯಿಂದ 25 ಲಕ್ಷ ರೂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ 20 ಲಕ್ಷ ರೂ ಹಾಗೂ ಇತರೆ ಸಂಸ್ಥೆಗಳಿಂದ ಅನುದಾನದ ಮೂಲಕ ಒಂದು ಕೋಟಿ ಐದು ಲಕ್ಷ ಅನುದಾನದಲ್ಲಿ 3 ದಿನಗಳ ಕಾಲ ವಿಜೃಂಭಣೆಯಿಂದ ಆಚರಿಸಲಾಗಿತ್ತು.
ಈ ಬಾರಿ ಮೈಸೂರು ಜಿಲ್ಲಾಧಿಕಾರಿಗಳಿಂದ ಒಂದು ಕೋಟಿ ರೂ ಅನುದಾನ ಬಿಡುಗಡೆಯಾಗಿದೆ ಇತರೆ ಇಲಾಖೆಯಿಂದ ಅನುದಾನ ಪಡೆದು 5 ದಿನಗಳ ಕಾಲ ವಿಜೃಂಭಣೆಯಿಂದ ದಸರಾ ಆಚರಿಸಲು ರೂಪು ರೇಷೆ ಸಿದ್ಧಪಡಿಸಿಕೊಳ್ಳಿ ಎಂದರು.
ದಸರಾದಲ್ಲಿ ಆಯೋಜಿಸುವ ಕಾರ್ಯಕ್ರಮ ವೈವಿಧ್ಯಮಯವಾಗಿರಲಿ. ಜನರಿಗೆ ಮಾಹಿತಿ ಹಾಗೂ ಮನರಂಜನೆ ಎರಡು ಸಹ ದೊರಕಬೇಕು. ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಿ ಉದ್ಘಾಟನೆಯ ದಿನದಂದು 3 ರಿಂದ 5 ಆನೆಗಳನ್ನು ಕರೆತರಬೇಕು, ಪೊಲೀಸ್ ಬ್ಯಾಂಡ್ ವ್ಯವಸ್ಥೆ, ಸ್ಥಬ್ಧಚಿತ್ರಗಳು ವಿನೂತನವಾಗಿ ರಚಿಸಿ ಎಂದರು.ಬೆಂಗಳೂರು ಮೈಸೂರು ಹೆದ್ದಾರಿ ಮಳೆ: ಸುಗಮ ಸಂಚಾರಕ್ಕೆ ಪೊಲೀಸರ ಸಾಥ್
ದಸರಾ ಕಾರ್ಯಕ್ರಮ ಆಯೋಜನೆಗೆ ಯೋಗ ದಸರಾ, ರೈತ ದಸರಾ, ಕ್ರೀಡಾ ದಸರಾ, ಮಕ್ಕಳ ದಸರಾ, ಮಹಿಳಾ ದಸರಾ,ದಸರಾ ಕ್ರೀಡಾ ದಸರಾ, ದೀಪಾಲಂಕಾರ ಕುರಿತಂತೆ ವಿವಿಧ ಸಮಿತಿಗಳನ್ನು ರಚಿಸಿ ಯೋಜನೆ ಹಾಗೂ ವೇಳಪಟ್ಟಿಯನ್ನು ಸಿದ್ಧಪಡಿಸಿಕೊಳ್ಳಿ. ವಿವಿಧ ಇಲಾಖೆಗಳಿಂದ ಅನುದಾನ ಅಥವಾ ಇತರೆ ಸಹಕಾರ ಬೇಕಿದ್ದಲ್ಲಿ ಖುದ್ದಾಗಿ ಸಚಿವರೊಂದಿಗೆ ಚರ್ಚಿಸಲಾಗುವುದು ಎಂದರು.
ತಕ್ಷಣ ಪರಿಹಾರ ಕೊಡಿ :
ಜಿಲ್ಲೆಯಲ್ಲಿ ಮಳೆಯಿಂದ ಉಂಟಾಗುವ ಹಾನಿ ಪ್ರದೇಶಗಳಿಗೆ ಅಧಿಕಾರಿಗಳು ಭೇಟಿ ನೀಡಿ ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ವ್ಯವಸ್ಥೆಗಳನ್ನು ಮಾಡಿಕೊಡಬೇಕು. ಮಳೆ ಹಾನಿಗೆ ಸಂಬಂಧಿಸಿದ ವರದಿಗಳನ್ನು ಸಕಾಲಕ್ಕೆ ತಲುಪಿಸಿ ಪರಿಹಾರವನ್ನು ಸರ್ಕಾರ ನಿಗಧಿ ಪಡಿಸಿರುವಂತೆ ಪಾವತಿಸಿ ಎಂದರು.
