December 22, 2024

Newsnap Kannada

The World at your finger tips!

arnab

Image source : Google / Picture by : twitter.com

ಹಿರಿಯ ಪತ್ರಕರ್ತ ಅರ್ನಬ್ ಗೋಸ್ವಾಮಿ ಬಂಧನ

Spread the love

ರಿಪಬ್ಲಿಕ್ ಟಿವಿ ಪ್ರಧಾನ ಸಂಪಾದಕ ಅರ್ನಬ್ ಗೋಸ್ವಾಮಿ ಅವರನ್ನು ಬುಧವಾರ ಮುಂಬೈ ಪೋಲೀಸರು ಬಲವಂತವಾಗಿ ವಶಕ್ಕೆ ಪಡೆದಿದ್ದಾರೆ.

ಬೆಳಿಗ್ಗೆ 8 ಗಂಟೆ ವೇಳೆ 20 ಕ್ಕೂ ಹೆಚ್ಚು ಪೋಲೀಸರು ಅರ್ನಬ್ ಮನೆ ನುಗ್ಗಿ
ಹಲ್ಲೆ ಮಾಡಿ, ನಂತರ ಬಲವಂತವಾಗಿ ಪೋಲಿಸ್ ವ್ಯಾನ್ ಹತ್ತಿಸಿಕೊಂಡು ಪೋಲಿಸ್ ಠಾಣೆಯತ್ತ ನಡೆದರು.

ಅರ್ನಬ್ ಮನೆಗೆ ನುಗ್ಗಿದ ಪೋಲೀಸರು ಕ್ರಿಮಿನಲ್ ರೀತಿಯಲ್ಲಿ ನಡೆಸಿಕೊಂಡಿದ್ದಾರೆ. ಪೋಲಿಸ್ ನ್ಯಾಯಾಲಯ ದಿಂದ ಯಾವುದೇ ಸಮನ್ಸ್ ಪಡೆದಿರಲಿಲ್ಲ.
ಟಿ ಆರ್ ಪಿ ಪ್ರಕರಣದ ತನಿಖೆ ಚುರುಕುಗೊಳಿಸಲಾಗಿದೆ.ಈ ಹಿನ್ನೆಲೆಯಲ್ಲಿ ಅರ್ನಬ್ ಬಂಧಿಸಲಾಗಿದೆ ಎಂದು ಪೋಲೀಸರು ತಿಳಿಸಿದ್ದಾರೆ.‌

ಟಿ ಆರ್ ಪಿ ಹಗರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೆ ಒಳಗಾದ ಅರ್ನಾಬ್ ಅವರನ್ನು ರಾಯ್ ಘಡ್ ಗೆ ಪೋಲೀಸರು ಕರೆದುಕೊಂಡು ಹೋಗುತ್ತಿದ್ದಾರೆ. ಇಬ್ಬರು ಮರಾಠಿ ಚಾನಲ್ ನ ಸಂಪಾದಕರನ್ನು ಈಗಾಗಲೇ ಬಂಧಿಸಿದ್ದಾರೆ

ಈ ಪ್ರಕರಣದಲ್ಲಿ ತಾವು ಯಾವುದೇ ತಪ್ಪು ಮಾಡಿಲ್ಲ. ನ್ಯಾಯಾಲಯಕ್ಕೆ ಅಗತ್ಯ ದಾಖಲೆಗಳನ್ನು ಸಲ್ಲಿಸಿದ್ದೇನೆ.
ಆದರೂ ಮಹಾರಾಷ್ಟ್ರ ಸರ್ಕಾರದ ಕುಮ್ಮಕ್ಕಿನಿಂದ ತಮ್ಮನ್ನು ಬಂಧಿಸಲಾಗಿದೆ ಎಂದು ಅರ್ನಬ್ ಹೇಳಿಕೊಂಡಿದ್ದಾರೆ

Copyright © All rights reserved Newsnap | Newsever by AF themes.
error: Content is protected !!