December 31, 2024

Newsnap Kannada

The World at your finger tips!

e7964891 1253 425f 9263 fa6e3529f868

ಸೆಲ್ಫಿ ಅನಾಹುತ : ನದಿ ನೀರಿನ ಪಾಲಾದ ಯುವತಿ

Spread the love

ನದಿ ಬಳಿಯಲ್ಲಿರುವ ಕಲ್ಲು ಬಂಡೆಯ ಬಳಿ ಸೆಲ್ಫಿ ತೆಗೆದುಕೊಳ್ಳಲು ಹೋಗಿ, ನಿಯಂತ್ರಣ ತಪ್ಪಿದ ಯುವತಿ ನೀರು ಪಾಲಾದ ಘಟನೆಯ ವಿಡಿಯೋ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದೆ.

ಈ ಘಟನೆ ನಡೆದಿದ್ದು ಒಡಿಶಾದ ಸುಂದರ್ ಗಡ್ ಜಿಲ್ಲೆಯ ಕುನಕುಂದಾ ನದಿಯ ಬಳಿ. ನಿರುಪಮಾ‌ ಪ್ರಜಾಪತಿ (23) ಎಂಬ ಯುವತಿ ನೀರು ಪಾಲಾಗಿದ್ದಾಳೆ.

ನಿರುಪಮಾ ಜೋರಾಗಿ ಹರಿಯುತ್ತಿರುವ ನದಿ ಬಳಿ ನಿಂತು ಸೆಲ್ಫಿ ತೆಗೆದುಕೊಳ್ಳುವ ವೇಳೆಯಲ್ಲಿ ಪಕ್ಕದಲ್ಲಿ ಬಂದ ವ್ಯಕ್ತಿಯು ನಿಯಂತ್ರಣ ತಪ್ಪಿ, ನಿರುಪಮಾಳ ಮೇಲೆ ಬೀಳುತ್ತಾನೆ. ಭಾರಿ ರಭಸವಾಗಿ ಹರಿಯುತ್ತಿದ್ದ ನದಿಯ ಕಲ್ಲು ಬಂಡೆ ತುದಿಯಲ್ಲಿ ನಿಂತಿದ್ದರಿಂದ ಆಕೆ ನದಿ ಬಿದ್ದು ನೀರಿನಲ್ಲಿ ಕೊಚ್ಚಿ ಹೋಗುತ್ತಾಳೆ.

ನಿರುಪಮಾಳ ಗೆಳತಿ ಹೆಲ್ಪ್ ಎಂದು ಎಷ್ಟೇ ಕೂಗಿಕೊಂಡರೂ ಯಾರೂ ನೆರವಿಗೆ ಹೋಗದೇ ಇರುವುದರಿಂದ ಆಕೆ ಕೊಚ್ಚಿ ಹೋಗುತ್ತಾಳೆ.

ಕೊನೆಗೆ ಅಗ್ನಿಶಾಮಕ ದಳದವರು ನಿರುಪಮಾಳ ಶವ ಶೋಧನೆ ಮಾಡಿದಾಗ ದೂರದಲ್ಲಿನ ಕಲ್ಲು ಬಂಡೆ ಮಧ್ಯೆ ಶವ ಸಿಗುತ್ತದೆ.

Copyright © All rights reserved Newsnap | Newsever by AF themes.
error: Content is protected !!