ಶ್ರೀರಂಗಪಟ್ಟಣ ಶಾಸಕ ರವೀಂದ್ರ ಶ್ರೀಕಂಠಯ್ಯ ಅವರು ಮಾತನಾಡಿ ಈ ಬಾರಿ ದಸರಾ ಉದ್ಘಾಟನೆಗೆ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಅವರನ್ನು ಅಥವಾ ಸಿ.ಎಫ್.ಟಿ.ಆರ್.ಐ ನಿರ್ದೇಶಕರನ್ನು ಆಹ್ವಾನಿಸಬೇಕು. ದಸರಾದಲ್ಲಿ ಕಾರ್ಯನಿರ್ವಹಿಸುವ ಗುತ್ತಿಗೆದಾರರಿಗೆ ಬಿಲ್‌ಗಳ ಪಾವತಿ ನಿಧಾನವಾಗುತ್ತದೆ. ಈ ಬಾರಿ ತಡವಾಗಬಾರದು. ಕಲಾವಿದರು ಕಾರ್ಯಕ್ರಮಗಳನ್ನು ನೀಡಿದ ತಕ್ಷಣ ಅವರಿಗೆ ಸಂಭಾವನೆ ಪಾವತಿಸಿ ಎಂದರು.ಹಿಜಬ್ ನಿಷೇಧ: ಅರ್ಜಿದಾರರ ವಿರುದ್ಧ ಸುಪ್ರೀಂಕೋರ್ಟ್ ಗರಂ – ರಾಜ್ಯ ಸರ್ಕಾರ, ಅರ್ಜಿದಾರರಿಗೆ ನೋಟಿಸ್
ಜಿಲ್ಲಾಧಿಕಾರಿ ಎಸ್.ಅಶ್ವತಿ ಅವರು ಸಚಿವರ ಸಭೆಯ ನಂತರ ಅಧಿಕಾರಿಗಳ ಸಭೆ ನಡೆಸಿ ರೈತ ದಸರಾ ದಲ್ಲಿ ಹಾಲು ಕರೆಯುವ ಸ್ಪರ್ಧೆ ರಾಸುಗಳ ಸ್ಪರ್ಧೆ ಹಾಗೂ ಇನ್ನಿತರಗಳನ್ನು ಸ್ಪರ್ಧೆಗಳನ್ನು ಏರ್ಪಡಿಸುವುದು ಕೃಷಿ ತೋಟಗಾರಿಕೆ,ಮೀನುಗಾರಿಕೆ, ರೇಷ್ಮೆ ಇಲಾಖೆಗಳು ರೈತರಿಗೆ ಉಪಯೋಗವಾಗುವಂತಹ ಕರಕುಶಲ ತಯಾರಿಕೆಗಳ ತರಬೇತಿ ಹಾಗೂ ವಸ್ತು ಪ್ರದರ್ಶನವನ್ನು ಮಾಡಲು ಸ್ಥಳಗಳನ್ನು ನಿರ್ಮಾಣ ಮಾಡಿ ರೈತರಿಗೆ ಕೃಷಿಯ ಬೆಳೆಗಳ ಬಗ್ಗೆ ಹೊಸ ಹೊಸ ಆವಿಷ್ಕಾರಗಳನ್ನು ಪರಿಚಯಿಸಿ ಎಂದು ಹೇಳಿದರು.
