December 19, 2024

Newsnap Kannada

The World at your finger tips!

MLC,congress,Mandya

Senior Congressman, former MLC MD Ramesh Raju passes away ಹಿರಿಯ ಕಾಂಗ್ರೆಸ್ಸಿಗ, ಮಾಜಿ MLC ಎಂ ಡಿ ರಮೇಶ್ ರಾಜು ನಿಧನ #Thenewsnap #Latestnews #Mandya #Congress #MLC #India #News #Bengaluru #mysuru #Karnataka

ಹಿರಿಯ ಕಾಂಗ್ರೆಸ್ಸಿಗ, ಮಾಜಿ MLC ಎಂ ಡಿ ರಮೇಶ್ ರಾಜು ನಿಧನ

Spread the love

ತೀವ್ರ ಅನಾರೋಗ್ಯದಿಂದ ಬಳಲಿದ್ದ ಹಿರಿಯ ಕಾಂಗ್ರೆಸ್ಸಿಗ , ಮಾಜಿ ವಿಧಾನ ಪರಿಷತ್ ನ ಮಾಜಿ ಸದಸ್ಯ ಎಂ.ಡಿ. ರಮೇಶ್ ರಾಜು (80)ಮಂಡ್ಯದಲ್ಲಿ ಸೋಮವಾರ ಬೆಳಿಗ್ಗೆ ನಿಧನರಾದರು

ಎಸ್ ಎಂ ಕೃಷ್ಣ ಗರಡಿಯಲ್ಲಿ ಬೆಳೆದ ರಮೇಶ್ ರಾಜು ಮೈಷುಗರ್ ಅಧ್ಯಕ್ಷರಾಗಿದ್ದರು. ಬಹಳ ವರ್ಷಗಳ ಕಾಲ ಕಾಂಗ್ರೆಸ್ ನ ಡಿಸಿಸಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.ಇದನ್ನು ಓದಿ –ತಮಿಳುನಾಡು ವಿದ್ಯಾರ್ಥಿನಿ ಆತ್ಮಹತ್ಯೆ : ಇಬ್ಬರು ಶಿಕ್ಷಕಿಯರ ಬಂಧನ – ಇನ್ನೂ ಐವರು ವಶಕ್ಕೆ

ಪತ್ನಿ ಶಾರದ ರಮೇಶ್ , ಪುತ್ರಿ , ಪುತ್ರನನ್ನು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ದಿ ಮಾಜಿ ಶಾಸಕ ಜೆ ದೇವಯ್ಯನವರ ಪುತ್ರರಾಗಿರುವ ರಮೇಶ್ ರಾಜು ಕೆರಗೋಡು ವಿಧಾನ ಸಭೆಗೆ ಸ್ಪರ್ಧೆ ಮಾಡಿ ಸೋತಿದ್ದರು. ಎಸ್ ಎಂ ಕೃಷ್ಣ ಮುಖ್ಯಮಂತ್ರಿಯಾಗಿದ್ದ ಕಾಲದಲ್ಲೇ ತಮ್ಮ ಶಿಷ್ಯ ನನ್ನು ಎಂಎಲ್ ಸಿ ನಾಮಕರಣ ಮಾಡಿ ರಾಜಕೀಯ ಚೈತನ್ಯ ತುಂಬಿದ್ದರು.

ಮಂಡ್ಯದ ಸ್ವರ್ಣ ಸಂದ್ರದಲ್ಲಿ ಅರಕೇಶ್ವರ ವಿದ್ಯಾ ಸಂಸ್ಥೆ ಹುಟ್ಟು ಹಾಕಿ ಹಾಲಿ ಆ ಸಂಸ್ಥೆಯ ಅಧ್ಯಕ್ಷರಾಗಿದ್ದರು.

ಇಂದು ಮಧ್ಯಾಹ್ನ 3 ಗಂಟೆ ವೇಳೆಗೆ ಹೊಳಲಿನ ಸಂತೇ ಮೈದಾನದಲ್ಲಿ ಅಂತ್ಯ ಸಂಸ್ಕಾರ ನಡೆಯಲಿದೆ ಎಂದು ಕುಟುಂಬ ಮೂಲಗಳು ಹೇಳಿವೆ.

Copyright © All rights reserved Newsnap | Newsever by AF themes.
error: Content is protected !!