ಆತ್ಮಗೌರವ ಇದ್ದವರು ಯಾರೂ ಸಹ ಕಾಂಗ್ರೆಸ್‍ಗೆ ವಾಪಸ್ ಹೋಗುವುದಿಲ್ಲ ಎಂದು ಚಿತ್ರದುರ್ಗದಲ್ಲಿ ಬುಧವಾರ ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದರು.
ಚಿತ್ರದುರ್ಗ ಡಿಸಿ ಕಚೇರಿಯಲ್ಲಿ ನಡೆದ ಸಭೆಯ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ವಲಸಿಗ ಸಚಿವರು ಕಾಂಗ್ರೆಸ್‍ಗೆ ವಾಪಸ್ ಆಗುತ್ತಾರೆಂಬ ವಿಚಾರಕ್ಕೆ ಪ್ರತಿಕ್ರಿಯಿಸಿದರು.
ಈ ವೇಳೆ ಸಿದ್ದರಾಮಯ್ಯ ಕಾಂಗ್ರೆಸ್‍ನಲ್ಲಿ ಇರುತ್ತಾರೋ ಇಲ್ಲವೋ ಅನುಮಾನವಿದೆ. ಒಂದು ವೇಳೆ ಸಿದ್ದರಾಮಯ್ಯ ಬಿಜೆಪಿಗೆ ಬಂದರೆ ಸ್ವಾಗತಿಸುತ್ತೇವೆ. ಆದರೆ ಯಾವುದೇ ಕಾರಣಕ್ಕೂ ವಲಸೆ ಬಂದವರು ಯಾರು ಸಹ ಮರಳಿ ಕಾಂಗ್ರೆಸ್ ಸೇರುವ ಪ್ರಶ್ನೆಯಿಲ್ಲ. ಏಕೆಂದರೆ ಈಗಾಗಲೇ ಕಾಂಗ್ರೆಸ್‍ನಲ್ಲಿ ಎಲ್ಲವನ್ನೂ ಅನುಭವಿಸಿ ಬಂದಿದ್ದೇವೆ ಎಂದರು.
ಕಾಂಗ್ರೆಸ್‍ಗೆ ರಾಜೀನಾಮೆ ಕೊಟ್ಟ ಬಳಿಕ ಏನೆಲ್ಲಾ ಟಾರ್ಚರ್ ನೀಡಿದ್ದಾರೆಂದು ನಾವು ಅನುಭವಿಸಿದ್ದೇವೆ. ಈ ಜೀವನದಲ್ಲಿ ಆ ಮಾನಸಿಕ ಹಿಂಸೆಯನ್ನು ಮರೆಯಲ್ಲ. ಹಾಗೆಯೇ ನಿಜವಾದ ಆತ್ಮಗೌರವ ಇದ್ದವರು ಯಾರೂ ಕೂಡ ಕಾಂಗ್ರೆಸ್‍ಗೆ ಹೋಗಲ್ಲ. ಜೊತೆಗೆ ಅಧಿಕಾರಕ್ಕಾಗಿ ಪಕ್ಷದಿಂದ ಪಕ್ಷಕ್ಕೆ ಹೋಗುವುದು ಸರಿಯಲ್ಲ ಎಂದರು.
- ಸಂಕ್ರಾಂತಿ….
- ಆರು ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಮತ್ತು ಕೊಲೆ
- ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ತೆರಳುತ್ತಿದ್ದ ಕಾರು ಅಪಘಾತ
- ರೈತರ ಕ್ರಾಂತಿ ಸಂಕ್ರಾಂತಿ
- ಮಕರ ಸಂಕ್ರಾಂತಿ ಶಾಸ್ತ್ರ ರೀತ್ಯ ಆಚರಣೆ
More Stories
ಸಂಕ್ರಾಂತಿ….
ಆರು ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಮತ್ತು ಕೊಲೆ
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ತೆರಳುತ್ತಿದ್ದ ಕಾರು ಅಪಘಾತ