ಕ್ರೀಡಾ ಇಲಾಖೆ ವತಿಯಿಂದ ಚೆಸ್ ಕುಸ್ತಿ ವಾಲಿಬಾಲ್ ಕಬಡ್ಡಿ ವಾಟರ್ ಸ್ಪೋರ್ಟ್ಸ್ ಬೋಟಿಂಗ್ ಹೀಗೆ ವಿವಿಧ ಕ್ರೀಡೆಗಳನ್ನು ಪುರುಷರಿಗೆ ಮತ್ತು ಮಹಿಳೆಯರಿಗೆ ಪ್ರತ್ಯೇಕವಾಗಿ ಕ್ರೀಡಾ ಸ್ಪರ್ಧೆಗಳನ್ನು ಏರ್ಪಡಿಸುವುದು. ವಿಶೇಷವಾಗಿ ಮಕ್ಕಳ ದಸರಾದಲ್ಲಿ ಅಣುಕು ಪ್ರದರ್ಶನ, ವಿಚಾರ ಸಂಕಿರಣ ಸಂಸ್ಕೃತ ಕಾರ್ಯಕ್ರಮ ಹಾಗೂ ಮಹಿಳಾ ದಸರಾದಲ್ಲಿ ರಂಗೋಲಿ ಸ್ಪರ್ಧೆ ವಿವಿಧ ಶೈಲಿಯ ನೃತ್ಯಗಳು ಹಾಗೂ ಇನ್ನಿತರೆ ಕಾರ್ಯಕ್ರಮಗಳನ್ನು ಪ್ರಸ್ತುತ ಪಡಿಸಲು ಸಿದ್ಧತೆ ಮಾಡಿಕೊಳ್ಳಿ ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಪೂಜಾ ಕುಣಿತ ಜಿಲ್ಲೆಯಲ್ಲಿ ಈ ಬಾರಿ ಪೂಜಾಕುಣಿತ ಸ್ಪರ್ಧೆ ಆಯೋಜಿಸಬೇಕು. ವಿವಿಧ ಕಾಲ ತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮವನ್ನು ನಡೆಸುವಂತೆ ಸಲಹೆ ನೀಡಿದರು. ದಸರಾ ಮಹೋತ್ಸವಕ್ಕೆ ಎಲ್ಲ ಇಲಾಖೆ ಅಧಿಕಾರಿಗಳು ತಮ್ಮ ಇಲಾಖೆಯಲ್ಲಿ ಸಂಬಂಧ ಪಟ್ಟಂತಹ ಕಾರ್ಯಕ್ರಮಗಳ ಕುರಿತು ಸಂಪೂರ್ಣ ಮಾಹಿತಿಯನ್ನು ಪಟ್ಟಿ ಮಾಡಿ ವರದಿ ನೀಡಿ ಎಂದರು.
ಸಭೆಯಲ್ಲಿ ವಿಧಾನಸಭಾ ಶಾಸಕರಾದ ಎಂ.ಶ್ರೀನಿವಾಸ್, ಸುರೇಶ್ ಗೌಡ, ಜಿ.ಪಂ. ಸಿಇಒ ಶಾಂತ ಎಲ್.ಹುಲ್ಮನಿ, ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್, ಪಾಂಡವಪುರ ಉಪವಿಭಾಗಾಧಿಕಾರಿ ಬಿ.ಸಿ.ಶಿವಾನಂದ ಮೂರ್ತಿ, ಧಾರ್ಮಿಕ ಕ್ರಿಯಾ ಸಮಿತಿಯ ಸಂಸ್ಥಾಪಕ ಬಾನುಪ್ರಕಾಶ್ ಶರ್ಮಾ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
- ಎಪಿಗಾಮಿಯಾ ಸಹ-ಸಂಸ್ಥಾಪಕ ರೋಹನ್ ಮಿರ್ಚಂದಾನಿ ನಿಧನ
- ಮಾತೃವಾತ್ಸಲ್ಯದ ಗಣಿ, ಪ್ರೇಮಮಯಿ ಜಗನ್ಮಾತೆ ಶಾರದಾದೇವಿ
- ಜನವರಿ 23, 24, 25 ರಂದು ಅಂತರಾಷ್ಟ್ರೀಯ ಸಿರಿಧಾನ್ಯ ಮೇಳ ಜರುಗಲಿದೆ: ಎನ್ ಚಲುವರಾಯಸ್ವಾಮಿ
- ಓದಿನ ಮಹತ್ವ
- ಕುಂಭಮೇಳ ಪ್ರಯಾಣಿಕರಿಗೆ ಸುವಾರ್ತೆ: ಮೈಸೂರು-ಪ್ರಯಾಗ್ ರಾಜ್ ವಿಶೇಷ ರೈಲು ಸೇವೆ
- ಮಂಡ್ಯದಲ್ಲಿ ಭೀಕರ ಅಪಘಾತ: ಕಾರು-ಲಾರಿ ಡಿಕ್ಕಿಯಾಗಿ ಮೂವರು ವಿದ್ಯಾರ್ಥಿ ಸಾವು
More Stories
ಎಪಿಗಾಮಿಯಾ ಸಹ-ಸಂಸ್ಥಾಪಕ ರೋಹನ್ ಮಿರ್ಚಂದಾನಿ ನಿಧನ
ಮಾತೃವಾತ್ಸಲ್ಯದ ಗಣಿ, ಪ್ರೇಮಮಯಿ ಜಗನ್ಮಾತೆ ಶಾರದಾದೇವಿ
ಓದಿನ ಮಹತ್ವ