November 16, 2024

Newsnap Kannada

The World at your finger tips!

dasara chalane1

ಮೈಸೂರು ದಸರಾ ಮಹೋತ್ಸವಕ್ಕೆ ವಿದ್ಯುಕ್ತ ಚಾಲನೆ ನೀಡಿದ ಎಸ್ ಎಂ ಕೃಷ್ಣ

Spread the love

ವಿಶ್ವವಿಖ್ಯಾತ, ಐತಿಹಾಸಿಕ ನಾಡಿನ ಹೆಮ್ಮೆಯ ‘ಮೈಸೂರು ದಸರಾ -2021’ರ ಮಹೋತ್ಸವಕ್ಕೆ ಹಿರಿಯ ಮುತ್ಸದ್ದಿ, ಮಾಜಿ ಸಿಎಂ ಎಸ್.ಎಂ.ಕೃಷ್ಣ 411ನೇ ನಾಡಹಬ್ಬ ದಸರಾ ಹಬ್ಬಕ್ಕೆ ಚಾಲನೆ ನೀಡಿದರು.

dasara chalane

ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ, ಚಾಮುಂಡಿ ಬೆಟ್ಟದಲ್ಲಿ ತಾಯಿ ಚಾಮುಂಡೇಶ್ವರಿಗೆ ದೀಪಾ ಬೆಳಗುವ ಮೂಲಕ ಐತಿಹಾಸಿಕ ದಸರಾ ಮಹೋತ್ಸವಕ್ಕೆ ಗುರುವಾರ ಬೆಳಿಗ್ಗೆ 8.26 ಪುಷ್ಪಾಚ೯ನೆ ಮಾಡಿ ಚಾಲನೆ ನೀಡಿದರು.

ದಸರಾ ಉತ್ಸವ ಕ್ಕೆ ಚಾಲನೆ ನೀಡಿ ಮಾತನಾಡಿದ ಎಸ್ ಎಂ ಕೃಷ್ಣ ,
ಮನುಕುಲಕ್ಕೆ ಬಂದಿರುವ ದೊಡ್ಡ ಗಂಡಂತಾರ ಕೊರೋನಾ ಅನ್ನು ಸಂಪೂಣ೯ವಾಗಿ ತೊಲಗಿಸಿ, ಜನರನ್ನು ರಕ್ಷಣೆ ಮಾಡುವಂತೆ ಮೈಸೂರಿನ ಅಧಿದೇವತೆ ತಾಯಿ ಚಾಮುಂಡೇಶ್ವರಿ ಮಾತೆಯಲ್ಲಿ ಪ್ರಾಥಿ೯ಸಿರುವುದಾಗಿ ಹೇಳಿದರು.

ತಮ್ಮ ಹಾಗೂ ಮೈಸೂರಿನ ನಡುವೆ ಇದ್ದ ಅವಿನವಭಾವ ಸಂಬಂಧದವನ್ನು ಸ್ಮರಿಸಿದ ಕೃಷ್ಣ, ಬಾಲ್ಯದಲ್ಲಿ ತಾವು ಕಲಿತ ಶಾಲೆ ಕಾಲೇಜು ದಿನಗಳ ಬಗ್ಗೆಯೂ ವಿವರವಾಗಿ ಹೇಳಿ, ತಮ್ಮ ತಂದೆ ಎಸ್ ಸಿ ಮಲ್ಲಯ್ಯನವರು ಪ್ರಜಾಪ್ರತಿನಿಧಿ ಸದಸ್ಯರಾಗಿದ್ದರಿಂದ ಮೈಸೂರು ದಸರಾ ವೈಭವವನ್ನು ಹತ್ತಿರದಿಂದ ನೋಡಿಕೊಂಡು ಬಂದ ನನಗೆ ಈ ಬಾರಿ ದಸರಾ ಉದ್ಘಾಟನೆಯ ಅವಕಾಶ ನೀಡಿದ ಸಿಎಂಗೆ ಧನ್ಯವಾದ ಹೇಳಿದರು.

ಈ ಕಾರ್ಯಕ್ರಮದಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ, ಸಚಿವರಾದ ಎಸ್.ಟಿ.ಸೋಮಶೇಖರ್, ಆರ್.ಅಶೋಕ್, ಬಿ.ಸಿ.ಪಾಟೀಲ್, ಶಿವರಾಂ ಹೆಬ್ಬಾರ್, ಸುನೀಲ್ ಕುಮಾರ್, ನಾರಾಯಣ ಗೌಡ, ಭೈರತಿ ಬಸವರಾಜು, ಶಶಿಕಲಾ ಜೊಲ್ಲೆ, ಶಾಸಕರಾದ ಜಿಟಿಡಿ, ರಾಮದಾಸ್, ನಾಗೇಂದ್ರ, ಬೆಲ್ಲದ್, ತನ್ವೀರ್ ಸೇಠ್, ಹೆಚ್​.ವಿಶ್ವನಾಥ್, ಸಂಸದ ಪ್ರತಾಪ್ ಸಿಂಹ, ಜಿಲ್ಲಾಧಿಕಾರಿ, ಪೊಲೀಸ್ ಆಯುಕ್ತರು ಸೇರಿ ನಿಗಮ ಮಂಡಳಿ ಅಧ್ಯಕ್ಷರ ಹಲವರ ಗಣ್ಯರು ಉಪಸ್ಥಿತರಿದ್ದರು.

Copyright © All rights reserved Newsnap | Newsever by AF themes.
error: Content is protected !!